ಒಂದೇ ದಿನ, ಡಬಲ್ ಸಂಭ್ರಮ…. ಪತ್ನಿ, ಬೆಸ್ಟ್ ಫ್ರೆಂಡ್ ಸೋನಾಲ್’ಗೆ ಡಬಲ್ ವಿಶ್ ಮಾಡಿದ ತರುಣ್ ಸುಧೀರ್

Published : Aug 11, 2026, 04:52 PM IST

ನಟ, ನಿರ್ದೇಶಕ, ನಿರ್ಮಾಪಕ ತರುಣ್ ಸುಧೀರ್ ಜೀವನದಲ್ಲಿ ಇಂದು ಡಬಲ್ ಸಂಭ್ರಮ, ಹಾಗಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಸುಂದರ, ಅನ್ ಸೀನ್ ಫೋಟೊಗಳನ್ನು ಹಂಚಿಕೊಂಡು, ಪತ್ನಿ ಸೋನಲ್ ಮೊಂಥೆರೋಗೆ ಡಬಲ್ ಶುಭಾಶಯ ತಿಳಿಸಿದ್ದಾರೆ ತರುಣ.

PREV
17
ಡಬಲ್ ಸಂಭ್ರಮದಲ್ಲಿ ತರುಣ್ ಸುಧೀರ್

ಚಂದನವನದ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ತರುಣ್ ಸುಧೀರ್ ಜೀವನದಲ್ಲಿ ಇಂದು ಡಬಲ್ ಸಂಭ್ರಮ. ಹಾಗಾಗಿ ಪತ್ನಿ ಜೊತೆಗಿನ ಮುದ್ದಾದ, ಅನ್ ಸೀನ್ ಫೋಟೊಗಳನ್ನು ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ.

27
ಏನಿದು ಡಬಲ್ ಸಂಭ್ರಮ?

ಆಗಸ್ಟ್ 11 ರಂದು ಸೋನಲ್ ಮೊಂಥೆರೋ ಹುಟ್ಟುಹಬ್ಬವೂ ಹೌದು, ಜೊತೆಗೆ ಇಬ್ಬರ ಮದುವೆ ವಾರ್ಷಿಕೋತ್ಸವವೂ ಹೌದು, ಹಾಗಾಗಿ, ತಮ್ಮ ಜೀವನದಲ್ಲಿ ಪತ್ನಿಯಾಗಿ, ಗೆಳತಿಯಾಗಿ, ಜೊತೆಯಾದ ಸೋನಲ್ ಅವರಿಗೆ ಹುಟ್ಟುಹಬ್ಬ ಹಾಗೂ ಎರಡನೇ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

37
ನನ್ನ ಎಲ್ಲವೂ ಅವಳೇ

ನನ್ನ ಹೆಂಡತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಸಹೋದ್ಯೋಗಿ ಮತ್ತು ಮುಖ್ಯವಾಗಿ ನನ್ನ ಮನೆಯೇ ಆಗಿರುವ ಸೋನಲ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಮತ್ತು ನಮ್ಮ 2 ನೇ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಮುದ್ದಾಗಿ ಶುಭ ಕೋರಿದ್ದಾರೆ.

47
ನಿನ್ನ ಸುಂದರ ಹೃದಯವನ್ನೂ ಪ್ರೀತಿಸುತ್ತೇನೆ

ನಿನ್ನ ಕ್ಯೂಟ್ ನೆಸ್, ನಿನ್ನ ಸಿಲ್ಲಿ ಜೋಕ್ಸ್ (ಹೌದು, ನಾನು ನಗುವಂತೆ ನಟಿಸಬೇಕಾದ ಜೋಕುಗಳು ಕೂಡ), ನಿನ್ನ ಮ್ಯಾಡ್ನೆಸ್, ನಿನ್ನ ರಾಂಡಮ್ ಮೂಡ್, ನಿನ್ನ ಕಾಳಜಿ ಮತ್ತು ಇದೆಲ್ಲದರ ಹಿಂದಿನ ಆ ಸುಂದರ ಹೃದಯ. ಇವೆಲ್ಲವನ್ನೂ ನಾನು ಪ್ರೀತಿಸುತ್ತೇನೆ. ಎಂದು ಪತ್ನಿ ಸೋನಲ್ ಕಾಲೆಳೆದಿದ್ದಾರೆ ತರುಣ.

