ಲವ್‌ ಲಿ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಾಟೀಲ್!

Published : Jul 18, 2022, 12:22 PM IST

ಮತ್ತೊಂದು ಚಿತ್ರಕ್ಕೆ ಹೀರೋ ಆದ ಕಂಚಿನ ಕಂಠದ ನಟ. ವಸಿಷ್ಠಗೆ ಜೋಡಿ ಇವರೇ.....

PREV
17
ಲವ್‌ ಲಿ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಾಟೀಲ್!

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಲವ್‌ ಲಿ’ ಎಂಬುದು. 

27

ಈಗಷ್ಟೆಚಿತ್ರಕ್ಕೆ ಮುಹೂರ್ತ ಆಗಿದೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ವಸಿಷ್ಠ ಸಿಂಹ ಅವರ ಈ ಹೊಸ ಚಿತ್ರವನ್ನು ಚೇತನ್‌ ಕೇಶವ್‌ ನಿರ್ದೇಶನ ಮಾಡುತ್ತಿದ್ದಾರೆ.

37

‘ಮಫ್ತಿ’ ನರ್ತನ್‌ ಜತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. 

47

ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

57

ರೌಡಿಸಂ ಕತೆಯಾಗಿದ್ದು, ಕತ್ತಲ ಜಗತ್ತಿನ ಹೊಸ ಲೋಕವನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಆ್ಯಕ್ಷನ್‌ ಜತೆಗೆ ರೋಮ್ಯಾಂಟಿಕ್‌ ಪ್ರೇಮ ಕತೆಯೂ ಇದೆ. 

67

ಈ ಕಾರಣಕ್ಕೆ ಚಿತ್ರಕ್ಕೆ ‘ಲವ್‌ ಲಿ’ ಎನ್ನುವ ಹೆಸರಿದೆ ಎಂಬುದು ವಸಿಷ್ಠ ಸಿಂಹ ಅವರ ಮಾತುಗಳು. ಒಂದು ಕಡೆ ಖಳನಾಯಕನಾಯಕನಾಗಿ, ಮತ್ತೊಂದು ಕಡೆ ನಾಯಕನಾಗಿ ಮಿಂಚುತ್ತಿರುವ ವಸಿಷ್ಠ ಅವರ ಕೈಯಲ್ಲಿ ಹೆಡ್‌ ಬುಷ್‌, ಸಿಂಬಾ, ತಲ್ವಾರ್‌ ಪೇಟೆ, ಚಿಟ್ಟೆ, ಕಾಲಚಕ್ರ ಮುಂತಾದ ಚಿತ್ರಗಳ ಜತೆಗೆ ಈಗ ‘ಲವ್‌ ಲಿ’ ಕೂಡ ಸೇರಿಕೊಂಡಿದೆ. 

77

ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್‌ ಶುರುವಾಗಲಿದೆ. ಸದ್ಯದಲ್ಲಿ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ. ಮುಹೂರ್ತದ ಅಂಗವಾಗಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ.

Read more Photos on
click me!

Recommended Stories