ತಮ್ಮ ಹಾಗೂ ಶಿವರಾಜ್‌ಕುಮಾರ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ ಯೂಟ್ಯೂಬರ್ ವಿರುದ್ಧ ನಟಿ ಸುಧಾರಾಣಿ ಗರಂ ಆಗಿದ್ದಾರೆ. ಯುವಕನ ಕೌಟುಂಬಿಕ ಹಿನ್ನೆಲೆ ನೋಡಿ ಮರುಕಪಟ್ಟು ಕ್ಷಮಿಸಿದರೂ, ಸತ್ಯಾಸತ್ಯತೆ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ನಮಸ್ಕಾರ.. ಮೊದಲೆಲ್ಲ ಈ ಗಾಸಿಪ್ ಲೂಸ್ ಸ್ಟಾಕ್ ಎಲ್ಲ ಬಾವಿಕಟ್ಟೆ, ಅರಳಿಕಟ್ಟೆ ಹತ್ರನೆ ವೈರಲ್ ಆಗ್ತಾ ಇತ್ತು. ಆದರೆ ಈಗ ಬಾವಿಕಟ್ಟೆ, ಅರಳಿಕಟ್ಟೆ ಎಲ್ಲಾ ಕಟ್ಟೆಗಳನ್ನು ನಮ್ಮ ಸೋಷಿಯಲ್ ಮೀಡಿಯಾ ನುಂಗ ಹಾಕಬಿಟ್ಟಿದೆ. ಈಗ ಈ ಗಾಸಿಪ್, ಫೇಕ್ ನ್ಯೂಸ್ ಗಳು ಎಲ್ಲವೂ ವರ್ಲ್ಡ್ ಫೇಮಸ್ ಆಗ್ತಾ ಇವೆ ಎನ್ನುತ್ತಲೇ ತಮ್ಮ ಬಗ್ಗೆ ಅಪಪ್ರಚಾರ ಮಾಡಿದವರ ಚಳಿ ಬಿಡಿಸಿದ್ದಾರೆ ನಟಿ ಸುಧಾರಾಣಿ.
27
ಶಿವರಾಜ್‌ಕುಮಾರ್ ಅವರನ್ನ ಪ್ರೀತಿಸುತ್ತಿದ್ದೆ
“ಶಿವರಾಜ್‌ಕುಮಾರ್ ಅವರನ್ನ ಪ್ರೀತಿಸುತ್ತಿದ್ದೆ, ಮದುವೆ ಆಗಬೇಕೆಂಬ ಆಸೆಯು ಇತ್ತು. ಆದರೆ, ಅಣ್ಣಾವ್ರ ಮಗ ಎಂದು ಸುಮ್ಮನಾದೆ” ಎಂಬರ್ಥದಲ್ಲಿ ಸುಧಾರಾಣಿ ಅವರ ಹೆಸರಿನಲ್ಲಿ ಯೂಟ್ಯೂಬರ್ ಒಬ್ಬ ಸುಳ್ಳು ಸುದ್ದಿಯ ಪೋಸ್ಟ್ ಹಾಕಿ ವೈರಲ್ ಮಾಡಿದ್ದ ಯುವಕನ ಚಳಿ ಬಿಡಿಸಿರೋ ನಟಿ ಸುಧಾರಾಣಿ, ಅವನ ಮೇಲೆ ಕೇಸ್ ಹಾಕುವ ಮಟ್ಟಕ್ಕೆ ಹೋದಾಗ ಕ್ಷಮೆ ಕೇಳಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
37
ದುಡ್ಡು ಮಾಡುವ ಆಸೆ
