ರಾಜಸ್ಥಾನದಲ್ಲಿ ಫೋಟೋಗ್ರಫಿ ಕಲಿಯುತ್ತಾ ಎಂಜಾಯ್ ಮಾಡ್ತಿದ್ದಾರೆ ಸೋನು ಗೌಡ!

Published : Dec 03, 2023, 03:18 PM IST

ಕನ್ನಡ ಸಿನಿಮಾ ರಂಗದಲ್ಲಿ ತನ್ನ ವಿಭಿನ್ನ ಅಭಿನಯದಿಂದ ಗುರುತಿಸಿಕೊಂಡ ನಟಿ ಸೋನು ಗೌಡ, ಸದ್ಯ ರಾಜಸ್ಥಾನ ಪ್ರವಾಸದಲ್ಲಿದ್ದು, ತನ್ನ ಫ್ರೆಂಡ್ಸ್ ಜೊತೆ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. 

PREV
18
ರಾಜಸ್ಥಾನದಲ್ಲಿ ಫೋಟೋಗ್ರಫಿ ಕಲಿಯುತ್ತಾ ಎಂಜಾಯ್ ಮಾಡ್ತಿದ್ದಾರೆ ಸೋನು ಗೌಡ!

ಕನ್ನಡ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ಸೋನು ಗೌಡ (Sonu Gowda) ಸಿನಿಮಾಗಳಿಗಿಂತ ಹೆಚ್ಚಾಗಿ ಟ್ರಾವೆಲ್ ಮಾಡೋದರಲ್ಲೇ ಬ್ಯುಸಿಯಾಗಿರ್ತಾರೆ. ಹೆಚ್ಚಾಗಿ ತಮ್ಮ ಸಹೋದರಿ ನೇಹಾ ಗೌಡ ಜೊತೆ ಪ್ರವಾಸ ಮಾಡುವ ಸೋನು, ಈ ಬಾರಿ ಫೋಟೋಗ್ರಾಫಿ ತಂಡದ ಜೊತೆ ಟ್ರಾವೆಲ್ ಮಾಡಿದ್ದಾರೆ. 

28

ಈ ಬಾರಿ ರಾಯಲ್ ಹಿನ್ನೆಲೆ ಇರುವಂತಹ ರಾಜಸ್ಥಾನಕ್ಕೆ (Rajasthan) ಭೇಟಿ ನೀಡಿರುವ ಸೋನು ಗೌಡ, ಅಲ್ಲಿ ವಿಭಿನ್ನ ಪ್ರದೇಶಗಳಿಗೆ ತೆರಳಿ ಸಾಕಷ್ಟು ಎಂಜಾಯ್ ಮಾಡುತ್ತಾ, ಫೋಟೋ ಶೂಟ್ ಮಾಡುತ್ತ, ಅಭಿಮಾನಿಗಳ ಜೊತೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

38

ಕೈಯಲ್ಲಿ ಕ್ಯಾಮೆರಾ ಹಿಡಿದು, ರಾಜಸ್ಥಾನದ ಮರುಭೂಮಿಯಿಂದ ಹಿಡಿದು, ಸುಂದರ, ರಮಣೀಯ ತಾಣಗಳಿಗೆ ತೆರಳಿ ಎಂಜಾಯ್ ಮಾಡ್ತಿದ್ದಾರೆ. ಇವರು ಜೈಪುರ್ , ಪುಷ್ಕರ್, ಜೋಧ್ ಪುರ್ ಮತ್ತು ಜೈಸಲ್ಮೇರ್ ಗೆ ಭೇಟಿ ನೀಡಿದ್ದಾರೆ. 

48

ಇಲ್ಲಿನ ಪ್ರತಿಯೊಂದು ಸ್ಥಳವು ತನ್ನದೇ ಆದ ಸೌಂದರ್ಯ ಮತ್ತು ಅನನ್ಯತೆಯನ್ನು ಹೊಂದಿದೆ, ಕಲೆ, ವರ್ಣಚಿತ್ರಗಳು, ಆಭರಣಗಳು, ಕರಕುಶಲ ವಸ್ತುಗಳಿಂದ ಈ ತಾಣಗಳು ಅತ್ಯಂತ ಶ್ರೀಮಂತವಾಗಿದೆ.. ನೀವು ಕಲೆ ಮತ್ತು ಕಲಾವಿದರನ್ನು ಒಂದೇ ಕಡೆ ಭೇಟಿಯಾಗಬಹುದಾದ ಸ್ಥಳ ಇದು ಎಂದು ಸೋನು ಗೌಡ ಬರೆದುಕೊಂಡಿದ್ದಾರೆ.

58

ರಾಜ್ಯದಲ್ಲಿ ಅನೇಕ ಕೋಟೆಗಳಿವೆ, ಅವುಗಳಲ್ಲಿ ಪ್ರತಿಯೊಂದೂ ಸಂಜಯ್ ಲೀಲಾ ಬನ್ಸಾಲಿ ಸರ್ ಚಲನಚಿತ್ರ ಸೆಟ್ ಗೆ ಪ್ರವೇಶಿಸಿದಂತೆ ..ಅನಿಸಿತು. ಬಹುಶಃ ಇಲ್ಲಿನ ಪ್ರದೇಶಗಳೇ ಹೆಚ್ಚಿನ ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿ ನೀಡುತ್ತದೆ.. ಕೋಟೆಗಳಿಂದ ಹಿಡಿದು ವರ್ಣಚಿತ್ರಗಳವರೆಗೆ, ಸಿಹಿತಿಂಡಿಗಳ ರಕ್ಷಕರವರೆಗೆ ನಗರದ ಪ್ರತಿಯೊಂದು ಭಾಗವನ್ನು ಎಂಜಾಯ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡೀದ್ದಾರೆ. 

68

ಸೋನು ಗೌಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿರುವಂತೆ ಅವರು ಫೋಟೋಗ್ರಾಫಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಫೋಟೋಗ್ರಾಫಿ (photography) ಕಲಿಯಲು ಈ ಬಾರಿ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಇತರೆಡೆಯಿಂದ ಬಂದ ಹಲವು ಜನರ ಜೊತೆಗೆ ಸೋನು ಗೌಡ ಫೋಟೋಗ್ರಾಫಿ ಮಾಡಿದ್ದಾರೆ. 

78

ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿರುವ ಸೋನು ಗೌಡ, ಅಲ್ಲಿನ ಪ್ರತಿಯೊಂದು ಪ್ರದೇಶ, ಸಂಸ್ಕೃತಿ, ಕಲೆ, ಆಹಾರ ಎಲ್ಲವನ್ನೂ ಸಹ ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ ಸೋನು ಗೌಡ ತಮ್ಮ ಫೋಟೋಗ್ರಫಿಗೆ ಸಂಬಂಧಿಸಿದಂತೆ ಇನ್ಸ್ಟಾ ಪೇಜ್ ಸಹ ಓಪನ್ ಮಾಡಿದ್ದು, ಅವರು ಕ್ಲಿಕ್ ಮಾಡಿದ ಸುಂದರ ಫೋಟೋಗಳನ್ನು ಇಲ್ಲಿ ಕಾಣಬಹುದು. 
 

88

ಇನ್ನು ಕರಿಯರ್ ಬಗ್ಗೆ ಹೇಳೋದಾದ್ರೆ ಈ ವರ್ಷ ಸೋನು ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ವಿಜಯ್ ರಾಘವೇಂದ್ರ ಜೊತೆಗೆ ಮರೀಚಿ ಸಿನಿಮಾದಲ್ಲಿ ನಟಿಸಿದ್ದು, ಡಿಸೆಂಬರ್ ೮ ರಂದು ಬಿಡುಗಡೆಯಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. 
 

Read more Photos on
click me!

Recommended Stories