ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಉಂಟಾಗುವ ಅನ್ಯಾಯವನ್ನು ಕಂಡು ಸಿಡಿದೇಳುವ ಹುಡುಗಿಯ ಪಾತ್ರ ನನ್ನದು. ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ.
26
ನಾನು ಮೊದಲ ಬಾರಿಗೆ ಗ್ರಾಮೀಣ ಭಾಗದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ಮಂಡ್ಯದ ಹಳ್ಳಿ ಪರಿಸರದಲ್ಲಿ ಇಡೀ ಸಿನಿಮಾ ಮೂಡಿಬರುತ್ತಿದೆ. ಹೀಗೆ ಹೇಳಿದ್ದು ರಾಗಿಣಿ ದ್ವಿವೇದಿ.
36
ರಾಗಿಣಿ ಮತ್ತು ಕುಮಾರ್ ಬಂಗಾರಪ್ಪ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಸಿನಿಮಾ ಕುರಿತು ಅವರು ಮಾತನಾಡಿದರು. ಇತ್ತೀಚೆಗೆ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲಾಯಿತು.
‘ತಾಯವ್ವ’ ಖ್ಯಾತಿಯ ಸಾತ್ವಿಕ ಪವನ ಕುಮಾರ್ ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ನಿರ್ಮಾಣ ಮಾಡುತ್ತಿದ್ದಾರೆ.
56
ಕುಮಾರ ಬಂಗಾರಪ್ಪ, ‘ಪಡಿತರ ವ್ಯವಸ್ಥೆಯ ಲೋಪದೋಷಗಳನ್ನು ತಿಳಿಸುವ ಸಿನಿಮಾ ಇದು. ಬಹಳ ಸಮಯದ ನಂತರ ನಾನು ಈ ಸಿನಿಮಾದಲ್ಲಿ ಹಳ್ಳಿ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು.
66
ದೊಡ್ಡಣ್ಣ, ಹಿರಿಯ ರಾಜಕಾರಣಿ ಶಿವರಾಮೇಗೌಡ ನಟಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಭಾ. ಮ. ಹರೀಶ್, ಭಾ. ಮ. ಗಿರೀಶ್ ಇದ್ದರು.