ಆದಿ ನಿಕ್ಕಿ ಪೋಟೋ
2014ರಲ್ಲಿ ಅಜಿತ್ ಮತ್ತು ಜಂಬೂ ಸವಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡೆಲ್ ನಿಕ್ಕಿ ಗಲ್ರಾನಿ. 2015ರಲ್ಲಿ ಸಿದ್ಧಾರ್ಥ್ ಮತ್ತು 2018ರಲ್ಲಿ ಓ ಪ್ರೇಮವೇ ಸಿನಿಮಾದಲ್ಲಿ ನಟಿಸಿದ್ದಾರೆ.
ಅದ್ಧೂರಿ ನಿಶ್ಚಿತಾರ್ಥ
ಮಾರ್ಚ್ 24, 2022ರಂದು ಪ್ರೀತಿಸಿದ ನಟ ಆದಿ ಪಿನಿಸೆಟ್ಟಿ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು.
ರೊಮ್ಯಾಂಟಿಕ್ ಪೋಸ್
'ಪರಸ್ಪರ ಒಬ್ಬರನ್ನೊಬ್ಬರು ಹೀಗೆ ಹಿಡಿದುಕೊಂಡು ಜೀವನಪೂರ್ತಿ ಜೊತೆಯಾಗಿರಬೇಕು. ಕೆಲವು ವರ್ಷಗಳ ಹಿಂದೆ ನಾವಿಬ್ಬರು ಪರಿಚಯವಾಗಿದ್ದು. ಈಗ ಅಫೀಶಿಯಲ್ ಆಗಿದೆ' ಎಂದು ನಿಕ್ಕಿ ಬರೆದುಕೊಂಡಿದ್ದಾರೆ.
ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ
'ನಿಶ್ಚಿತಾರ್ಥದ ದಿನ ನಮ್ಮ ಜೀವನದಲ್ಲಿ ತುಂಬಾನೇ ಸ್ಪೆಷಲ್. ನಮ್ಮಿಬ್ಬರ ಕುಟುಂಬದ ಎದುರು ನಾವು ಎಂಗೇಜ್ ಆಗಿದ್ದೀವಿ. ನಿಮ್ಮ ಪ್ರೀತಿ ನಮ್ಮ ಆಶೀರ್ವಾದ ನಮ್ಮಿಬ್ಬರ ಹೊಸ ಜರ್ನಿಯಲ್ಲಿ ಇರಲಿ' ಎಂದಿದ್ದಾರೆ ನಿಕ್ಕಿ.
ಕಾಂಬಿನೇಷನ್ ಸೀರೆ
ಲೈಟ್ ಬ್ಲೂ ಮತ್ತು ಸಿಲ್ವರ್ ಕಾಂಬಿನೇಷನ್‌ನ ತುಳಸಿ ಡಿಸೈನರ್ ಸೀರೆಯನ್ನು ನಿಕ್ಕಿ ಧರಿಸಿದ್ದಾರೆ. ಸಿಂಪಲ್ ಮತ್ತು ಎಲಿಗೆಂಟ್ ಬ್ಲೌಸ್‌ನ ಅಂಜು ಶಂಕರ್ ಡಿಸೈನ್ ಮಾಡಿದ್ದಾರೆ.
ಡಿಸೈನರ್ ವೇರ್
ಪಾಯಲ್ ಸಿಂಘಾಲ್ ಡಿಸೈನ್ ಮಾಡಿರುವ ಗ್ರೇ ಕುರ್ತಾದಲ್ಲಿ ಆದಿ ಪಿನಿಸೆಟ್ಟಿ ಮಿಂಚಿದ್ದಾರೆ. ನಿಶ್ಚಿತಾರ್ಥದ ಬ್ಯಾಗ್ರೌಂಡ್ ಆಗಿ ಹೂವಿನ ಅಲಂಕಾರ ಮಾಡಲಾಗಿದೆ.
ಲವ್ ಸ್ಟೋರಿ
ನಿಕ್ಕಿ ಮತ್ತು ಆದಿ ಡೇಟಿಂಗ್ ವಿಚಾರ ದೊಡ್ಡ ಸುದ್ದಿಯಾಗಿತ್ತು. 2020ರಲ್ಲಿ ಆದಿ ತಂದೆ ಹುಟ್ಟುಹಬ್ಬ ಆಚರಣೆಯಲ್ಲಿ ನಿಕ್ಕಿ ಭಾಗಿಯಾಗಿದ್ದರು ಅಂದೇ ಅಭಿಮಾನಿಗಳಿಗೆ ಸಣ್ಣ ಸುಳಿವು ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಇಬ್ಬರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.