ಇಂಟರ್ನೆಟ್ಟಲ್ಲಿ ಹರಿದಾಡ್ತಿದೆ ಸಂಗೀತ ಶೃಂಗೇರಿ ಬಿಗ್ ಬಾಸ್ ಎಂಟ್ರಿ ಸುದ್ದಿ, ಬರ್ಬೇಡಿ ಮೋಸ ಆಗತ್ತೆಂದ ಫ್ಯಾನ್ಸ್

ಬಿಗ್ ಬಾಸ್ ಸೀಸನ್ 11 ಇನ್ನೇನು ಆರಂಭವಾಗೋದಕ್ಕೆ ಕೊಂಚ ಸಮಯ ಬಾಕಿ ಇದ್ದು, ನಟಿ ಸಂಗೀತ ಶೃಂಗೇರಿ ಕೂಡ ಮತ್ತೆ ಬಿಗ್ ಬಾಸ್ ಗೆ ಎಂಟ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರ್ತಿದೆ. 
 

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಸೀಸನ್ 11 (Bigg Boss Season 11) ಆರಂಭವಾಗೋದಕ್ಕೆ ಕ್ಷಣಗಳನೆ ಆರಂಭವಾಗಿದೆ. ಯಾಕಂದ್ರೆ ಅಕ್ಟೋಬರ್ ಆರಂಭದಲ್ಲಿ ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗೋದು ರೂಢಿ. ಇದರ ಜೊತೆ ಯಾರ್ಯಾರು ಸ್ಪರ್ಧಿಯಾಗಲಿದ್ದಾರೆ ಅನ್ನೋ ಕುತೂಹಲ ಕೂಡ ಹೆಚ್ಚಿದೆ. 
 

ಕಳೆದ ಹಲವು ದಿನಗಳಿಂದ ಈ ಬಾರಿಯ ಬಿಗ್ ಬಾಸ್ ಸೀಸನ್ 11ಕ್ಕೆ ಯಾರೆಲ್ಲ ಎಂಟ್ರಿ ಕೊಡಬಹುದು ಎನ್ನುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಒಂದೆರಡು ಹೆಸರು ಸಿಕ್ಕಾಪಟ್ಟೆ ಸೌಂಡ್ ಕೂಡ ಮಾಡಿದ್ದವು. ಇದೀಗ ಬಿಗ್ ಬಾಸ್ ಸೀಸನ್ 10ರ ಟಾಪ್ 3 ಕಂಟೆಸ್ಟೆಂಟ್ ಆಗಿದ್ದ ಸಂಗೀತ ಶೃಂಗೇರಿ (Sangeetha Sringeri) ಮತ್ತೆ ಬಿಗ್ ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. 
 


ಸೋಶಿಯಲ್ ಮೀಡಿಯಾ ಪೇಜ್ (social media) ಗಳಲ್ಲೆಲ್ಲಾ, ಸಂಗೀತಾ ಅಭಿಮಾನಿಗಳಿಗೆ ಡಬಲ್ ಧಮಾಕ ಸೀಸನ್ 11 ರಲ್ಲಿ ಮತ್ತೆ ಸ್ಪರ್ಧಿಸಲಿದ್ದಾರೆ  ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಇದು ಬರೀ ಗಾಳಿ ಸುದ್ದಿಯೇ ಅಥವಾ ನಿಜವಾಗಿಯೂ ಸಂಗೀತ ಮತ್ತೆ ಬಿಗ್ ಬಾಸ್ ಗೆ ಬರ್ತಿದ್ದಾರೆ ಅನ್ನೋದು ಮಾತ್ರ ಗೊತ್ತಿಲ್ಲ. 
 

ಆದ್ರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಂಗೀತ ಅಭಿಮಾನಿಗಳು ಅಲರ್ಟ್ ಆಗಿದ್ದು, ಸಂಗೀತಾ ಮತ್ತೆ ಬಿಗ್ ಬಾಸ್‌ಗೆ ಬರ್ಬೇಡಿ. ಲಾಸ್ಟ್ ಸೀಸನ್‌ನಲ್ಲಿ ನಿಮ್ಮನ್ನ ಟಿಆರ್‌ಪಿಗೋಸ್ಕರ ಉಳಿಸಿಕೊಂಡು ಮೋಸ ಮಾಡಿದ್ರು, ಈ ಸಲನೂ ಮೋಸ ಆಗೋದು ಬೇಡ ಬರ್ಬೇಡಿ ಎಂದಿದ್ದಾರೆ. 
 

ಇನ್ನು ಕೆಲವರು ಸಿಂಹಿಣಿ ಮತ್ತೆ ಬಂದ್ರೆ ತುಂಬಾನೆ ಖುಷಿ ಅಂದಿದ್ದಾರೆ. ಆದ್ರೆ ಸಂಗೀತ ಅವರು ಈಗಾಗಲೇ ಲೈವ್‌ಗೆ ಬಂದು ಅಭಿಮಾನಿಗಳು ಬಿಗ್‌ಬಾಸ್ 11 ಬಗ್ಗೆ ಕೇಳಿದಾಗ, ತಾವು ಮತ್ತೆ ಬಿಗ್‌ಬಾಸ್‌ಗೆ ಹೋಗೋದಿಲ್ಲ ಅಂತ ಹೇಳಿರೋದಾಗಿ ಮತ್ತಷ್ಟು ಆಭಿಮಾನಿಗಳು ತಿಳಿಸಿದ್ದಾರೆ. 
 

ಸಂಗೀತ ಶೃಂಗೇರಿ ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಮಾರಿ ಗೋಲ್ಡ್ (Mari Gold) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಒಂದಷ್ಟು ಕಾರ್ಯಕ್ರಮಗಳಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ನಟಿ ಸಂಗೀತ ಹೆಚ್ಚಾಗಿ ಧ್ಯಾನ, ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ನಟಿ, ಹೆಚ್ಚಾಗಿ ತಮ್ಮ ಮುದ್ದು ಮುದ್ದಾದ ಫೋಟೋಗಳನ್ನು ಶೇರ್ ಮಾಡ್ತಾ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗುತ್ತಿರುತ್ತಾರೆ. ಬಿಗ್‌ಬಾಸ್ ಸೀಸನ್ 10 ರಲ್ಲಿ ಅತ್ಯುತ್ತಮ ಸ್ಪರ್ಧೆ ನೀಡಿ ಸಿಂಹಿಣಿ ಅಂತಾನೆ ಜನಪ್ರಿಯತೆ ಪಡೆದಿದ್ದ ಸಂಗೀತ ಟಾಪ್ 3 ವರೆಗೂ ತಲುಪಿದ್ದರು. 
 

Latest Videos

click me!