Kantara Chapter 1 ಸಿನಿಮಾದ ರೋಚಕ‌ ಮೇಕಿಂಗ್ ಅನುಭವ ಬಿಚ್ಚಿಟ್ಟ Rishab Shetty..!

Published : Oct 23, 2025, 04:59 PM IST

ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ 500 ಕೋಟಿಗೂ ಅಧಿಕ ಗಳಿಸಿದ್ದು, ಇನ್ನೂ ಕೂಡ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ನಟ- ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಮೇಕಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ.

PREV
19
ಕಾಂತಾರ ಚಾಪ್ಟರ್ 1

ಕಾಂತಾರ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಕೂಡ ಕಾಂತಾರ ಸಿನಿಮಾ ಸದ್ದು ಮಾಡುತ್ತಾ, ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಾ ಮುಂದೆ ಸಾಗುತ್ತಿದೆ.. ಈಗಾಗಲೇ ಸಿನಿಮಾ 500 ಕೋಟಿಗೂ ಅಧಿಕ ಗಳಿಸಿದೆ.

29
ಸಿನಿಮಾ ಗಳಿಸಿದ್ದೆಷ್ಟು

ಕಾಂತಾರ ಚಾಪ್ಟರ್ 1' ಸಿನಿಮಾವು ಕರ್ನಾಟಕದಲ್ಲೇ ಬರೋಬ್ಬರಿ 200 ಕೋಟಿ ರೂ.ಗಳಿಗೂ ಅಧಿಕ ಗಳಿಸಿದೆ. ದೇಶದಲ್ಲಿ 500 ಕೋಟಿ ಹಾಗೂ ವಿಶ್ವಾದ್ಯಂತ ಸಿನಿಮಾದ ಒಟ್ಟು ಗಳಿಕೆಯು 800 ಕೋಟಿ ರೂಪಾಯಿ ಸನಿಹದಲ್ಲಿದೆ. ಕನ್ನಡದ ಅತಿ ಹೆಚ್ಚು ಗಳಿಸಿದ ಸಿನಿಮಾವಾಗಿ ಕಾಂತಾರ ದಾಖಲೆ ಬರೆದಿದೆ.

39
ಸಿನಿಮಾ ಮೇಕಿಂಗ್ ಫೋಟೊ ಶೇರ್ ಮಾಡಿದ ರಿಷಬ್

ಕಾಂತಾರ ಸಿನಿಮಾದ ನಟ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಶೂಟಿಂಗ್ ಮೇಕಿಂಗ್ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಲ್ಲಿನ ರೋಚಕ ಅನುಭವನ ಕ್ಷಣಗಳನ್ನು ಫೋಟೊಗಳ ಮೂಲಕ ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ.

49
ಚಿತ್ರೀಕರಣವು ಥ್ರಿಲ್ಲಿಂಗ್ ಆಗಿತ್ತು

ನಿಜವಾದ ಚಲನಚಿತ್ರ ನಿರ್ಮಾಣದ ಮೋಜು ಆರಂಭವಾಗುವುದೇ ಅಲ್ಲಿಂದ! ಚಿತ್ರೀಕರಣದ ರೋಮಾಂಚನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ! ಎಂದು ಬರೆದುಕೊಂಡಿರುವ ರಿಷಬ್ ತಾವು ನಿರ್ದೇಶನ ಮಾಡುತ್ತಿರುವ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

59
ಕಳೆದ 3ಗಳಿಂದ ಕಾಂತಾರ ಚಾಪ್ಟರ್1 ರಲ್ಲಿ ಬ್ಯುಸಿ

ರಿಷಬ್ ಶೆಟ್ಟಿಯವರು ತಮ್ಮ ಜೀವನದ ಐದು ವರ್ಷಗಳನ್ನು ಕಾಂತಾರ ಸಿನಿಮಾಗಾಗಿ ಮೀಸಲಿಟ್ಟಿದ್ದರು. ಕಾಂತಾರ ಮೊದಲ ಭಾಗ ಬಿಡುಗಡೆಯಾದ ಬಳಿಕ ಕೊಂಚ ಬಿಡುಗಡೆ ಮಾಡಿಕೊಂಡಿದ್ದ ರಿಷಬ್, ಬಳಿಕ ಕಾಂತಾರ ಚಾಪ್ಟರ್ 1 ಗಾಗಿ ಮುರು ವರ್ಷದಿಂದ ಬ್ಯುಸಿಯಾಗಿದ್ದಾರೆ.

69
ಸಿನಿಮಾ ಶೂಟಿಂಗ್ ಆಗಿದ್ದೆಲ್ಲಿ

ಬೆಂಗಳೂರಿನಲ್ಲಿ ಕುಟುಂಬದ ಜೊತೆ ನೆಲೆಸಿದ್ದ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾಕ್ಕಾಗಿ ಬೆಂಗಳೂರನ್ನು ಬಿಟ್ಟು, ಪತ್ನಿ ಮಕ್ಕಳ ಸಮೇತ ಕುಂದಾಪುರದಲ್ಲಿ ನೆಲೆಯೂರಿದ್ದರು. ಸಿನಿಮಾ ಶೂಟಿಂಗ್ ಕೂಡ ಕುಂದಾಪುರದ ಸುತ್ತಮುತ್ತಲಿನ ಕಾಡಿನಲ್ಲಿ ನಡೆದಿತ್ತು.

79
250 ದಿನ ಶೂಟಿಂಗ್

ಕಾಂತಾರ ಸಿನಿಮಾ ಬರೋಬ್ಬರಿ 250ದಿನಗಳ ಕಾಲ ಶೂಟಿಂಗ್ ಮಾಡಲಾಗಿತ್ತು. 'ಕಾಂತಾರ: ಚಾಪ್ಟರ್ 1' ಸಿನಿಮಾಕ್ಕೆ ಸುಮಾರು 125 ಕೋಟಿ ರೂ ಬಜೆಟ್ ಆಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗಿತ್ತು, ಇದೀಗ ಇಂಗ್ಲಿಷ್ ನಲ್ಲೂ ಬಿಡುಗಡೆಯಾಗಲಿದೆ.

89
ಮುಂದಿನ ಸಿನಿಮಾ ಯಾವುದು?

ಇಲ್ಲಿವರೆಗೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮುಗಿಸೋದಕ್ಕೆ ದೇಶದ ಹಲವು ಟಾಪ್ ನಿರ್ದೇಶಕರು ಕಾಯುತ್ತಿದ್ದರು. ತೆಲುಗಿನ ಹನುಮಾನ್ ಸಿನಿಮಾ, ಹಿಂದಿಯ ಛತ್ರಪತಿ ಶಿವಾಜಿ ಸಿನಿಮಾದಲ್ಲಿ ಕೂಡ ರಿಷಬ್ ಶೆಟ್ಟಿಗೆ ಆಫರ್ ನೀಡಲಾಗಿದೆ.

99
ಕಾಂತಾರ ಇನ್ನೊಂದು ಚಾಪ್ಟರ್ ಬರಲಿದೆಯೇ?

ಈ ಕುರಿತು ರಿಷಬ್ ಶೆಟ್ಟಿ ಹಲವಾರು ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ಕಾಂತಾರ ಮುಂದುವರೆದ ಭಾಗ ಕೂಡ ಬರೋದಾಗಿ ತಿಳಿಸಿದ್ದರು. ಆದರೆ ಅದು ಯಾವಾಗ? ಕಥೆ ಏನಿದು ಅನ್ನೋದು ಮಾತ್ರ ಗೊತ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories