Upcoming Kannada Movies: ಕಡಿಮೆ ಹಣದಿಂದ ಸಿನಿಮಾ ಯಶಸ್ಸು ಕಾಣಲು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೆ 10 ಸಲಹೆಗಳಿವು!

Published : Jan 02, 2026, 12:03 PM IST

Suggestion For Upcoming Kannada Cinema Success: ಹೊಸ ವರ್ಷದಲ್ಲಿ ಹಳೆಯ ತಪ್ಪು ಮರುಕಳಿಸದಿರಲಿ ಎಂಬುದು ಆಶಯ. ಸ್ಯಾಂಡಲ್‌ವುಡ್ ಕ್ರಮಿಸಬೇಕಾದ ಬಹುದೂರದ ಹಾದಿಗೆ ದಿಕ್ಕೂಚಿಯಂತೆ ತಪ್ಪು-ಒಪ್ಪುಗಳ ಈ ಬರಹ. 

PREV
110
ಹೊಸತನ ಸಿನಿಮಾದ ಜೀವಾಳವಾಗಬೇಕು

ಕಳೆದ ವರ್ಷ ಬಿಡುಗಡೆಯಾದ ಕೆಲವೊಂದು ಸಿನಿಮಾಗಳು ತಾಂತ್ರಿಕವಾಗಿ ಹೊಸತನ ಅಳವಡಿಸಿದ್ದರೂ ಚಿತ್ರಕಥೆಯಲ್ಲಿ ನಾವೀನ್ಯತೆ ಕಾಣೆಯಾಗಿತ್ತು. ಹೊಸತನವಿಲ್ಲದ ಕತೆಗಳಿಗೆ ಬೇಡಿಕೆ ಕಡಿಮೆ.

210
ಹಣ ಖರ್ಚು ಮಾಡೋದಕ್ಕಿಂತಲೂ ತಲೆ ಖರ್ಚು ಮಾಡಿ

ಕೋಟಿಗಟ್ಟಲೆ ಬಜೆಟ್, ಹಾಲಿವುಡ್ ತಂತ್ರಜ್ಞಾನ, ಫಾರಿನ್ ಶೂಟ್ ಇವನ್ನಷ್ಟೇ ಇಟ್ಟುಕೊಂಡು ಸುಮಾರಾದ ಕಥೆ ಹೇಳಲು ಹೊರಟರೆ ನಿರ್ಮಾಪಕನ ಸಾಲದ ಹೊರೆ ಹೆಚ್ಚಾಗುತ್ತದೆಯಷ್ಟೇ, ಸಿನಿಮಾ ಗೆಲ್ಲೋದಿಲ್ಲ ಅಷ್ಟೊಂತನಕ್ಕಿಂತಲೂ ತಲೆ ಖರ್ಚು ಮಾಡಿ ಸಿನಿಮಾ ಮಾಡಬೇಕಾದ್ದು ಸದ್ಯದ ಅವಶ್ಯಕತೆ.

310
ಪ್ರಾದೇಶಿಕತೆಗೆ ಮೆಚ್ಚುಗೆ

ಜನಪ್ರಿಯ ಫಾರ್ಮ್ಯಾಟ್‌ಗೆ ಜೋತುಬೀಳುವುದು, ಯೂನಿವರ್ಸಲ್ ಸಿನಿಮಾ ಮಾಡುವುದು ಅಷ್ಟಾಗಿ ನಡೆಯದು. ಮಲಯಾಳಂ ಚಿತ್ರ ಗೆಲ್ಲುತ್ತಿರುವುದೇ ಪ್ರಾದೇಶಿಕ ಅನನ್ಯತೆಯಿಂದ ಕಳೆದ ವರ್ಷ ಕೈ ಹಿಡಿದ 'ಸು ಫ್ರಮ್ ಸೋ', ಸಿನಿಮಾ ಕೂಡ ಇದಕ್ಕೆ ಉದಾಹರಣೆ.

410
ಸಿನಿಮಾ ರಿಲೀಸ್‌ಗೆ ವಿಳಂಬ ಬೇಡ

ಸಿನಿಮಾ ರೆಡಿ ಆಗಿ ವರ್ಷಾನುಗಟ್ಟಲೆ ನಂತರ ರಿಲೀಸ್ ಆಗುತ್ತಿದೆ. ಮೇಕಿಂಗ್, ವಿಎಫ್ಎಕ್ಸ್ ಎಂದೆಲ್ಲ ಕಾರಣಕ್ಕೆ ಸಿನಿಮಾಗಳು ತೆರೆಗೆ ಬರಲು ಬಹಳ ವಿಳಂಬವಾಗುತ್ತಿವೆ. ಸಿನಿಮಾ ನಿಧಾನವಾದಷ್ಟೂ ಕಥೆ ಹೇಳುವ ಕ್ರಮದಲ್ಲಿನ ತಾಜಾತನ ಮರೆಯಾಗುತ್ತದೆ.

