Sanvi Sudeep Song: ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿನ ಡ್ಯಾನ್ಸ್ ಅಂಥೆಮ್ ಒಂದನ್ನು ಕಿಚ್ಚ ಪುತ್ರಿ ಸಾನ್ವಿ ಸುದೀಪ್ ಹಾಡಿದ್ದು, ಇದೀಗ ಯೂಟ್ಯೂಬ್ ನಲ್ಲಿ ಈ ಹಾಡು 10 ವ್ಯೂವ್ಸ್ ಪಡೆದುಕೊಂಡಿದೆ.
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಡಿಸೆಂಬರ್ 25 ರಂದು ತೆರೆ ಕಂಡಿದ್ದು, ಅದಕ್ಕೂ ಮುನ್ನ ಬಿಡುಗಡೆಯಾದ ಸಿನಿಮಾದ ಪಾರ್ಟಿ ಆಂಥೆಮ್ ‘ಮಸ್ತ್ ಮಲೈಕಾ’ ಹಾಡು ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಾನ್ವಿ ಸುದೀಪ್ ಹಾಡಿರುವ ಈ ಹಾಡು ಇದೀಗ ಹತ್ತು ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ.
26
ಸಾನ್ವಿ ಸುದೀಪ್ ಹಾಡಿಗೆ ಭರ್ಜರಿ ರೆಸ್ಪಾನ್ಸ್
ಮಾರ್ಕ್ ಚಿತ್ರದ ಪಾರ್ಟಿ ಆಂಥಮ್ ಹಾಡಿದ್ದು, ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್. ಮಗಳ ಧ್ವನಿ, ಅಪ್ಪನ ಡಾನ್ಸ್ ನೋಡಿದ ಕಿಚ್ಚನ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದ ಮೂಲೆ ಮೂಲೆಯಲ್ಲೂ ಈ ಹಾಡು ಸದ್ದು ಮಾಡುತ್ತಿದೆ.
36
10 Million Views ಪಡೆದ ಹಾಡು
ಇದೀಗ ಯೂಟ್ಯೂಬ್’ನಲ್ಲಿ ಮಸ್ತ್ ಮಲೈಕಾ ಹಾಡು ಬರೋಬ್ಬರಿ 10 Million Views ಪಡೆದಿದ್ದು, ಈ ಹಿನ್ನೆಯಲ್ಲಿ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ನಿಶ್ಚಿಕಾ ಥ್ಯಾಂಕ್ಯೂ ಹೇಳಿದ್ದು, ಹಾಡು ಹಾಡಿರುವ ಸಾನ್ವಿ ಸುದೀಪ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಸಾನ್ವಿ ಸುದೀಪ್ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಯೂಟ್ಯೂಬ್ ವ್ಯೂವ್ಸ್ ಫೋಟೊ ಶೇರ್ ಮಾಡಿ 2026ರ ಅದ್ಭುತ ಆರಂಭ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇನ್ನೊಂದು ಸ್ಟೋರಿಯಲ್ಲಿ 10 Million Views ಸಂಭ್ರಮಕ್ಕೆ ಸರ್ಪ್ರೈಸ್ ಕೇಕ್ ಫೋಟೊವನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ.
56
ಮೊದಲ ಹಾಡೇ ಸೂಪರ್ ಹಿಟ್
ಸಾನ್ವಿ ಸುದೀಪ್ ಈ ಹಿಂದೆ ತೆಲುಗಿನಲ್ಲಿ ಎರಡು ಹಾಡು ಹಾಡಿದ್ದರು. ಹಿಟ್ 3ಯ ಥೀಮ್ ಸಾಂಗ್ ಹಾಗೂ ಪೊರಟಮೆ 3.0 ಸಿನಿಮಾದ ಹಾಡು ಹಾಡಿದ್ದರು. ಆದರೆ ‘ಮಸ್ತ್ ಮಲೈಕಾ’ ಮೂಲಕ ಸ್ಯಾಂಡಲ್ ವುಡ್ ಗೆ ಸಾನ್ವಿ ಎಂಟ್ರಿ ಕೊಟ್ಟಿದ್ದು, ಹಾಡಿದ ಮೊದಲ ಹಾಡೇ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ.
66
ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ಸಾನ್ವಿ
ಸಾನ್ವಿ ಈ ಹಿಂದೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ನಾನು ಸಾನ್ವಿ ಸುದೀಪ್. ಮೊನ್ನೆ ನನ್ನ ಮೊದಲ ಕನ್ನಡ ಸಾಂಗ್ ‘ಮಸ್ತ್ ಮಲೈಕಾ’ ರಿಲೀಸ್ ಆಗಿದೆ. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಧನ್ಯವಾದ. ಹೀಗೆ ಸಪೋರ್ಟ್ ಮಾಡ್ತಿರಿ ಅಂತ ಸಾನ್ವಿ ಹೇಳಿದ್ದರು. ಇದೀಗ ಮೊದಲ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಅಭಿಮಾನಿಗಳಿಂದ ಮತ್ತಷ್ಟು ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.