ರೆಟ್ರೋ ಲುಕ್, ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್: ಜನ್ಮದಿನದ ಸಂಭ್ರಮದಲ್ಲಿ ಡಾಲಿ ಧನಂಜಯ

Published : Aug 22, 2025, 01:38 PM IST

ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್, ಧನಂಜಯ್ ರೆಟ್ರೋ ಲುಕ್’ ಅನ್ನುವ ಅಡಿಬರಹದೊಂದಿಗೆ 666 ಆಪರೇಷನ್ ಡ್ರೀಮ್ ಥಿಯೇಟರ್ ಹೊಸ ಲುಕ್ ರಿಲೀಸ್ ಆಗಿದೆ.

PREV
15

ಡಾಲಿ ಧನಂಜಯ ಜನ್ಮದಿನ. 39ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಸಂದರ್ಭದಲ್ಲಿ ಡಾಲಿ ಧನಂಜಯ ನಟಿಸುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಹೊಸ ಲುಕ್‌ ಬಿಡುಗಡೆಯಾಗಿದೆ.

25

‘ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್, ಧನಂಜಯ್ ರೆಟ್ರೋ ಲುಕ್’ ಅನ್ನುವ ಅಡಿಬರಹದೊಂದಿಗೆ ಈ ಹೊಸ ಲುಕ್ ರಿಲೀಸ್ ಆಗಿದೆ. ಹೇಮಂತ್ ಎಂ ರಾವ್ ನಿರ್ದೇಶನದ, ಡಾ.ವೈಶಾಕ್ ಜೆ. ಗೌಡ ನಿರ್ಮಾಣದ ಈ ಚಿತ್ರದ ಶೂಟಿಂಗ್‌ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.

35

ಅದ್ದೂರಿ ಸೆಟ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಶಿವಣ್ಣ ಹಾಗೂ ಧನಂಜಯ ಇಬ್ಬರೂ ಭಾಗಿಯಾಗಿದ್ದಾರೆ. ಧನಂಜಯ ಸದ್ಯಕ್ಕೀಗ ‘666 ಆಪರೇಶನ್‌ ಡ್ರೀಮ್‌ ಥಿಯೇಟರ್‌’, ‘ಹಲಗಲಿ’, ‘ಜಿಂಗೋ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

45

ಹುಟ್ಟುಹಬ್ಬ ಆಚರಣೆ ಇಲ್ಲ: ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ ಎಂದು ಧನಂಜಯ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಪ್ರತೀ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ.

55

ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮದ ಜೊತೆಗೆ ಆಚರಿಸೋಣ. ಲವ್​ ಯೂ ಆಲ್ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories