ಬಿಳಿ ಡ್ರೆಸ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟ ಚೈತ್ರಾ ಆಚಾರ್: ಮೇಕಪ್ ಮಾತ್ರ ಜಾಸ್ತಿ ಆಯ್ತು ಎಂದ ಫ್ಯಾನ್ಸ್‌!

First Published | Dec 1, 2023, 3:20 PM IST

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಸದಾ ಒಂದಲ್ಲಾ ಒಂದು ಶೈಲಿಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಬಿಳಿ ಬಣ್ಣದ ಉಡುಗೆಯಲ್ಲಿ ‘ಟೋಬಿ ಬ್ಯೂಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. 

ಬಿಳಿ ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ‘ಟೋಬಿ’ ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬಗೆ ಬಗೆಯ ಪೋಸ್ ಕೊಡುತ್ತಾ ನಗು ಚೆಲ್ಲಿದ್ದಾರೆ. ಚೈತ್ರಾ ನಯಾ ಲುಕ್ ನೋಡಿ ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.  

ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಯಾರೂ ಫೋಟೋ ಶೂಟ್ ಮಾಡಿಸೋದೇ ಇಲ್ಲ. ಆದರೆ ಚೈತ್ರಾ ಆಚಾರ್ ಕೊಂಚ ವಿಭಿನ್ನವಾಗಿಯೇ ಇದ್ದಾರೆ. ಹಾಗಾಗಿಯೇ ಹೊಸ ರೀತಿಯ ಹೊಸ ಪರಿಕಲ್ಪನೆಯ ಫೋಟೋ ಶೂಟ್‌ಗಳಲ್ಲಿ ಚೈತ್ರಾ ಕಾಣಿಸುತ್ತಾರೆ. 

Tap to resize

ಚೈತ್ರಾ ಆಚಾರ್ ತಮ್ಮ ಈ ಸ್ಪೆಷಲ್ ಫೋಟೋ ಶೂಟ್‌ನ ಫೋಟೋಸ್‌ಗಳಿಗೆ ಸುಂದರವಾದ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ಈ ಚಿಕ್ಕ ಜೀವನವನ್ನು ಇಷ್ಟಪಡುತ್ತೇನೆಂದು (I think I like this little life) ಅನ್ನುವ ಲೈನ್ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.

ಬೋಲ್ಡ್ & ಬ್ಯೂಟಿಫುಲ್ ನಟಿ ಚೈತ್ರಾ ಫೋಟೋಶೂಟ್‌ನಲ್ಲಿ ಅಷ್ಟೇ ಮಿಂಚೋದು ಅಲ್ಲ. ಹೊಸ ಬಗೆಯ ಪಾತ್ರಗಳ ಮೂಲಕ ಕೂಡ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 

ಚೈತ್ರಾ ಅವರ ಕೈಯಲ್ಲಿ ‘ಹ್ಯಾಪಿ ಬರ್ತ್‌ಡೇ ಟು ಮಿ’ ಮತ್ತು ಬ್ಲಿಂಕ್ ಸೇರಿದಂತೆ ಹಲವು ಸಿನಿಮಾಗಳಿವೆ. ನಟಿ ಮಾತ್ರವಲ್ಲ ಸಿಂಗರ್ ಆಗಿ ಮೋಡಿ ಮಾಡಿರುವ ಚೈತ್ರಾ, ಪಾತ್ರದ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ.

ಚೈತ್ರಾ ಆಚಾರ್ ಕೇವಲ ಒಬ್ಬ ನಟಿ ಅಲ್ವೇ ಅಲ್ಲ. ಗಾಯಕಿ ಕೂಡ ಹೌದು. ಗರುಡ ಗಮನ ಸಿನಿಮಾದ ಸೋಜಿಗದ ಸೂಜಿಮಲ್ಲಿಗೆ ಹಾಡನ್ನ ಇದೆ ಚೈತ್ರಾ ಹಾಡಿದ್ದಾರೆ. ಹಾಡು ಮತ್ತು ಅಭಿನಯ ಎರಡಲ್ಲೂ ತಮ್ಮದೇ ವಿಶೇಷ ಪ್ರತಿಭೆಯನ್ನ ಚೈತ್ರಾ ಆಚಾರ್ ಪ್ರದರ್ಶಿಸಿದ್ದಾರೆ. 

‘ಮಹಿರಾ’ ಚಿತ್ರದ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ತೆರೆಗೆ ಬಂದಿದ್ದು 2019ರಲ್ಲಿ. ಆ ಬಳಿಕ ಅವರಿಗೆ ಹಲವು ಆಫರ್​ಗಳು ಬಂದವು. ಅಲ್ಲದೇ ಅದೇ ವರ್ಷ ರಿಲೀಸ್ ಆದ ‘ಆ ದೃಶ್ಯ’ ಚಿತ್ರದಲ್ಲಿಹಯೂ ಚೈತ್ರಾ ಆಚಾರ್ ನಟಿಸಿದ್ದಾರೆ. 

Latest Videos

click me!