'ಬ್ಲೌಸ್‌ ಹಾಕೋಕೆ ಮರೆತ್ರಾ...' ಸ್ವಾತಿ ಮುತ್ತಿನ ಮಳೆ ಹನಿಯೇ ಹೀರೋಯಿನ್‌ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

Published : Dec 01, 2023, 06:49 PM IST

ರೇಡಿಯೋ ಜಾಕಿ, ರಿಯಾಲಿಟಿ ಶೋ ಹೋಸ್ಟ್, ಸ್ಟೇಜ್ ಆಕ್ಟರ್, ಮಾಡೆಲ್ ಆಗಿ ಕನ್ನಡಿಗರಿಗೆ ಪರಿಚಯವಿರುವ ಸಿರಿ ರವಿಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸ್ಲೀವ್ ಲೆಸ್ ಲುಕ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
18
'ಬ್ಲೌಸ್‌ ಹಾಕೋಕೆ ಮರೆತ್ರಾ...' ಸ್ವಾತಿ ಮುತ್ತಿನ ಮಳೆ ಹನಿಯೇ ಹೀರೋಯಿನ್‌ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

ಕನ್ನಡದ ಪ್ರಸಿದ್ದ ಆರ್​ಜೆ ಆಗಿದ್ದ ಸಿರಿ ರವಿಕುಮಾರ್ 'ಕನ್ನಡದ ಕೋಗಿಲೆ ಸೀಸನ್ 2' ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದವರು. ಹಲವು ಕ್ಷೇತ್ರಗಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ನಟಿ, ನಿರೂಪಕಿ, ಮಾಡೆಲ್ ಸಿರಿ.

28

ಸ್ವಾತಿ ಮುತ್ತಿನ ಮಳೆ ಹನಿಯೇ ನಟಿ ಸಿರಿ ರವಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಂತೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ವಿಶೇಷ ಫೊಟೋಗಳನ್ನ ಹಂಚಿಕೊಳ್ತಾರೆ. ಮಾಡೆಲಿಂಗ್ ರೀತಿಯ ಫೋಟೋಗಳನ್ನು ಶೇರ್ ಮಾಡಿದ್ದು ಇದೆ.

38

ಸದ್ಯ ಸಿರಿ ವಿಶೇಷವಾಗಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‌ನಲ್ಲಿ ಸಿರಿ ಸ್ಲೀವ್ ಲೆಸ್ ಸೌಂದರ್ಯದ ಪ್ರದರ್ಶನ ಹೆಚ್ಚಾಗಿಯೇ ಕಾಣಿಸುತ್ತದೆ. ಇದಲ್ಲದೆ ವಿವಿಧ ಹಾವ-ಭಾವಗಳನ್ನ ಕೂಡ ಸಿರಿ ಇಲ್ಲಿ ವ್ಯಕ್ತಪಡಿಸಿದ್ದಾರೆ ಅಂತಲೂ ಹೇಳಬಹುದು.

48

ಸಿರಿ ರವಿಕುಮಾರ್ ಫೋಟೋಗಳನ್ನ ಫೋಟೋಗ್ರಾಫರ್ ಬಾಲಾಜಿ ತೆಗೆದಿದ್ದಾರೆ. ಜೊತೆಗೆ ವಿಶೇಷ ಅನಿಸೋ ಲೈಟಿಂಗ್ ಇಲ್ಲಿ ಕಾಣಿಸುತ್ತದೆ. ಸರಳ ಅನಿಸಿದ್ರೂ ಸ್ಪೆಷಲ್‌ ಆಗಿಯೇ ಈ ಫೋಟೋಗಳು ನೋಡುಗರನ್ನು ಆಕರ್ಷಿಸುತ್ತದೆ.

58

ಸಿರಿ ರವಿಕುಮಾರ್ ಫೋಟೋಗೆ ಬಿಗ್ ಬಾಸ್ ಭೂಮಿ ಶೆಟ್ಟಿ ಬ್ಯೂಟಿಫುಲ್, ನಟಿ ಸಂಯುಕ್ತಾ ಹೊರನಾಡ್ ಹಾರ್ಟ್ ಎಮೋಜಿ ಹಾಕಿದ್ದಾರೆ. ಜೊತೆಗೆ ನೆಟ್ಟಿಗರು ಸಹ ತರೇಹವಾರಿ ಕಾಮೆಂಟ್‌ ಮಾಡಿದ್ದು, ಅದರಲ್ಲೊಬ್ಬ ನೆಟ್ಟಿಗ ಬ್ಲೌಸ್‌ ಹಾಕೋಕೆ ಮರೆತ್ರಾ ಎಂದು ಕಾಮೆಂಟ್ ಮಾಡಿದ್ದಾನೆ.

68

ಸಿರಿ ರವಿಕುಮಾರ್ ಸ್ಯಾಂಡಲ್‌ವುಡ್‌ಗೆ ಬರುವ ಮೊದಲು, 2014 ರಲ್ಲಿ ಮಿಸ್ಟರ್ ಜೋ ಬಿ ಕರ್ವಾಲೋ ಎಂಬ ಹಿಂದಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. 2019 ರಲ್ಲಿ ಕಲರ್ಸ್ ಸೂಪರ್‌ನಲ್ಲಿ ರಿಯಾಲಿಟಿ ಟಿವಿ ಶೋ ಕೋಗಿಲೆ ಸೀಸನ್ 2 ಅನ್ನು ಹೋಸ್ಟ್ ಮಾಡಿದ್ದರು. 

78

2019 ರಲ್ಲಿ ಕವಲುದಾರಿ ಸಿನಿಮಾದಲ್ಲಿ ಗೀತಾ ಮುತ್ತಣ್ಣನ ಪಾತ್ರದಲ್ಲಿ ಸಿರಿ ನಟಿಸಿದ್ದರು. ಇದು ಅವರ ಚೊಚ್ಚಲ ಚಿತ್ರ. ಚಂದನವನಕ್ಕೆ ಕಾಲಿಟ್ಟ ಬೆಡಗಿ ಅದೇ ವರ್ಷದಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ 'ಸಕುಟುಂಬ ಸಮೇತ'ದಲ್ಲಿ ಕಾಣಿಸಿಕೊಂಡರು.

88

ಸದ್ಯ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಸಿರಿ ರವಿಕುಮಾರ್ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಚಿತ್ರದಲ್ಲಿಯ ಪ್ರೇರಣಾ ಪಾತ್ರ ಮೂಲಕ ಎಲ್ಲರ ಹೃದಯದಲ್ಲಿ ಹೆಚ್ಚಿನ ಗೌರವ ಮೂಡಿಸಿದ್ದಾರೆ.
 

Read more Photos on
click me!

Recommended Stories