ಚಂದನವನದ ನಟಿಯರು ಬಹಳ ಸಡಗರ, ಸಂಭ್ರಮದಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ್ದಾರೆ. ಈ ಸಂಭ್ರಮದಂದು ನಟಿಯರು ಹೇಗೆಲ್ಲಾ ಹಬ್ಬವನ್ನು ಆಚರಿಸಿದ್ದಾರೆ, ಇಲ್ಲಿದೆ ಸುಂದರವಾದ ಫೋಟೊಗಳ ಜೊತೆಗೆ ತಾರೆಯರ ಬೆಳಕಿನ ಹಬ್ಬದ ಜಲಕ್.
ದೀಪಾವಳಿ ಹಬ್ಬ ಈಗಾಗಲೇ ಶುರುವಾಗಿ, ಎಲ್ಲೆಡೆ ಹಬ್ಬದ ಸಂಭ್ರಮ, ಸಡಗರ ಜೋರಾಗಿಯೇ ಇದೆ. ಈ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರು ಹೇಗೆಲ್ಲಾ ರೆಡಿಯಾಗಿ, ಹಬ್ಬವನ್ನು ಆಚರಿಸಿದ್ದಾರೆ ನೀವೆ ನೋಡಿ.
213
ಮೋಕ್ಷಿತಾ ಪೈ
ಕನ್ನಡ ಕಿರುತೆರೆಯ ಸುಂದರಿ ಬಿಗ್ ಬಾಸ್ 11ರ ಬೆಡಗಿ ಮೋಕ್ಷಿತಾ ಪೈ ಸುಂದರವಾದ ರೇಷ್ಮೆ ಸೀರೆಯುಟ್ಟು, ಮೈತುಂಬ ಜ್ಯುವೆಲ್ಲರಿ ತೊಟ್ಟು, ಫೋಟೋ ತೆಗೆಸಿಕೊಂಡಿದ್ದು, ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
313
ಆರಾಧನಾ ರಾಮ್
ನಟಿ ಮಾಲಾಶ್ರೀ ಪುತ್ರಿ ಕಾಟೇರ ಬೆಡಗಿ ಆರಾಧನಾ ರಾಮ್ ಒಂದು ವಿಶಿಷ್ಟ ಫೋಟೊ ಪೋಸ್ಟ್ ಮಾಡಿ. ದೀಪಾವಳಿಯ ಶುಭಾಶಯಗಳು. ಈ ದೀಪಾವಳಿಯು ಪ್ರತಿಯೊಬ್ಬರ ಹೃದಯದಲ್ಲಿ ಪ್ರೀತಿ, ಬೆಳಕು, ಸಮೃದ್ಧಿ ಮತ್ತು ಸಂತೋಷವನ್ನು ಪ್ರತಿಬಿಂಬಿಸಲಿ ಎಂದು ಹಾರೈಸಿದ್ದಾರೆ.
ಕನ್ನಡ ನಟಿ ತೇಜಸ್ವಿನಿ ಪ್ರಕಾಶ್ ಹಬ್ಬವನ್ನು ನಿಜವಾದ ಅರ್ಥದಲ್ಲಿ ಆಚರಿಸಿ ಸಂತೋಷವನ್ನು ಹರಡೋಣ ಮತ್ತು ಇತರರ ಜಗತ್ತನ್ನು ಬೆಳಗಿಸೋಣ. ಸಂತೋಷದಾಯಕ, ಸುರಕ್ಷಿತ ಮತ್ತು ಆಶೀರ್ವಾದದ ದೀಪಾವಳಿ ನಿಮ್ಮದಾಗಲಿ ಎನ್ನುತ್ತಾ, ಮಗಳು ಮತ್ತು ಗಂಡನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. .
513
ದೀಪಿಕಾ ದಾಸ್
ದೀಪಿಕಾ ದಾಸ್ ಬೆಂಗಳೂರಲ್ಲಿದ್ದಾರೋ ಅಥವಾ ದುಬೈನಲ್ಲಿದ್ದಾರೋ ಗೊತ್ತಿಲ್ಲ, ಆದರೆ ಸಿಂಪಲ್ ಆಗಿರುವ ಸುಮ್ದರವಾದ ನೀಲಿ ಬಣ್ಣದ ಸೀರೆಯುಟ್ಟು, ದೀಪ ಬೆಳಗುತ್ತಾ ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ Festival vibes , ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದಿದ್ದಾರೆ.
613
ಚಂದನ ಅನಂತಕೃಷ್ಣ
ಕನ್ನಡ ಕಿರುತೆರೆ ಸುಂದರಿ ಚಂದನ ನಿಮ್ಮ ಮನೆ ತುಂಬಲಿ ದೀಪಗಳಿಂದ, ಹೃದಯ ತುಂಬಲಿ ನಗುವಿನಿಂದ, ಪ್ರತಿ ಕ್ಷಣವು ಪರಿಪೂರ್ಣವಾಗಲಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎನ್ನುತ್ತಾ ಮುದ್ದಾಗಿ ಡ್ರೆಸ್ ಮಾಡಿಕೊಂಡು ದೀಪಾವಳಿ ಹಬ್ಬದ ಪೋಸ್ ಕೊಟ್ಟಿದ್ದಾರೆ.
713
ಖುಷಿ ರವಿ
ದಿಯಾ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಖುಷಿ ರವಿ ಕತ್ತಲೆಯಲ್ಲಿ ಪುಟ್ಟ ದೀಪವನ್ನು ಕೈಯಲ್ಲಿ ಹಿಡಿದು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. Happy deepavali to you and your family ಎಂದಿದ್ದಾರೆ.
813
ರಚನಾ ರೈ
ದರ್ಶನ್ ತೂಗುದೀಪ ಅವರ ಡೆವಿಲ್ ಸಿನಿಮಾ ನಾಯಕಿ ರಚನಾ ರೈ ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲಿ. ದೀಪಾವಳಿ ಹಬ್ಬದ ಶುಭಾಶಯಗಳು. ಎಂದು ಹಾರೈಸಿದ್ದಾರೆ.
913
ಅನುಷಾ ರೈ
ಕನ್ನಡ ಬಿಗ್ ಬಾಸ್ ಸುಂದರಿ ಚಂದನವನದ ನಟಿ ಅನುಷಾ ರೈ ಮರೂನ್ ಬಣ್ಣದ ಜರಿ ಸೀರೆಯುಟ್ಟು, ಕೈಯಲ್ಲಿ ದೀಪದ ಬಟ್ಟಲು ಹಿಡಿದು ಬೆಳಕಿನ ಹಬ್ಬವು ನಿಮ್ಮ ಜೀವನ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸಿದ್ದಾರೆ.
1013
ನಭಾ ನಟೇಶ್
ಸದ್ಯ ತೆಲುಗಿ ಸಿನಿಮಾ ಇಂಡಷ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಪಟಾಕಿ ಪೋರಿ ನಭಾ ನಟೇಶ್ ತನ್ನ ಅಮ್ಮನ ಹಳೆಯ ಸೀರೆಯನ್ನುಟ್ಟು, Wishing everyone a Happy Diwali ಎಂದು ಹಬ್ಬದ ಶುಭ ಕೋರಿದ್ದಾರೆ.
1113
ಅಮೃತಾ ಪ್ರೇಮ್
ಟಗರು ಪಲ್ಯ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಇದೀಗ, ಮತ್ತೊಂದು ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಪ್ರೇಮ್ ಪುರಿ ಅಮೃತಾ ದೀಪಾವಳಿ ಹಬ್ಬದ ಶುಭಾಶಯಗಳು ಎನ್ನುತ್ತಾ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
1213
ಮಯೂರಿ ಕ್ಯಾತರಿ
ಕನ್ನಡ ಕಿರುತೆರೆ ನಟಿ ಮಯೂರಿ ಕ್ಯಾತರಿ ಬಿಳಿ ಬಣ್ಣದ ಸೀರೆಯುಟ್ಟು ಮಲ್ಲಿಗೆ ಮುಡಿದಿರುವ ಫೋಟೊ ಪೋಸ್ಟ್ ಮಾಡಿ. Light up your soul, not just your home. That’s the true Deepavali glow. ದೀಪಾವಳಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
1313
ಪ್ರಜ್ಞಾ ಭಟ್
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ವರಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಪ್ರಜ್ಞಾ ಭಟ್ ಅವರು ದೀಪ ಹಿಡಿದು, ದೇವತೆಯಂತೆ ಸಿಂಗರಿಸಿಕೊಂಡು ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. Happy deepawali ಎಂದಿದ್ದಾರೆ.