ಡಿಂಪಲ್ ಕ್ವೀನ್ ರಚಿತಾ ರಾಮ್ ಮುದ್ದಾಗಿ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ಮುಡಿ ತುಂಬಾ ಮಲ್ಲಿಗೆ ಹೂವು ಮುಡಿದು ಥೇಟ್ ಮದುವೆ ಹೆಣ್ಣಿನಂತೆ ಶೃಂಗಾರಗೊಂಡಿದ್ದು, ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳ ಅಂದಕ್ಕೆ ಮನಸೋತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಜನಪ್ರಿಯತೆ ಪಡೆದಿರುವ ಬುಲ್ ಬುಲ್ ರಚಿತಾ ರಾಮ್, ತಮ್ಮ ಅಂದ ಚಂದದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ನಟಿ ನಕ್ಕರೆ ಸಾಕು ಆ ಡಿಂಪಲ್ ಗೆ ಫ್ಯಾನ್ಸ್ ಫಿದಾ ಆಗುತ್ತಾರೆ. ಇದೀಗ ರಚಿತಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಮಾಡಿದ್ದು ನೆಟ್ಟಿಗರಂತೂ ವಾರೆ ವಾ ಎನ್ನುತ್ತಿದ್ದಾರೆ.
26
ಮದ್ವೆ ಹೆಣ್ಣಿನಂತೆ ಶೃಂಗಾರ
ಹೌದು ರಚಿತಾ ರಾಮ್ ತಮ್ ಇನ್’ಸ್ಟಾಗ್ರಾಂ ಖಾತೆಯನ್ನು ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ನಟಿ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ಅದರ ಜೊತೆಗೆ ಹೆವಿ ಆಭರಣಗಳು, ಮುಡಿ ತುಂಬ ದುಂಡು ಮಲ್ಲಿಗೆ ಮುಡಿದು ಮದುವೆ ಹೆಣ್ಣಿನಂತೆ ಕಾಣಿಸಿಕೊಂಡಿದ್ದಾರೆ.
36
ನಟಿ ಹೇಳಿದ್ದೇನು?
ಸಂಪ್ರದಾಯಿಕ ಉಡುಗೆ ಧರಿಸಿ, ನನ್ನನ್ನು ನಾನೇ ಅಲಂಕರಿಸಿದ್ದೇನೆ, ರೇಷ್ಮೆ ಸೀರೆಯಿಂದ ಹಿಡಿದು ಮಲ್ಲಿಗೆಯವರೆಗೆ, ಪ್ರತಿಯೊಂದು ವಿವರವೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ! ಕಾಂಚೀವರಂ ನನ್ನ ಫಾರೆವರ್ ಫೇವರಿಟ್ ಎಂದು ರಚಿತಾ ರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಂದ್ರನೇ ನಾಚಿದ ನಿನ್ನ ಆ ಕಣ್ಣು ನೋಡಿ.... ಗಾಳಿಯೇ ನಿಂತಿತು, ನಿನ್ನ ಆ ಮಾತು ಕೇಳಿ…, ಮೋಡವೆ ಕರಗಿತು, ನಿನ್ನ ಆ ನಗು ನೋಡಿ...., ಸೃಷ್ಟಿಯೇ ಬೆರಗಾಯಿತು, ನನ್ನವಳ ಆ ಅಂದ ನೋಡಿ..ಎನ್ನುತ್ತಾ ಕವನ ಗೀಚಿದ್ದಾರೆ ಅಭಿಮಾನಿಗಳು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ರಚಿತಾ ರಾಮ್ ನೋಡಿ.
56
ರಚಿತಾ ನಟಿಸಿದ ಸಿನಿಮಾಗಳೇಷ್ಟು?
ಕನ್ನಡ ಕಿರುತೆರೆಯಿಂದ ನಟನಾ ಜರ್ನಿ ಆರಂಭಿಸಿದ ರಚಿತಾ ರಾಮ್, ಇದುವರೆಗೂ ಸುಮಾರು 38 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬುಲ್ ಬುಲ್ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಚಿತಾ ಕನ್ನಡ ಸೇರಿ, ಒಂದು ತಮಿಳು ಮತ್ತೊಂದು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.
66
ಸಾಲು ಸಾಲು ಚಿತ್ರಗಳು ನಟಿ ಕೈಯಲ್ಲಿ
ಇನ್ನು ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ, ಅಯೋಗ್ಯ 2, ಕಲ್ಟ್ , ರಾಚಯ್ಯ ಸಿನಿಮಾಗಳ ಶೂಟಿಂಗ್ ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ಯಾವಾಗ ಬಿಡುಗಡೆಯಾಗಲಿವೆ ಎನ್ನುವ ಮಾಹಿತಿ ಇಲ್ಲ.