ಈ ಮೂಲಕ ಕೆಲ ಕಾಲದಿಂದ ಮೌನವಾಗಿದ್ದ ಕೋಟಿಗೊಬ್ಬ 3 ಟೀಮ್‌ನಿಂದ ಭರ್ಜರಿ ಸುದ್ದಿ ಹೊರಬಿದ್ದಂತಾಗಿದೆ.
ಈ ಹಿಂದೆ ಕೋಟಿಗೊಬ್ಬ 3 ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯೂ ಬಂದಿತ್ತು.
ಈಗ ಸುದೀಪ್ ಅವರು ಫ್ಯಾಂಟಮ್ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದು, ಅದರ ಜೊತೆಗೆ ಕೋಟಿಗೊಬ್ಬ 3 ಚಿತ್ರೀಕರಣವನ್ನೂ ನಿಭಾಯಿಸಲಿದ್ದಾರೆ.
ಸದ್ಯಕ್ಕೀಗ ಅಮ್ಮನ ಬತ್‌ಡೇ ಸಂಭ್ರಮಾಚರಣೆಯಲ್ಲಿರುವೆ ಅಂತ ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಸುದೀಪ್ ಹುಟ್ಟು ಹಬ್ಬದ ಪ್ರಯುಕ್ತ ಕಿಚ್ಚ ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮ ತೆರೆಯಲಿದ್ದಾರೆ.
ವೃದ್ಧಾಶ್ರಮಕ್ಕೆ 'ಶಾಂತಿ ನಿವಾಸ' ಎಂದು ಹೆಸರಿಡಲಾಗುತ್ತದೆ.
ಕಿಚ್ಚ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಗುದ್ದಲಿ ಪೂಜೆಗೆ ಕುಟುಂಬದವರಲ್ಲಿ ಯಾರಾದರೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕಾಮನ್ ಡಿಪಿಯನ್ನು ಲಾಂಚ್ ಮಾಡಲಿದ್ದಾರೆ.
ಕೊರೋನಾ ಕಾಟದಿಂದ ಕುಟುಂಬದವರ ಜೊತೆ ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
Suvarna News