Salaarನಲ್ಲಿ ನಾನು ಯಾರಿಗೆ ವಿಲನ್ ಅನ್ನೋದು ಪ್ರೇಕ್ಷಕರಿಗೂ ಸರ್ಪ್ರೈಸ್: ನವೀನ್‌ ಶಂಕರ್‌

First Published | Dec 2, 2023, 3:50 PM IST

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾದ ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದೆ. ಈ ಟ್ರೈಲರ್‌ನಲ್ಲಿ ಕನ್ನಡ ನಟರೊಬ್ಬರನ್ನು ಕಂಡು ಕನ್ನಡ ಸಿನಿಪ್ರೇಕ್ಷಕರು ಖುಷಿಯಾಗಿದ್ದಾರೆ. 

ಸಲಾರ್ ಸಿನಿಮಾದಲ್ಲಿ ಕನ್ನಡ ನಟ ನವೀನ್‌ ಶಂಕರ್‌ ನಟಿಸಿದ್ದಾರೆ. ಸಲಾರ್‌ನಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿರುವ ಈ ನಟ ಕನ್ನಡದಲ್ಲಿ ಗುಳ್ಟು, ಹೊಯ್ಸಳ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಸಲಾರ್‌ ಸಿನಿಮಾದಲ್ಲಿ ಕನ್ನಡ ನಟ ನವೀನ್‌ ಶಂಕರ್‌ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವೇ ನಿಮಿಷ ನಟಿಸಿದರೂ ಇವರ ಪಾತ್ರ ಪ್ರೇಕ್ಷಕರ ಮೇಲೆ ಪರಿಣಾಮ ಬೀರಲಿದೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನವೀನ್‌ ಶಂಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

Tap to resize

ನನ್ನ ಪಾತ್ರಕ್ಕೆ ತೂಕವಿದೆ. ನೋಡವವರಿಗೆ ಪ್ರಭಾವ ಬೀರುವಂತಹ ಪಾತ್ರ ನನ್ನದು ಎಂದು ಹೇಳಬಹುದು. ಸಲಾರ್ 2ನೇ ಪಾರ್ಟ್ನಲ್ಲೂ ನನ್ನ ಪಾತ್ರ ಮುಂದುವರೆಬಹುದು ಅದರ ಬಗ್ಗೆ ನನಗೂ ಖಚಿತ ಮಾಹಿತಿ ಇಲ್ಲ. 

‘ಸಲಾರ್’ ಪಾರ್ಟ್ 1ನಲ್ಲಿ ನಾನು ಅದೆಷ್ಟೇ ನಿಮಿಷ ನಟಿಸಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಪಾತ್ರ ಕೂರಲಿದೆ ಎಂಬ ನಂಬಿಕೆ ನನಗಿದೆ. ಖಳನಾಯಕನ ಪಾತ್ರದಲ್ಲಿ ನಾನು ನಟಿಸಿದ್ದೀನಿ ಎಂದು ನವೀನ್ ಮಾತನಾಡಿದ್ದಾರೆ.

ಇಲ್ಲಿ ನಾನು ಯಾರಿಗೆ ವಿಲನ್ ಅನ್ನೋದು ಪ್ರೇಕ್ಷಕರಿಗೂ ಒಂದು ಸರ್ಪ್ರೈಸ್ ಇರಲಿ. ‘ಸಲಾರ್’ ಸಿನಿಮಾ ನೋಡಲಿ, ನೆಗೆಟಿವ್ ಶೇಡ್ ಕೊಟ್ಟಿದ್ದರೂ ನನ್ನ ಪಾತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. 

ತೆರೆಯ ಮೇಲೆ ಖಂಡಿತಾ ನೋಡುವವರಿಗೆ ಮೋಡಿ ಮಾಡುತ್ತದೆ ಎಂದು ಖುಷಿಯಿಂದ ‘ಸಲಾರ್’ ಚಿತ್ರದಲ್ಲಿನ ಪಾತ್ರದ ಬಗ್ಗೆ ನವೀನ್ ಶಂಕರ್ ಹೇಳಿದ್ದಾರೆ. ಹಾಗಾದ್ರೆ ಪ್ರಭಾಸ್‌ಗೆ ನವೀನ್‌ ಶಂಕರ್‌ ಸೆಡ್ಡು ಹೊಡೆಯುತ್ತಾರಾ? ಎಂಬುದಕ್ಕೆ ಸಲಾರ್‌ ಬಿಡುಗಡೆಯಾದ ಮೇಲೆ ಗೊತ್ತಾಗಲಿದೆ.

ಸದ್ಯ ರಿಲೀಸ್‌ ಆಗಿರೋ ಸಲಾರ್‌ ಟ್ರೈಲರ್‌ನಲ್ಲಿ ನವೀನ್‌ ಶಂಕರ್‌ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ನವೀನ್‌ ಇರುವ ಸಣ್ಣ ತುಣುಕನ್ನ ಚಿತ್ರತಂಡ ಕೂಡ ರಿವೀಲ್‌ ಮಾಡಿದೆ. ಇನ್ನು ಡಾಲಿ ಧನಂಜಯ್‌ ಅವರ ಗುರುದೇವ್‌ ಹೊಯ್ಸಳ ಚಿತ್ರದಲ್ಲಿ ನವೀನ್ ವಿಲನ್‌ ಆಗಿ ಮಿಂಚಿದ್ದರು. 

Latest Videos

click me!