ಈ ಹುಡುಗಗನ ತಂದೆಗೆ ತುಂಬಾ ಹುಷಾರಿಲ್ಲ. ಗ್ಯಾಂಗ್ರಿನ್ ಆಗಿ ಕಾಲು ಕಟ್ ಮಾಡಿದ್ದಾರೆ. ಇವನ ತಾಯಿ ಈ ತಳ್ಳೋ ಗಾಡಿ ಮೇಲೆ ಊಟ ಮಾರ್ಕೊಂಡು ಜೀವನ ಸಾಗಿಸ್ತಾ ಇದ್ದಾರೆ. ಇವನು ಅವರ ಅಮ್ಮನಿಗೆ ಸಹಾಯ ಮಾಡ್ತಾನೆ. ಊರಿನಲ್ಲಿ ಎಲ್ಲರೂ ಈ YouTube ಗೋಸ್ಕರ ವಿಡಿಯೋ ಮಾಡೋದು ಅದೆಲ್ಲ ನೋಡಿ ಇವನ ತಾಯಿ ಇವನಿಗೆ ನೀನು ವಿಡಿಯೋ ಮಾಡು, YouTubeಗೆ ಹಾಕು, ನಾಲ್ಕು ಕಾಸು ಸಂಪಾದನೆ ಮಾಡಬಹುದು ಎಂದಿದ್ದಾರೆ. ಆದರೆ ಬೇಗ ದುಡ್ಡು ಮಾಡುವ ಆಸೆಗೆ ಈತ ನಟಿ ಸುಧಾರಾಣಿ ಅವರ ಫೇಕ್ ನ್ಯೂಸ್ ಹಾಕಿ ಈಗ ತಗ್ಲಾಕ್ಕೊಂಡಿದ್ದಾನೆ.
ಆದರೆ ನಟಿ ಇವನ ಮನೆಯ ಪರಿಸ್ಥಿತಿ ನೋಡಿ, ಮರುಕ ಪಟ್ಟಿದ್ದಾರೆ. 'ಇವನ ಅಣ್ಣ ಓಡಿ ಬಂದು ಮನೆ ಪರಿಸ್ಥಿತಿ ಎಲ್ಲ ಹೇಳ್ಕೊಂಡ ಕೇಳಿ ನನಗೆ ಅಯ್ಯೋ ಪಾಪ ಅನ್ನಿಸ್ತು. ಇನ್ನು ಈ ಕಂಪ್ಲೇಂಟ್ ಕೇಸು ಸ್ಟೇಷನ್ ಕೋರ್ಟ್ ಅಂತೆಲ್ಲ ಹೋದ್ರೆ ಇವನ ಜೀವನ ಹಾಳಾಗಿ ಹೋಗುತ್ತೆ, ಏನೋ ತಿಳಿವಳಿಕೆ ಇಲ್ಲದೆ ಮಾಡಿಬಿಟ್ಟಿದ್ದಾನೆ ಹೋಗಲಿ ಬಿಡು ಅಂತ ಬುದ್ಧಿವಾದ ಹೇಳಿ ನಾನೇ ಕಳಿಸಿದೆ' ಎಂದಿದ್ದಾರೆ ನಟಿ.
57
ಯುಟ್ಯೂಬರ್ಸ್ಗೆ ಬುದ್ಧಿಮಾತು
ಆದರೆ, ಇದೇ ವೇಳೆ ಸುಧಾರಾಣಿ, ಎಲ್ಲಾ YouTube ಚಾನೆಲ್ ಅವರಿಗೆ ಕೇಳಿಕೊಳ್ಳುದು ಏನಂದ್ರೆ, ಯಾವುದೇ ಮಾಹಿತಿ ಬಂದಾಗ ಅದರ ಬಗ್ಗೆ ಸತ್ಯಾಂಶ ಗೊತ್ತಿಲ್ಲದಾಗದರೆ ಇನ್ನೊಬ್ಬರ ಮಾನಕ್ಕೆ ನಷ್ಟ ಆಗದಂಥ ತಪ್ಪು ಮಾಡಬೇಡಿ. ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಕಠಿಣ ಕ್ರಮಕ್ಕೆ ಒಳಗಾಗುತ್ತೀರಿ ಎಂದು ನಟಿ ಎಚ್ಚರಿಕೆ ನೀಡಿದ್ದಾರೆ.
