ಪ್ರೇಮಿಗಳ ದಿನದ ​ಬೆಡ್​ರೂಂ ವಿಡಿಯೋ ಹಂಚಿಕೊಂಡ ನಟಿ ಸೋನಲ್ ​ಮೊಂಥೇರೊ: ಪತಿಯ ಗಿಫ್ಟ್​ ಸಸ್ಪೆನ್ಸ್​!

Published : Feb 15, 2026, 02:43 PM IST

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ತಮ್ಮ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ತರುಣ್ ನೀಡಿದ ರಹಸ್ಯ ಉಡುಗೊರೆಯನ್ನು ನೋಡಿ ಸೋನಲ್ ಭಾವುಕರಾಗಿದ್ದು, ಈ ಉಡುಗೊರೆ ಏನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

PREV
16
ಪ್ರೇಮಿಗಳ ದಿನಕ್ಕೆ ತೆರೆ

ನಿನ್ನೆಯಷ್ಟೇ ಪ್ರೇಮಿಗಳ ದಿನಕ್ಕೆ (Valentines Day) ತೆರೆ ಬಿದ್ದಿದೆ. ಕಳೆದೊಂದು ವಾರದಿಂದ ಆ ದಿನ, ಈ ದಿನ ಎಂದು ಪ್ರೇಮಿಗಳು ಭರ್ಜರಿಯಾಗಿ ಆಚರಿಸಿದ್ದಾರೆ. ಅದೇ ರೀತಿ, ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ ಕೂಡ ಈ ದಿನವನ್ನು ವಿಶೇಷವಾಗಿ ಆಚರಿಸಿದ್ದು, ಅದರ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

26
ತಾರಾ ಜೋಡಿ ಸೋನಲ್‌ ಮೊಂಥೆರೋ- ತರುಣ್​ ಸುಧೀರ್​

ಈ ಜೋಡಿ, 2024 ಆಗಸ್ಟ್​ 11ರಂದು ಮದುವೆಯಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ ತಾರೆಯರು. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ (Sonal Monteiro) ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.

36
ಹೂವಿನ ಹಾಸುಗೆ

ಇದೀಗ ಇವರ ಪ್ರೇಮಿಗಳ ದಿನದ ವಿಡಿಯೋಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದರಲ್ಲಿ ಸೋನಲ್​ ಅವರು ಹಾರ್ಟ್​ ಶೇಪ್​ನಲ್ಲಿ ಹೂವಿನ ಹಾಸುಗೆ ಹಾಸಿರುವುದನ್ನು ನೋಡಬಹುದು. ಬೆಡ್​ರೂಮ್​ ಲೈಟ್​ಗಳಿಂದ ಕಂಗೊಳಿಸುತ್ತಿರುವುದನ್ನು ಸೋನಲ್​ ವಿಡಿಯೋದಲ್ಲಿ ಶೇರ್​ ಮಾಡಿದ್ದಾರೆ.

46
ಸೀಕ್ರೇಟ್​ ಉಡುಗೊರೆ

ಇದೇ ವೇಳೆ ತರುಣ್​ ಸುಧೀರ್​ ಅವರು ಕೊಟ್ಟಿರುವ ಉಡುಗೊರೆಯನ್ನು ತೆರೆದಿದ್ದಾರೆ. ಆದರೆ ಅದರಲ್ಲಿ ಏನಿದೆ ಎನ್ನುವುದನ್ನು ಗೋಪ್ಯವಾಗಿಟ್ಟಿದ್ದಾರೆ ನಟಿ. ಆದರೆ ಅದನ್ನು ನೋಡಿ ಭಾವುಕರಾಗಿ ಪತಿಯನ್ನು ತಬ್ಬಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಉಡುಗೊರೆ ಏನು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡತೊಡಗಿದೆ.

56
ಮಗುವಿನ ಬಗ್ಗೆ ಸೋನಲ್​

ಈ ಹಿಂದೆ ಸಂದರ್ಶನವೊಂದರಲ್ಲಿ ಸೋನಲ್​ ಮಗುವಿನ ಬಗ್ಗೆ ಮಾತನಾಡುತ್ತಾ, ಫ್ಯಾಮಿಲಿ ಪ್ಲ್ಯಾನ್​ ಏನೂ ಇಲ್ಲ, ಯಾವಾಗ ಆಗುತ್ತೋ ಆವಾಗ ಮಗು ಆಗಲಿ ಎಂದಿರುವ ಸೋನಲ್​, ನಮ್ಮ ಮನೆಯಲ್ಲಿ ಹೆಚ್ಚು ಹೆಣ್ಣುಮಕ್ಕಳೇ ಇರುವುದರಿಂದ ನನಗೆ ಗಂಡು ಮಗು ಇಷ್ಟ, ತರುಣ್​ ಮನೆಯಲ್ಲಿ ಹೆಚ್ಚಾಗಿ ಗಂಡುಮಕ್ಕಳೇ ಇರುವುದರಿಂದ ಅವರಿಗೆ ಹೆಣ್ಣುಮಗು ಇಷ್ಟ. ಸೋ ಏನಾಗುತ್ತೋ ಆಗಲಿ ಎಂದಿದ್ದರು. ಆದ್ದರಿಂದ ಗಿಫ್ಟ್​ನಲ್ಲಿ ಗೊಂಬೆ ಇದ್ದಿರಬಹುದೇ ಎಂದು ಫ್ಯಾನ್​​ ಗೆಸ್​ ಮಾಡುತ್ತಿದ್ದಾರೆ.

66
ತಾರಾ ಜೋಡಿ ಕುರಿತು

ಇನ್ನು ತರುಣ್‌ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್‌ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories