Bigg Boss ಗಿಲ್ಲಿ ನಟನ ಕನಸಿನ ರಾಣಿ ಇವರೇ ನೋಡಿ: ಲಕ್​ ತಂದುಕೊಡ್ತಾರಾ ನಟಿ ಶ್ವೇತಾ?

Published : Feb 15, 2026, 01:17 PM IST

ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಇದೀಗ 'ಸೂಪರ್ ಹಿಟ್' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಜಯಾನಂದ್ ನಿರ್ದೇಶನದ ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು, ಗಿಲ್ಲಿ ನಟನ ಸಿನಿ ಬದುಕಿಗೆ ಅದೃಷ್ಟ ತಂದುಕೊಡುವ ನಿರೀಕ್ಷೆಯಲ್ಲಿದೆ.

PREV
16
ಅದೃಷ್ಟದ ಬೆನ್ನಟ್ಟಿದ ಗಿಲ್ಲಿ ನಟ

Bigg Bossಗೆ ಆಫರ್​ ಬಂದಾಗಲೇ ಗಿಲ್ಲಿ ನಟ ಅವರಿಗೆ ಅದೃಷ್ಟ ಕೈಹಿಡಿದಿತ್ತು. ಅದಕ್ಕೂ ಮುನ್ನ ಯುಟ್ಯೂಬರ್​ ಆಗಿ, ಕೆಲವೊಂದು ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡು ಫೇಮಸ್​ ಆಗಿದ್ದರೂ ಅವರ ಖ್ಯಾತಿ ರಾಜ್ಯವನ್ನೂ ಮೀರಿ ಹೋಗಿದ್ದು, ಬಿಗ್​ಬಾಸ್​ 12ರಲ್ಲಿ ಐತಿಹಾಸಿಕ ಮತಗಳನ್ನು ಗೆದ್ದುಕೊಂಡಾಗ.

26
ಸಿನಿಮಾದಿಂದಲೂ ಲಕ್​ ನಿರೀಕ್ಷೆ

ಅದರ ಬೆನ್ನಲ್ಲೇ ಇದೀಗ ಗಿಲ್ಲಿ ನಟ (Bigg Boss Gilli Nata as hero) ಅವರು ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಅವರಿಗೆ ಫ್ಯಾನ್ಸ್​ ಹೆಚ್ಚಾಗಿದ್ದರಿಂದ ಈ ಚಿತ್ರ ಅವರಿಗೆ ಲಕ್​ ಕೊಡುವ ಎಲ್ಲಾ ನಿರೀಕ್ಷೆ ಇದೆ.

36
`ಸೂಪರ್ ಹಿಟ್’ ಚಿತ್ರ

ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಸೂಪರ್ ಹಿಟ್’ (Superhit Movie)ಗೆ ನಾಯಕ ಆಗಿ ನಟಿಸುತ್ತಿದ್ದಾರೆ. ಇದೇ 27ರಂದು ಚಿತ್ರ ಬಿಡುಗಡೆಯಾಗಲಿದೆ. ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

46
ನಟಿ ಶ್ವೇತಾ

ಇವರಿಗೆ ಈಗ ನಾಯಕಿಯಾಗಿ ನಟಿಸ್ತಿರೋ ನಟಿಯೇ ಶ್ವೇತಾ. ಶ್ವೇತಾ ಅವರು ಈ ಚಿತ್ರದಲ್ಲಿ ಕನಸಿನ ರಾಣಿಯಾಗಿ ಗಿಲ್ಲಿ ನಟನಿಗೆ ಜೊತೆಯಾಗಿದ್ದಾರೆ. ಶ್ವೇತಾ ಅವರು ಗಿಲ್ಲಿ ಅವರಿಗೆ ಲಕ್​ ತಂದುಕೊಡಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

56
ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ಇನ್ನು ಈ ಸಿನಿಮಾ ಬಗ್ಗೆ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ, ವಿಜಯಾನಂದ್ ಅವರು ಇದೊಂದು ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇದರ ಕಥೆ ಬರೆಯಲು ಶುರು ಮಾಡಿದಾಗಿನಿಂದ ಈ ವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ. ಯಾವುದಕ್ಕೂ ಕೊರತೆಯಾಗದಂತೆ ಒಂದಿಡೀ ಚಿತ್ರವನ್ನು ನಿರ್ಮಾಪಕ ಜಿ ಉಮೇಶ್ ಅವರು ನಿರ್ಮಾಣ ಮಾಡಿದ್ದಾರೆ ಎಂದಿದ್ದರು.

66
ಚಿತ್ರದಲ್ಲಿ ಯಾರಿದ್ದಾರೆ?

ಗಿಲ್ಲಿ ನಟನ ಜೊತೆ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ನಾಗೇಂದ್ರ ಪ್ರಸಾದ್ ಅವರೂ ಬಣ್ಣ ಹಚ್ಚಿದ್ದಾರೆ. ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories