ದರ್ಶನ್, ಸುದೀಪ್‌ಗೆ ಮೊದಲ ಹೀರೋಯಿನ್ ಇವರೇ, ಸವಿ ನೆನಪು ಹಂಚಿಕೊಂಡ ರೇಖಾ

Published : Feb 01, 2024, 05:52 PM IST

ಸ್ಪರ್ಶ ಚಿತ್ರದ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟ ರೇಖಾ, ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಮತ್ತು ದರ್ಶನ್ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.   

PREV
17
ದರ್ಶನ್, ಸುದೀಪ್‌ಗೆ ಮೊದಲ ಹೀರೋಯಿನ್ ಇವರೇ, ಸವಿ ನೆನಪು ಹಂಚಿಕೊಂಡ ರೇಖಾ

ಸ್ಪರ್ಶ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ನಾಯಕಿಯಾಗುವ ಮೂಲಕ ಕನ್ನಡ ಸಿನಿರಸಿಕರ ಮನ ಗೆದ್ದ ರೇಖಾ, ಬಳಿಕ ಜನಪ್ರಿಯತೆ ಗಳಿಸಿದ್ದು ಸ್ಪರ್ಶ ರೇಖಾ ಎಂದೇ, ಇಂದಿಗೂ ಸಹ ಜನ ಅವರನ್ನು ಸ್ಪರ್ಶ ರೇಖಾ (Sparsha-Rekha) ಎಂದೇ ಕರೆಯುತ್ತಾರೆ. 

27

ಕನ್ನಡ ಚಿತ್ರರಂಗದ ಟಾಪ್ ನಟರಾದ ಸುದೀಪ್ ಮತ್ತು ದರ್ಶನ್ (Sudeep and Darshan) ಇಬ್ಬರೂ ನಾಯಕರಾಗಿ ಅಭಿನಯಿಸಿದ ಮೊದಲ ಚಿತ್ರಗಳ, ಮೊದಲ ಹಿರೋಯಿನ್ ರೇಖಾ. ಇದೀಗ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 
 

37

ಸ್ಪರ್ಶ ರೇಖಾ ತಮ್ಮ ಸೋಶಿಯಲ್ ಮಿಡಿಯಾದಲ್ಲಿ (spcial media) ದರ್ಶನ್ ಮತ್ತು ಸುದೀಪ್ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಚಿತ್ರ ರಂಗದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 
 

47
Rekha

ರೇಖಾ ಯಾರೇ ನೀ ಅಭಿಮಾನಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಸುದೀಪ್ ನಾಯಕ ನಾಗಿ ಅಭಿನಯಿಸಿದ ಸ್ಪರ್ಶ (Sparsha)ಚಿತ್ರ ಅವರಿಗೆ ಬಹುದೊಡ್ಡ ಹಿಟ್ ನೀಡಿತು. 
 

57

ರೇಖಾ 2000ನೇ ಇಸವಿಯಲ್ಲಿ ಸುದೀಪ್ ಜೊತೆಗೆ ಸ್ಪರ್ಶ ಚಿತ್ರದಲ್ಲಿ ನಟಿಸಿದ್ರೆ, 2002 ರಲ್ಲಿ ದರ್ಶನ್ ನಾಯಕರಾಗಿ ಅಭಿನಯಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್ (Majestic) ಗೂ ಇವರೇ ನಾಯಕಿಯಾಗಿದ್ದರು. 
 

67

ರೇಖಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೆಜೆಸ್ಟಿಕ್ ಮತ್ತು ಸ್ಪರ್ಶ ಸಿನಿಮಾದ ಮೇಕಿಂಗ್ ಸ್ಟಿಲ್ (making still) ಹಂಚಿಕೊಂಡಿದ್ದು, ಜೊತೆಗೆ ಗುಡ್ ಓಲ್ಡ್ ಮೆಮೊರೀಸ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

77

ದರ್ಶನ್ ಮತ್ತು ಸುದೀಪ್ ಚಿತ್ರರಂಗಕ್ಕೆ ಜೊತೆಯಾಗಿಯೇ ಬಂದವರು. ಇಬ್ಬರು ದೊಡ್ಡ ಸ್ಟಾರ್ ನಟರು, ಜೊತೆಗೆ ಕೊಟ್ಯಾಂತರ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಆದರೆ ಇಬ್ಬರ ನಡುವೆ ಮಾತುಕತೆ ಮಾತ್ರ ಇಲ್ಲ. ಇದೀಗ ಇಬ್ಬರ ಜೊತೆಗಿನ ರೇಖಾ ಫೋಟೋ ನೋಡಿದ ಜನರು ದರ್ಶನ್, ಕಿಚ್ಚ ಮತ್ತೆ ಒಂದಾಗಬೇಕು ಎಂದು ಬಯಸಿದ್ದಾರೆ. 

Read more Photos on
click me!

Recommended Stories