ನಟಿ ಮೋಹಿನಿಗೆ ಇದೆಂಥಾ ಸ್ಥಿತಿ, ಎಲ್ಲವನ್ನೂ ಬಿಟ್ಟು ವೈರಾಗ್ಯದೆಡೆಗೆ ವಾಲಿದ್ರಾ ಖ್ಯಾತ ಹೀರೋಯಿನ್‌!

First Published | Jan 2, 2024, 7:30 PM IST

ಕಲ್ಯಾಣ ಮಂಟಪ, ಶ್ರೀರಾಮ ಚಂದ್ರ, ಸಿಡಿದೆದ್ದ ಪಾಂಡವರು, ಲಾಲಿ, ನಿಶ್ಯಬ್ದ ಚಿತ್ರಗಳನ್ನು ನೋಡಿದಾಗ ನೆನಪಾಗೋದು ಈ ನಟಿಯ ಮುದ್ದು ಮುಖ. ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ತಮ್ಮ ಸೌಂದರ್ಯದಿಂದಲೇ ಮನೆಮಾತಾಗಿದ್ದ ನಟಿ ಮೋಹಿನಿ (ಮಹಾಲಕ್ಷ್ಮೀ) ಇಂದು ಸಂಪೂರ್ಣ ವೈರಾಗ್ಯದೆಡೆಗೆ ವಾಲಿದ್ದಾರೆ.

90ರ ದಶಕದ ಡ್ರೀಮ್ ಗರ್ಲ್‌ ನಟಿ ಮೋಹಿನಿ ಯಾರಿಗೆ ಗೊತ್ತಿಲ್ಲ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಯಶಸ್ಸು ಸಂಪಾದನೆ ಮಾಡಿದ್ದರು.

ಚೈನ್ನೈನ ತಂಜಾವೂರಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಮಹಾಲಕ್ಷ್ಮೀ ಶ್ರೀನಿವಾಸನ್‌ ಎನ್ನುವ ಹೆಸರಿನಲ್ಲಿ ಜನಿಸಿದ್ದ ಮೋಹಿನಿ ಇಂದು ಸಂಪೂರ್ಣವಾಗಿ ಅಮೆರಿಕದ ಪ್ರಜೆಯಾಗಿದ್ದಾರೆ.

Tap to resize

ನಟಿ ಮೋಹಿನಿ ಈಗ ಹಿಂದುವಲ್ಲ. ಅವರು ಕ್ರಿಶ್ಚಿಯನ್‌ ಆಗಿ ಬದಲಾಗಿದ್ದಾರೆ. ಅವರ ಹೆಸರಿನ ಕ್ರಿಸ್ಟಿನಾ ಮೋಹಿನಿ ಶ್ರೀನಿವಾಸನ್‌. ಇನ್ನು ತಮ್ಮ ಪತಿಯಿಂದಲೂ ಅವರು ದೂರವಾಗಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಜೊತೆ 'ಕಲ್ಯಾಣ ಮಂಟಪ' ಚಿತ್ರದಲ್ಲಿ ನಟಿಸುವ ಮೂಲಕ ಮೋಹಿನಿ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ 1992ರಲ್ಲಿ ತೆರೆ ಕಂಡಿತ್ತು. ಅದಾದ ಬಳಿಕ ಕನ್ನಡದಲ್ಲಿ ರವಿಚಂದ್ರನ್‌ ಅವರೊಂದಿಗೆ ಶ್ರೀರಾಮಚಂದ್ರ, ವಿಷ್ಣುವರ್ಧವನ್‌ ಅವರೊಂದಿಗೆ ಲಾಲಿ, ಸಿಡಿದೆದ್ದ ಪಾಂಡವರು ಚಿತ್ರದಲ್ಲಿ ನಟಿಸಿದ್ದರು.
 

ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಹಂತದಲ್ಲಿಯೇ 1999ರಲ್ಲಿ ಭರತ್‌ ಕೃಷ್ಣಸ್ವಾಮಿ ಎನ್ನುವವರನ್ನು ವಿವಾಹವಾಗಿ ಅಮೆರಿಕಕ್ಕೆ ತೆರಳಿದ್ದರು. ಅದಾದ ಐದು ವರ್ಷಗಳ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದರು.

2011ರಲ್ಲಿ ಮಲಯಾಳಂನ ಕಲೆಕ್ಟರ್‌ ಸಿನಿಮಾವೇ ಕೊನೆ. ಅದಾದ ಬಳಿಕ ಮೋಹಿನಿ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅದಕ್ಕೆ ಕಾರಣವೂ ಇದೆ.

ವೈಯಕ್ತಿಕ ಜೀವನದ ಸಮಸ್ಯೆಗಳಿಂದ ನಲುಗಿದ್ದ ಮೋಹಿನಿ ಅವರಿಗೆ ಮೊದಲ ಮಗ ಜನಿಸಿದ ಬಳಿಕ ತೀವ್ರ ಅನಾರೋಗ್ಯ ಕಾಡಿತ್ತು. ಈ ಹಂತದಲ್ಲಿ ವಿಚ್ಛೇದನ ನೀಡಿ ಪತಿ ಬೇರೆ ಮದುವೆಯಾಗಲು ಕೂಡ ನಿರ್ಧಾರ ಮಾಡಿದ್ದರು.

ಆ ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಧ್ಯಾನದ ಮೊರೆ ಹೋದ ಮೋಹಿನಿ ಈಗ ಅಮೆರಿಕದಲ್ಲಿ ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ಕೆಲಸ ಮಾಡುತ್ತಿದ್ದಾಋಏ.

ತೀರಾ ಇತ್ತೀಚೆಗೆ ಮೋಹಿನಿ ಹಾಗೂ ಭರತ್‌ ಬೇರೆ ಬೇರೆಯಾಗಿದ್ದಾರೆ. ಅಂದಿನಿಂದಲೂ ಮೋಹಿನಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಒಬ್ಬರೇ ಇರುವ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

ಇನ್ನು ನಟಿ ಮೋಹಿನಿ ಅವರು ನೀಡಿರುವ ಪ್ರವಚನಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಕ್ಯಾಥೋಲಿಕ್‌ ಸ್ಪೀಕರ್ಸ್‌ ಎನ್ನುವ ವೆಬ್‌ಸೈಟ್‌ ಇವರ ಪ್ರವಚನವನ್ನು ಪ್ರಕಟಿಸಿದೆ.

ಒಂದು ಕಾಲದಲ್ಲಿ ಸಿನಿಮಾ, ನೃತ್ಯ, ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದ ನಟಿ ಮೋಹಿನಿ ಇಂದು ಎಲ್ಲವನ್ನೂ ತೊರೆದು ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ವೈರಾಗ್ಯದೆಡೆಗೆ ಸಾಗುತ್ತಿರುವ ಬಗ್ಗೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Latest Videos

click me!