ನಟಿ ಜ್ಯೋತಿ ರೂ ಇದೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೊಮ್ಮೆ ಸಖತ್ ಸೌಂಡ್ ಮಾಡತೊಡಗಿದ್ದಾರೆ. ನಟಿ ಜ್ಯೋತಿ ರೈ ಎಲ್ಲಿಗೇ ಹೋದರೂ ಅಲ್ಲೊಂದು ಹಾಟ್ ವಾತಾವರಣ ನಿರ್ಮಾಣವಾಗೋದು ಗ್ಯಾರಂಟಿ! ಇದೀಗ ಅವರು ಬಂದಿದ್ದು ಯಾಕೆ? ಎಲ್ಲಿಗೆ ಬಂದಿದ್ದಾರೆ? ಸ್ಟೋರಿ ನೋಡಿ…
ನಟಿ ಜ್ಯೋತಿ ರೂ ಇದೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೊಮ್ಮೆ ಸಖತ್ ಸೌಂಡ್ ಮಾಡತೊಡಗಿದ್ದಾರೆ. ಕಾರಣ, ಅವರೀಗ 'ಹಲ್ಕಾ ಡಾನ್' ಚಿತ್ರದ ಮುಹೂರ್ತಕ್ಕೆ ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಬಂದಿದ್ದಾರೆ.
ಹಾಟ್ ನಟಿ ಜ್ಯೋತಿ ರೈ ಅವರನ್ನು ನೋಡಿ ಈ ಮಳೆಯ ವಾತಾವರಣದಲ್ಲೂ ಹಲವರು ಬಿಸಿಯೇರಿ ಬೆವರುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಅದೆಲ್ಲಾ ಇರಲಿ, ನಟಿ ಜ್ಯೋತಿ ರೈ ಬಂದಿದ್ದಾರೆ, ಏನು ಅಂದಿದ್ದಾರೆ ನೋಡಿ..
ನಟಿ ಜ್ಯೋತಿ ರೈ ಅವರು ಬಿಂದಾಸ್ ಆಗಿ ಮಾತನ್ನಾಡಿದ್ದಾರೆ. 'ನಾನು ಸೋಷಿಯಲ್ ಮೀಡಿಯಾಗೆ ಬಂದ ಮೇಲೆಯೇ ಹೆಚ್ಚು ಪ್ರಚಾರಕ್ಕೆ ಬಂದೆ. ಸೋಶಿಯಲ್ ಮೀಡಿಯಾದಲ್ಲಿ ಯಾರೋ ಹಾಕುವ ಬ್ಯಾಡ್ ಕಾಮೆಂಟ್ಸ್ ಬಗ್ಗೆ ನಾನು ತಲೆ ಕೆಡಿಸಿಕೊಳೋಲ್ಲ.
ನಾನು ಆ ದೇವರನ್ನ ನಂಬಿ ಮುಂದೆ ಹೋಗ್ತಾ ಇರ್ತೇನೆ. ಇಲ್ಲ ಸಲ್ಲದ ಮಾತುಗಳು ಬೇಕಿಲ್ಲ. ನನ್ನ ಬಗ್ಗೆ ಅಂತ ಅಲ್ಲ, ಯಾರದೇ ಬಗ್ಗೆ ಇಲ್ಲಸಲ್ಲದ ಕಾಮೆಂಟ್ಸ್, ಟ್ರೋಲ್‌ಗಳನ್ನು ನಾನು ಇಷ್ಟಪಡೋದಿಲ್ಲ.
ಕರ್ಮ ಅನ್ನೋದು ಯಾರನ್ನು ಬಿಡಲ್ಲ, ನನ್ನ ದುಡಿಮೆ ನನ್ನ ಜೀವನ ಅಷ್ಟೇ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ ನಟಿ ಜ್ಯೋತಿ ರೈ. ಅವರ ಮಾತಿಗೆ ನೀವೇನಂತೀರಾ? ಏನಾದ್ರೂ ಅನ್ಲೇಬೇಕಾ ಅಂತೀರೇನೋ!