ಆಫ್ರಿಕಾ ಟ್ರಿಪ್‌ನಲ್ಲಿ ಬೀಫ್‌ & ಪೋರ್ಕ್‌ ಫುಡ್‌ ಇಷ್ಟ ಆಯ್ತು ಎಂದ ನಟಿ, ಇದೆಂಥಾ ಕರ್ಮ ಎಂದ ನೆಟ್ಟಿಗರು!

First Published | Dec 2, 2023, 5:28 PM IST


ನಟಿ ನಿಧಿ ಸುಬ್ಬಯ್ಯ ತಮ್ಮ ಸ್ನೇಹಿತರ ಜೊತೆಗೂಡಿ ಆಫ್ರಿಕಾ ಸಫಾರಿ ಮುಗಿಸಿ ಬಂದಿದ್ದಾರೆ. ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಟ್ರಿಪ್‌ನ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ.

ಪಂಚರಂಗಿ, ಅಣ್ಣಾಬಾಂಡ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ನಿಧಿ ಸುಬ್ಬಯ್ಯ ಇತ್ತೀಚೆಗೆ ಆಫ್ರಿಕಾ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ತಮ್ಮ ಆಫ್ರಿಕಾ ಪ್ರವಾಸದ ಕಥೆಗಳನ್ನು ಹಂಚಿಕೊಂಡಿರುವ ನಿಧಿ ಸುಬ್ಬಯ್ಯ ಅವರಿಗೆ ಆಫ್ರಿಕಾದಲ್ಲಿ ನಿಮಗೆ ಯಾವ ಫುಡ್‌ ಬಹಳ ಇಷ್ಟವಾಯಿತು ಎಂದು ಸಿನಿಮಾ ಪತ್ರಕರ್ತೆಯೊಬ್ಬರು ಪ್ರಶ್ನೆ ಮಾಡಿದ್ದಾರೆ.

Tap to resize

ಆಫ್ರಿಕಾ ಪ್ರವಾಸದ ವೇಳೆ ಅಲ್ಲಿನ ಸ್ಥಳೀಯ ಫುಡ್‌ಗಳೊಂದಿಗೆ ಬೀಫ್‌, ಫೋರ್ಕ್‌ ಫುಡ್‌ ಇಷ್ಟ ಆಯ್ತು. ಅದನ್ನು ನಾನು ಎಂಜಾಯ್‌ ಮಾಡುತ್ತಾ ತಿಂದಿದ್ದೇನೆ ಎಂದು ಹೇಳಿದ್ದಾರೆ. 

ಕೀನ್ಯಾದಲ್ಲಿ ಭಾರತೀಯ ಮೂಲದವರು ಹೆಚ್ಚಾಗಿ ಇರುವ ಕಾರಣ, ಚಪಾತಿ, ದಾಲ್‌ ಹಾಗೂ ರೈಸ್‌ ಫುಡ್‌ಗಳನ್ನು ತಿಂದಿದ್ದೇನೆ ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ. 

ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರೀಸ್‌ಗಳಲ್ಲಿ ಆಫ್ರಿಕಾ ಟ್ರಿಪ್‌ನ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ನಿಧಿ ಸುಬ್ಬಯ್ಯ ಹಂಚಿಕೊಂಡಿದ್ದಾರೆ.

ವಿಶ್ವದಲ್ಲಿಯೇ ಅತ್ಯಂತ ಪ್ರಖ್ಯಾತವಾಗಿರುವ ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೂ ಅವರು ಭೇಟಿ ನೀಡಿ, ಪ್ರಾಣಿಗಳ ಚಿತ್ರವನ್ನು ಸೆರೆ ಹಿಡಿದ್ದಾರೆ.

ಹಂಚಿಕೊಂಡಿರುವ ಒಂದು ವಿಡಿಯೋದಲ್ಲಿ ಕಾಡಿನ ಒಳಗಡೆ ಪೊದೆಯಲ್ಲಿ ಬೆಳಗಿನ ಬ್ರೇಕ್‌ಫಾಸ್ಟ್‌ ಮಾಡಿದನ್ನು ಅವರು ಹೇಳಿಕೊಂಡಿದ್ದಾರೆ.

ಕಾಡಿನ ಪೊದೆಗಳ ನಡುವೆ ಬೆಳಗಿನ ತಿಂಡಿ ತಿನ್ನೋದು ಎಷ್ಟು ಸ್ಪೆಷಲ್‌ ಆಗಿರುತ್ತದೆ. ತಿಂಡಿ ತಿನ್ನುತ್ತಾ ಹಿಪ್ಪೋಪಾಟಮಸ್‌ಗಳು ಈಜಾಡುವುದು ನೋಡುವುದೇ ಖುಷಿ ಎಂದು ಅವರು ಬರೆದಿದ್ದಾರೆ.

ಅವರ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಇದನ್ನೇ ಕನ್ನಡದಲ್ಲಿ ಟ್ರಾನ್ಸ್‌ಲೇಟ್‌ ಮಾಡಿದ್ರೆ ' ಪೊದೆ ಸಂಧಿಯಲ್ಲಿ ತಿಂಡಿ ತಿಂದ್ವಿ' ಅಂತಾ ಆಗುತ್ತದೆ ಎಂದು ಒಬ್ಬರು ಬರೆದಿದ್ದಾರೆ.

ಮ್ಮ ಹಳ್ಳಿ ಕಡೆ ಕೆರೆ ಕಡೆ ಹೋಗೊ ಪ್ಲೇಸ್ ಕೂಡ ಹೀಗೆ ಇರುತ್ತೆ ಎಂದು ನಿಧಿ ಸುಬ್ಬಯ್ಯ ಅವರ ಈ ವಿಡಿಯೋಗೆ ಫ್ಯಾನ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ನಿಧಿ ಸುಬ್ಬಯ್ಯ ಅವರೊಂದಿಗೆ  ವೈಲ್ಡ್‌ಲೈಫ್‌ ಉತ್ಸಾಹಿ ಡಾ.ಬಿ ಶಶಾಂಕ್‌ ಬಿ ಗೌಡ ಕೂಡ ಪ್ರಯಾಣಿಸಿದ್ದಾರೆ. ತಮ್ಮ ಎಲ್ಲಾ ವಿಡಿಯೋಗಳನ್ನು ತಮ್ಮದೇ ಐಫೋನ್‌ 12 ಪ್ರೋ ಮ್ಯಾಕ್ಸ್‌ನಲ್ಲಿ ತೆಗೆದಿದ್ದಾಗಿ ಹೇಳಿಕೊಂಡಿದ್ದಾರೆ.

Latest Videos

click me!