ಪರಂವಃ ಸ್ಟುಡಿಯೋ ನಿರ್ಮಾಣದಲ್ಲಿ ವಿಹಾನ್‌; ಚಂದ್ರಜಿತ್‌ ನಿರ್ದೇಶನ, ಅಂಕಿತಾ ಅಮರ್‌ ನಾಯಕಿ!

Published : Jul 18, 2022, 10:12 AM IST

ಪರಂವಃ  ತಂಡದ ಜೊತೆ ಕೈ ಜೋಡಿಸಿದ ವಿಹಾನ್. ಆಕ್ಷನ್ ಕಟ್ ಹೇಳಲು ಸಜ್ಜಾದ ಚಂದ್ರಜಿತ್...

PREV
17
ಪರಂವಃ ಸ್ಟುಡಿಯೋ ನಿರ್ಮಾಣದಲ್ಲಿ ವಿಹಾನ್‌; ಚಂದ್ರಜಿತ್‌ ನಿರ್ದೇಶನ, ಅಂಕಿತಾ ಅಮರ್‌ ನಾಯಕಿ!

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಸಾರಥ್ಯದಲ್ಲಿ ಪರಂವಃ ಸ್ಟುಡಿಯೋ ಮತ್ತೊಂದು ಚಿತ್ರವನ್ನು ಘೋಷಣೆ ಮಾಡಿದೆ. ಈ ಚಿತ್ರಕ್ಕೆ ವಿಹಾನ್‌ ನಾಯಕನಾಗಿ, ಅಂಕಿತಾ ಅಮರ್‌ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 

27

ಚಂದ್ರಜಿತ್‌ ಬೆಳ್ಳಿಯಪ್ಪ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಆಗಸ್ಟ್‌ ತಿಂಗಳಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಸೆಪ್ಟೆಂಬರ್‌ನಲ್ಲಿ ಶೂಟಿಂಗ್‌ ಚಿತ್ರೀಕರಣ ಶುರುವಾಗಲಿದೆ.

37

ಈ ಹಿಂದೆ ‘ಕಾಲ್‌ ಕೆಜಿ ಪ್ರೀತಿ’, ‘ಪಂಚತಂತ್ರ’ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿ, ‘ಲೆಗೆಸಿ’ ಚಿತ್ರದಲ್ಲಿ ಮಾಸ್‌ ಹೀರೋ ಆಗಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡ ವಿಹಾನ್‌ ಅವರಿಗೆ ಈಗ ರಕ್ಷಿತ್‌ ಶೆಟ್ಟಿಅವರ ಪರಂವಃ ಸ್ಟುಡಿಯೋ ಸಾಥ್‌ ನೀಡುತ್ತಿದೆ. 

47

ರೋಮ್ಯಾಂಟಿಕ್‌ ಹಾಗೂ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಆರಂಭವಾಗಿವೆ. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಉದ್ಯಮಿ ಹೀಗೆ ಮೂರು ಹಂತಗಳಲ್ಲಿ ಚಿತ್ರದ ನಾಯಕನ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ.

57

ಇನ್ನೂ ರಕ್ಷಿತ್‌ ಶೆಟ್ಟಿಅವರ ಸೆವೆನ್‌ ಆಡ್‌್ಸ ಟೀಮ್‌ನಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿರುವ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಈ ಹಿಂದೆ ರಿಷಬ್‌ ಶೆಟ್ಟಿಅವರ ‘ಕಥಾಸಂಗಮ’ ಚಿತ್ರದಲ್ಲಿ ‘ರೈನ್‌ಬೋ ಲ್ಯಾಂಡ್‌’ ಕತೆಯನ್ನು ನಿರ್ದೇಶಿಸಿದ್ದರು.

67

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಪ್ರತಿಭಾವಂತರು. ‘ನಾಯಕನಿಗೆ ಇಲ್ಲಿ ಮೂರು ಹಂತದ ಪಾತ್ರಗಳಿವೆ. ಈ ಮೂರು ರೀತಿಯ ಕಾಲಘಟ್ಟಕ್ಕೆ ವಿಹಾನ್‌ ಅವರು ಸೂಕ್ತವಾಗುತ್ತಾರೆ.'

77

'ಹೀಗಾಗಿ ನಮ್ಮ ಚಿತ್ರದ ನಾಯಕನ ಪಾತ್ರಕ್ಕೆ ವಿಹಾನ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ. ಅಮೆರಿಕದ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಅವರೇ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿಯಲಿದ್ದಾರೆ. ಗಗನ್‌ ಬದೇರಿಯಾ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

click me!

Recommended Stories