67
ಕಾನೂನು ತಿಳಿದುಕೊಳ್ಳಿ
ಈ ಹುಡುಗ ಲಾಸ್ಟ್ ಟೈಮ್ ನನ್ನ ಬಗ್ಗೆ ಒಂದು ಫೇಕ್ ನ್ಯೂಸ್ ನ ವೈರಲ್ ಮಾಡಿದ್ದ. ಈಗ ಟೆಕ್ನಾಲಜಿ ಎಷ್ಟು ಇಂಪ್ರೂವ್ ಆಗಿದೆ ಅಂದ್ರೆ ಇವನು ಈ ಫೇಕ್ ನ್ಯೂಸ್ ನ ಎಷ್ಟು ಬೇಗ ವೈರಲ್ ಮಾಡಿದ್ನೋ ಅಷ್ಟೇ ಬೇಗ ಸಿಕ್ಕಾಕೊಂಡ. ಥ್ಯಾಂಕ್ಸ್ ಟು ಸೈಬರ್ ಟೀಮ್ ಎಂದಿರುವ ನಟಿ ಸುಧಾರಾಣಿ, ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಈ ಫೇಕ್ ನ್ಯೂಸ್ ನ ಕ್ರಿಯೇಟ್ ಮಾಡೋದು ಅಥವಾ ಕೆಟ್ಟ ಕೆಟ್ಟ ಕಾಮೆಂಟ್ ಗಳನ್ನ ಹಾಕೋರು ಈ ಸೋಶಿಯಲ್ ಮೀಡಿಯಾ ರೂಲ್ಸ್ ಅಂಡ್ ರೆಗುಲೇಷನ್ಸ್ ಏನಿದೆಯೋ ಅದನ್ನ ತಿಳ್ಕೊಳ್ಳಿ, ಅವುಗಳನ್ನೆಲ್ಲಾ ಕರೆಕ್ಟಾಗಿ ಫಾಲೋ ಮಾಡಿ, ಇಲ್ಲ ಅಂದ್ರೆ ಇದಕ್ಕೆಲ್ಲ ತುಂಬಾ ದೊಡ್ಡ ದೊಡ್ಡ ಶಿಕ್ಷೆ ಇದೆ ಅದನ್ನೆಲ್ಲ ಅನುಭವಿಸಬೇಕಾಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ.
77
ಯಾರ ಬಗ್ಗೂ ಹೀಗೆ ಮಾಡ್ಬೇಡಿ
ಇದನ್ನೆಲ್ಲ ನಾನು ಹೇಳ್ತಾ ಇರೋದು ಬರಿ ನನ್ನ ಬಗ್ಗೆ ಅಂತ ಮಾತ್ರ ಅಲ್ಲ, ನೀವು ಯಾರ ಬಗ್ಗೆನೆ ಆಗಿರಲಿ, ಇಂಥ ಕಂಟೆಂಟ್ ಗಳೆಲ್ಲ ಕ್ರಿಯೇಟ್ ಮಾಡುವಾಗ ಆ ಫ್ಯಾಕ್ಟ್ಸ್ ನ ಚೆಕ್ ಮಾಡ್ಕೊಳ್ಳಿ, ಅದು ತಪ್ಪೋ ಸರಿಯೋ ಅಂತ ಫಸ್ಟ್ ವೆರಿಫೈ ಮಾಡಿಕೊಳ್ಳಿ. ಅದೆಲ್ಲ ತಿಳಿದುಕೊಳ್ಳದೇ, ಈ ರೀತಿಯ ಫೇಕ್ ನ್ಯೂಸ್ಗಳನ್ನು, ಗಾಸಿಪ್ಗಳನ್ನು ಅಥವಾ ಕೆಟ್ಟ ಕೆಟ್ಟ ಕಮೆಂಟ್ಸ್ ಹಾಕಿದ್ರೆ ನೀವು ಇದಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದಿದ್ದಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.