ಚಂದನವನದ ಮುದ್ದಾದ ಜೋಡಿಗಳಾದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಕಬಿನಿಯಲ್ಲಿ ಕೊಂಚ ರೊಮ್ಯಾಂಟಿಕ್ ಸಮಯ ಕಳೆಯುತ್ತಿದ್ದಾರೆ. ಅಭಿಮಾನಿಗಳು ನಟಿಯ ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ಚಂದನವನದ ಮುದ್ದಾದ ಜೋಡಿಗಳಲ್ಲಿ ಒಬ್ಬರಾದ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಏಕಾಂತದ ಸಮಯವನ್ನು ಅರಸಿ ಕಾಡಿನ ಕಡೆಗೆ ಹೊರಟಿದ್ದಾರೆ. ಹೌದು ಕಬಿನಿಯಲ್ಲಿ ಪ್ರಕೃತಿಯ ನಡುವೆ ಜೋಡಿ ಎಂಜಾಯ್ ಮಾಡ್ತಿದೆ.
27
ಕಬಿನಿಯಲ್ಲಿ ತರುಣ್-ಸೋನಲ್
ಜೋಡಿ ಹಕ್ಕಿಗಳಾದ ತರುಣ್ ಮತ್ತು ಸೋನಲ್ ಕಬಿನಿಯಲ್ಲಿ ಕಳೆದ ಕೆಲವು ರೊಮ್ಯಾಂಟಿಕ್ ಕ್ಷಣಗಳ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಸೋನಲ್. ತಮ್ಮ ಫೋಟೊಗಳ ಜೊತೆಗೆ Random moments , Great memories ಎಂದು ಬರೆದುಕೊಂಡಿದ್ದಾರೆ.
37
ರೋಮ್ಯಾಂಟಿಕ್ ಫೋಟೊ
ಜೋಡಿ ತುಂಬಾನೆ ಮುದ್ದು ಮುದ್ದಾದ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಈ ಜೋಡಿಯ ಫೋಟೊಗಳನ್ನು ಮೆಚ್ಚಿಕೊಂಡಿದೆ. ಅದರಲ್ಲೂ ಸೋನಲ್ ಅವ್ರನ್ನು ನೋಡಿ ಮತ್ತಷ್ಟು ಖುಷಿಯಾಗಿದ್ದಾರೆ ಫ್ಯಾನ್ಸ್.
ಸೋನಲ್ ಶೇರ್ ಮಾಡಿರುವ ಎಲ್ಲಾ ಫೋಟೊಗಳಲ್ಲೂ ಕುತ್ತಿಗೆಯಲ್ಲಿ ಕರಿಮಣಿ ಮತ್ತು ಕಾಲಲ್ಲಿ ಕಾಲುಂಗುರ ಕಾಣಿಸುತ್ತಿದ್ದು, ಇದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಇದನ್ನ ನೋಡಿ ನಿಮ್ಮ ಮೇಲಿನ ಗೌರವ ಇನ್ನೂ ಜಾಸ್ತಿ ಆಗಿದೆ ಎಂದಿದ್ದಾರೆ.
57
ಪರ್ಫೆಕ್ಟ್ ಜೋಡಿ ಎಂದ ಫ್ಯಾನ್ಸ್
ನೀವಿಬ್ಬರೂ ನಿಜವಾಗಿಯೂ ಸುಂದರವಾಗಿದ್ದೀರಿ, ನೀವು ಹೇಗೆ ಕಾಣುತ್ತೀರಿ ಎಂಬುದರಲ್ಲಿ ಮಾತ್ರವಲ್ಲ, ನೀವು ಹೇಗೆ ಪ್ರೀತಿಸುತ್ತೀರಿ ಎಂಬುದರಲ್ಲೂ . ನಿಮ್ಮ ನಗು ನಿಮ್ಮ ಆತ್ಮೀಯತೆಯನ್ನು ಮತ್ತು ನಿಮ್ಮ ಬಂಧವು ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ಒಟ್ಟಿಗೆ, ನೀವು ನಿಮ್ಮ ಸುತ್ತಲಿನ ಪ್ರತಿಯೊಂದು ಹೃದಯವನ್ನು ಬೆಳಗಿಸುವ ಹೊಳಪನ್ನು ಸೃಷ್ಟಿಸುತ್ತೀರಿ. ಪರಿಪೂರ್ಣ ಜೋಡಿ !!! ಒಳಗೆ ಮತ್ತು ಹೊರಗೆ ಸುಂದರ. ಎಂದು ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್.
67
ಸೋನಲ್ ಮೊಂಥೆರೋ
ನಟಿ ಸೋನಲ್ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ. ಇವರು ಕೊನೆಯದಾಗಿ ಮಾದೇವ ಹಾಗೂ ಲವ್ ಮ್ಯಾಟರ್ ಸಿನಿಮಾದಲ್ಲಿ ನಟಿಸಿದ್ದು. ಸದ್ಯ ಬುದ್ದಿವಂತ 2, ಮಾರ್ಗರೇಟ್ ಲವರ್ ಅಫ್ ರಾಮಚಾರಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
77
ತರುಣ್ ಸುಧೀರ್
ತರುಣ್ ಸುಧೀರ್ ಇಲ್ಲಿವರೆಗೂ ‘ಮಹಾನಟಿ’ ಸೀಸನ್ 2 ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮಹಾನಟಿ ಕೊನೆಯಾಗಿದ್ದು, ಹಾಗಾಗಿ ಬಿಡುವು ಮಾಡಿಕೊಂಡು ಪತ್ನಿ ಜೊತೆ ಕಬಿನಿ ವೈಲ್ಡ್ ಲೈಫ್ ಲೋಕದಲ್ಲಿ ಏಕಾಂತದಲ್ಲಿ ಸಮಯ ಕಳೆದು ಬಂದಿದ್ದಾರೆ.