57
ಪತ್ನಿಗೆ ಥ್ಯಾಂಕ್ಯೂ ಎಂದ ತರುಣ್

But jokes apart ನನ್ನನ್ನು ಸಂತೋಷವಾಗಿಡಲು, ನಮ್ಮ ಕುಟುಂಬವನ್ನು ಸಂತೋಷವಾಗಿಡಲು ಮತ್ತು ನಮ್ಮ ಮನೆಯನ್ನು ಪ್ರೀತಿಯಿಂದ ತುಂಬಲು ನೀನು ಮಾಡುವ ಪ್ರತಿಯೊಂದು ಸಣ್ಣ ಪ್ರಯತ್ನವನ್ನೂ ನಾನು ನೋಡುತ್ತೇನೆ. ನನ್ನ ಕುಟುಂಬವನ್ನು ನಿನ್ನ ಸ್ವಂತ ಕುಟುಂಬದಂತೆ ಪ್ರೀತಿಸಿದ್ದಕ್ಕಾಗಿ, ತುಂಬಾ ಆಳವಾಗಿ ಕಾಳಜಿ ವಹಿಸಿದ್ದಕ್ಕಾಗಿ ಮತ್ತು ಕೆಲವೊಮ್ಮೆ ಗಮನಿಸದೆ ಹೋಗುವ ಆದರೆ ಎಂದಿಗೂ ಮೆಚ್ಚುಗೆ ಪಡೆಯದ ಅನೇಕ ಕೆಲಸಗಳನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು.

67
ಹ್ಯಾಪಿ ಬರ್ತ್ ಡೇ ಬಂಗಾರ

ನಾನು ನಿನ್ನನ್ನು ಬೇಷರತ್ತಾಗಿ ಪ್ರೀತಿಸುತ್ತೇನೆ - ನೀನು ಮುದ್ದಾಗಿದ್ದಾಗ, ನೀನು ಕೋಪಗೊಂಡಾಗ, ನೀನು ಸಿಲ್ಲಿಯಾಗಿದ್ದಾಗ, ನೀನು ಅಸಾಧ್ಯ ಎಂಬಂತೆ ಇದ್ದಾಗ ಮತ್ತು ವಿಶೇಷವಾಗಿ ನೀನು ನೀನಾಗಿದ್ದಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ಪ್ರತಿ ದೀರ್ಘ ದಿನದ ನಂತರ ನಾನು ಮತ್ತೆ ಬರಲು ಬಯಸುವ ವ್ಯಕ್ತಿ ನೀನು. ನೀನು ನನ್ನ ಸಾಂತ್ವನ, ನನ್ನ ಸಂತೋಷ, ನನ್ನ ವ್ಯಕ್ತಿ... ನನ್ನ ಮನೆ. ಹ್ಯಾಪಿ ಬರ್ತ್ ಡೇ ಬಂಗಾರ, ಹ್ಯಾಪಿ ಸೆಕೆಂಡ್ ಆನಿವರ್ಸರಿ ಎಂದು ಶುಭ ಕೋರಿದ್ದಾರೆ.

77
ಜೊತೆಯಾಗಿ ಕೊನೆಯವರೆಗೂ ಖುಷಿಯಾಗಿರೋಣ

ಕೊನೆಯವರೆಗೂ ಒಟ್ಟಿಗೆ ಇರೋಣ, ಕೆಟ್ಟ ಜೋಕ್‌ಗಳಿಗೆ ಜೊತೆಯಾಗಿ ನಗೋಣ, ಸಣ್ಣ ವಿಷಯಕ್ಕೆ ಜಗಳವಾಡೋಣ, ಜೊತೆಯಾಗಿ ಪ್ರಯಾಣಿಸುವುದು, ತಿನ್ನುವುದು, ನಮ್ಮ ಜೀವನದುದ್ದಕ್ಕೂ ಒಬ್ಬರನ್ನೊಬ್ಬರು ಪ್ರೀತಿಸುವುದು... ಮತ್ತು ಪ್ರತಿದಿನ ಒಬ್ಬರನ್ನೊಬ್ಬರು ಆರಿಸಿಕೊಳ್ಳುವುದು ಹೀಗೆ ಜೀವನ ಮುಂದುವರೆಯಲಿ. I love you. Unconditionally. Always. ಎಂದು ಪತ್ನಿಗೆ ಪ್ರೀತಿಯಿಂದ ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories