ಕನ್ನಡ ಚಿತ್ರರಂಗ ಡೈನಾಮಿಕ್ ನಟ ದೇವರಾಜ್ ಮಕ್ಕಳಾದ ಪ್ರಜ್ವಲ್ ಮತ್ತು ಪ್ರಣಾಮ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಟ್ಯಾಲೆಂಟ್ ನೋಡದೆ ನೆಪೋಟಿಸಂ ಎನ್ನುವ ಜನರಿಗೆ ತಮ್ಮ ಅಭಿಪ್ರಯ ಹೇಳಿದ್ದಾರೆ.
27
'ಮೊದಲನೇ ಸಿನಿಮಾದಲ್ಲಿ ದೇವರಾಜ್ (Devaraj) ಅವರ ಮಗ ಇದ್ದಾನೆ ಎಂದು ನೋಡಲು ಬರುತ್ತಾರೆ. ಎರಡನೇ ಸಿನಿಮಾ ನೋಡಲು ಬರುತ್ತಾರೆ'
37
ಆಗಲೂ ನನ್ನ ಪ್ರತಿಭೆಯಿಂದ ಜನರನ್ನು ಇಂಪ್ರೆಸ್ ಮಾಡಿಲ್ಲ ಅಂದ್ರೆ ದೇವರಾಜ್ ಅವರ ಸಿನಿಮಾ ನೋಡುತ್ತಾರೆ ನನ್ನ ಸಿನಿಮಾ ಯಾಕೆ ನೋಡುತ್ತಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪ್ರಜ್ವಲ್ ಹೇಳಿದ್ದಾರೆ.
47
ನಾವು ಪ್ರತಿಯೊಂದು ಸಿನಿಮಾಗೂ ಶ್ರಮ ಹಾಕಬೇಕು. ಸ್ಕ್ರೀನ್ ಮೇಲೆ ಜನರು ನಮ್ಮನ್ನು ನೋಡಿ ಇಷ್ಟ ಪಟ್ಟರೆ ಮಾತ್ರ ಇಷ್ಟು ಸಿನಿಮಾಗಳನ್ನು ಮಾಡಲು ಸಾಧ್ಯವಾಗಿರುವುದು.
57
ಬೇರೆ ಬೇರೆ ಜಾನರ್ ಸಿನಿಮಾಗಳನ್ನು ಮಾಡಲು ತುಂಬಾ ಇಷ್ಟ ಪಡುತ್ತೀನಿ. ಸಾಕಷ್ಟು ಪಾತ್ರಗಳು ನನ್ನ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಪಾತ್ರದಿಂದ ಹೊರ ಬರಲು ಕಷ್ಟವಾಗುತ್ತದೆ.
67
ಈಗ ತುಂಬಾ ಪ್ರಾಜೆಕ್ಟ್‌ಗಳು ಸಿಕ್ಕಿದೆ. ಆಕ್ಷನ್ ಸಿನಿಮಾ ಮಾಫಿಯಾ ರಿಲೀಸ್‌ಗೆ ಸಜ್ಜಾಗಿದೆ, ಗಣ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಅದು ರೆಡಿಯಾಗುತ್ತಿದೆ.
77
ಇದಾದ ಮೇಲೆ ರಾಕ್ಷಕ್ ಸಿನಿಮಾ ಮಾಡುತ್ತಿರುವೆ. ಅದೊಂದು ದೆವ್ವ ಸಿನಿಮಾ. ಈ ಚಿತ್ರದಲ್ಲಿ ಪ್ರಜ್ವಲ್ ನಟನೆ ಅದ್ಭುತ ಎಂದು ಪತ್ನಿ ರಾಗಿಣಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಸಿನಿಮಾ ಕೂಡ ಸಹಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.