ಮನೆಗೆ ಮಹಾಲಕ್ಷ್ಮಿ ಬರಮಾಡಿಕೊಂಡ 'ಕಿರಿಕ್ ಪಾರ್ಟಿ' ಅಶ್ವಿನ್ ರಾವ್- ಕವಿತಾ ದಂಪತಿ!

First Published | Dec 1, 2023, 5:26 PM IST

ಹೆಣ್ಣು ಮಗುವಿಗೆ ಜನ್ಮ ನೀಡಿದ ಕವಿತಾ ಭಟ್. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ ನಟ....

2016ರಲ್ಲಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿರುವ ಅಶ್ವಿನ್ ರಾವ್ ಪಲ್ಲಕ್ಕಿ ಫುಲ್ ಖುಷಿಯಾಗಿದ್ದಾರೆ.

 2022ರಲ್ಲಿ ಅಶ್ವಿನ್ ರಾವ್ ಪಲ್ಲಕಿ ಮತ್ತು ಕವಿತಾ ಭಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Tap to resize

 ನವೆಂಬರ್ 18ರಂದು ಅಶ್ವಿನ್ ಮತ್ತು ಕವಿತಾ ಮುದ್ದಾದ ಹೆಣ್ಣು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಸುಮಾರು 8.49ಕ್ಕೆ ಜನನವಾಗಿದೆ.

ಮಗು ತೂಕ 2.9 ಕೆಜಿ ಆದ್ದು ರಕ್ತ A+ ಮತ್ತು ಎತ್ತರ 49cm ಎಂದು ಅಶ್ವಿನ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. 'God knew our hearts needed you' ಎಂದು ಕವಿತಾ ಭಟ್ ಬರೆದುಕೊಂಡಿದ್ದಾರೆ.

ಸದ್ಯ ಅಶ್ವಿನ್ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. 

Latest Videos

click me!