510
ಸ್ಟಾರ್‌ಗಳಿಂದ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭ್ರಮೆಯಿಂದ ಹೊರಬನ್ನಿ

ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಅನ್ನುವುದಷ್ಟೇ ಇಲ್ಲಿ ಮುಖ್ಯ. ಸ್ಟಾರ್ ಇದ್ದರೆ ಹಾಕಿದ ಬಂಡವಾಳ ವಾಪಾಸ್ ತೆಗೆಯೋದು ಸುಲಭ ಎಂಬ ಭ್ರಮೆಯಿಂದ ಚಿತ್ರರಂಗ ಹೊರಬರಬೇಕಿದೆ. ಸ್ಟಾರ್, ಫ್ಯಾನ್ಸ್ ಅನ್ನುವುದು ಸೋಷಲ್ ಮೀಡಿಯಾದಲ್ಲಿ ಗೌಜಿ ವಿಬ್ಬಿಸಿದಷ್ಟು ಥೇಟರ್‌ನಲ್ಲಿ ಕಲೆಕ್ಷನ್ ಮಾಡೋದಿಲ್ಲ ಎಂಬುದು ನಗ್ನ ಸತ್ಯ. ಮೋಹನ್ ಲಾಲ್ ಅಭಿನಯದ ವೃಷಭ ಅದಕ್ಕೆ ಒಳ್ಳೆಯ ಉದಾಹರಣೆ.

610
ಇಡೀ ತಂಡ ಜೊತೆಗಿರಬೇಕು

ಉಳಿದವರು ನಾಪತ್ತೆಯಾಗಿರುತ್ತಾರೆ. ಸಿನಿಮಾ ಬಿಡುಗಡೆಗೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಬೇರೆ ಯಾವುದೋ ಕ್ರೀಡೆ, ಸಿನಿಮಾದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಿನಿಮಾ ಮೂಹೂರ್ತದಲ್ಲಿ ಎಲ್ಲರೂ ಜೊತೆಯಾಗಿರುವಂತೆ ಸಿನಿಮಾ ಬಿಡುಗಡೆ ಹೊತ್ತಿನಲ್ಲೂ ಇಡೀ ತಂಡ ಜೊತೆಯಾಗಿ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರಚಾರ ಮಾಡಬೇಕು.

710
ಅರ್ಥಪೂರ್ಣವಾಗಿ ಮಾತನಾಡಿ

ಪ್ರತಿಯೊಂದು ಸಂಭ್ರಮ, ಮಾಧ್ಯಮ ಗೋಷ್ಟಿ ಮಾಡಿಕೊಂಡು ಹೋಗುವುದಕ್ಕೆ ಪ್ರಚಾರದ ಜಾತ್ರೆಗಳು ಯಾಕೆ ಬೇಕು? ಸಾಧ್ಯವಾದಷ್ಟು ಗುಟ್ಟಾಗಿ ಕೆಲಸ ಮಾಡಿದರೆ, ಅದೇ ಅದೇ ದುಪ್ಪಟ್ಟು ನಿರೀಕ್ಷೆಗೆ ಕಾರಣವಾತ್ತದೆ. ಅಪರೂಪಕ್ಕೆ ಕಂಟೆಂಟ್ ಬಿಡುಗಡೆ ಮಾಡಿದರೆ ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲ ಉಳಿಯುತ್ತದೆ.

810
ಕರ್ನಾಟಕ ಸುತ್ತಾಡಿ

ಸಿನಿಮಾ ಎಂದರೆ ಬೆಂಗಳೂರು, ಮೈಸೂರು ಮಾತ್ರವಲ್ಲ, ಸಿನಿಮಾ ತಂಡಗಳು ಬೆಂಗಳೂರು ಬಿಟ್ಟು ರಾಜ್ಯದ ಹೊರೆಗೆ ಹೋಗಬೇಕು. ಇದು ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಮಾಡಿದರೆ ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನು ಸೇರಿಸುವುದಕ್ಕೆ ಅನುಕೂಲವಾಗುತ್ತದೆ.

910
ನಿಮ್ಮ ಸಿನಿಮಾ ಯಾರಿಗೆ?

ಈಗ ಸಿನಿಮಾ ನೋಡುವ ವೇದಿಕೆಗಳು ಬದಲಾಗುತ್ತಿದೆ. ಕೆಲವು ಚಿತ್ರಗಳು ಕಂಟೆಂಟ್ ತುಂಬಾ ಚೆನ್ನಾಗಿದ್ದರೂ ಚಿತ್ರಮಂದಿರಗಳಲ್ಲಿ ಒಡದೆ ಟಿವಿ ಹಾಗೂ ಒಟಿಟಿಗಳಲ್ಲಿ ಗಮನ ಸೆಳೆದಿರುತ್ತದೆ. ಅಂದರೆ ತಮ್ಮ ಚಿತ್ರಗಳು ಬಿಗ್ ಸ್ಟೀನ್, ಓಟ ಅಥವಾ ಟಿವಿಗೋ ಎನ್ನುವ ಸ್ಪಷ್ಟತೆ ಇರಬೇಕು.

1010
ವಿಶಿಷ್ಟ ಕತೆಗಳಿರಲಿ

ತೀರಾ ಕಲ್ಪನೆಯ ಕತೆಗಳಿಗೆ ಈಗ ಕಾಲ ಇಲ್ಲ ರಿಯಾಲಿಟಿಗೆ ಹತ್ತಿರವಾಗಿರಬೇಕು. ಕಲ್ಫ್ ಮಾರಾಯ ಸಿನಿಮಾಗಳನ್ನೇ ಹೆಚ್ಚು ಹೆಚ್ಚು ನೋಡುತ್ತಿದ್ದಾರೆ. ಓಟತೆಗಳ ಅಬ್ಬರದಲ್ಲಿ ಅದೇ ಮಾಸ್ ಜಾತ್ರೆಯ ಚಿತ್ರಗಳ ಹೊರತಾಗಿ ಜನ ಕೇಳಿರುವ ನೋಡಿರುವ ಅಥವಾ ತಿಳಿದುಕೊಂಡಿರುವ ಕತೆ. ಘಟನೆಗಳಿಗೆ ತೆರೆ ಮೇಲೆ ಹೆಚ್ಚು ಬೆಲೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories