ರಾಜನ ಮಗನಾಗಿ ಹುಟ್ಟಿದ್ದರೂ ಸಾಮಾನ್ಯರ ಜೊತೆ ಜೊತೆಗೇ ಬೆಳೆದ; ಪುಟ್ಟದ ವಯಸ್ಸಲ್ಲೇ ಬೆಟ್ಟದ ಹೂವಾಗಿ ರಾಷ್ಟ್ರಪ್ರಶಸ್ತಿ ಪಡೆದ, ಮಂದೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ ಜೊತೆಗೆ ಜನಾನುರಾಗಿಯಾಗಿ ಬೆಳೆ ಅಪ್ಪು ಅವರ ವ್ಯಕ್ತಿಚಿತ್ರ ಈ ಟೀಸರ್‌ನಲ್ಲಿದೆ.
ಪುನೀತ್ ರಾಜ್‌ಕುಮಾರ್ ಅವರ ಕನಸಿಗೆ ರೆಕ್ಕೆ ಹಚ್ಚುವಂಥಾ ಪಿಆರ್‌ಕೆ ಫ್ಯಾನ್‌ಡಮ್ ಆ್ಯಪ್‌ನ ಟೀಸರ್‌ಗೆ ಕಿಚ್ಚ ಸುದೀಪ್ ಧ್ವನಿಯಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಟೀಸರ್‌ನಲ್ಲಿ ಪುನೀತ್ ಅವರ ಬಗೆಗಿನ ಭಾವುಕ ಮಾತುಗಳ ಜೊತೆಗೆ ಈ ಪಿಆರ್‌ಕೆ ಆ್ಯಪ್‌ನ ಉದ್ದೇಶ, ಹಿನ್ನೆಲೆ ಬಗ್ಗೆ ವಿವರಗಳಿವೆ.
25
ರಾಜನ ಮಗನಾಗಿ ಹುಟ್ಟಿದ್ದರೂ..
‘ಕರುನಾಡಿನ ಹೂದೋಟದಲ್ಲಿ ಅರಳಿದ ರಾಜಪುಷ್ಪ, ರಾಜನ ಮಗನಾಗಿ ಹುಟ್ಟಿದ್ದರೂ ಸಾಮಾನ್ಯರ ಜೊತೆ ಜೊತೆಗೇ ಬೆಳೆದ; ಪುಟ್ಟದ ವಯಸ್ಸಲ್ಲೇ ಬೆಟ್ಟದ ಹೂವಾಗಿ ರಾಷ್ಟ್ರಪ್ರಶಸ್ತಿ ಪಡೆದ, ಮಂದೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ ಜೊತೆಗೆ ಜನಾನುರಾಗಿಯಾಗಿ ಬೆಳೆದ’ ಅಪ್ಪು ಅವರ ವ್ಯಕ್ತಿಚಿತ್ರ ಈ ಟೀಸರ್‌ನಲ್ಲಿದೆ.
35
ಫ್ಯಾನ್‌ಡಮ್ ಪಿಆರ್‌ಕೆ ಆ್ಯಪ್
ಜೊತೆಗೆ ‘ಪುನೀತ್ ಅವರ ಕನಸುಗಳನ್ನು, ಅವರ ಬಗೆಗಿನ ನಿರೀಕ್ಷೆಗಳನ್ನು ನಿಜ ಮಾಡಲು ಆರಂಭಿಸಿರುವ ಪ್ರಯತ್ನವಿದು. ಇದರಲ್ಲಿ ಎಲ್ಲರೂ ಕೈಜೋಡಿಸಬಹುದು’ ಎಂಬ ವಿವರಣೆ ಇದೆ. ಅಕ್ಟೋಬರ್ 25ರಂದು ಈ ಫ್ಯಾನ್‌ಡಮ್ ಪಿಆರ್‌ಕೆ ಆ್ಯಪ್ ಲೋಕಾರ್ಪಣೆಯಾಗಲಿದೆ.
ಈ ಅಪ್ಲಿಕೇಶನ್ನ ಲೋಕಾರ್ಪಣೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.
55
ಪುನೀತ್ ಸಾಧನೆ, ಮಾನವೀಯ ಗುಣ
ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿದೆ.