ಚಿತ್ರಗಳಲ್ಲಿ: ಹುಟ್ಟುಹಬ್ಬದ ದಿನವೇ ನಿರ್ದೇಶಕ ತರುಣ್ ಬಾಳಸಂಗಾತಿಯಾದ ನಟಿ ಸೋನಲ್!

First Published | Aug 11, 2024, 12:38 PM IST

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ದೂರಿ ವಿವಾಹ ಕೆಂಗೇರಿ ಬಳಿಯ ಮೈಸೂರು ರೋಡ್ ಸಮೀಪ ಇರುವ ಪೂರ್ಣಿಮಾ ಹಾಲ್ ನಲ್ಲಿ  ನಡೆದಿದೆ.

ಆಗಸ್ಟ್ 10ರ ಸಂಜೆ  ಅದ್ದೂರಿಯಾಗಿ ರಿಸೆಪ್ಷನ್ ನಡೆದಿತ್ತು. ಇಂದು ಅಂದರೆ ಆಗಸ್ಟ್ 11ರಂದು ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿ ಗಂಡ ಹೆಂಡತಿಯಾಗಿದ್ದಾರೆ. 

ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ಸೋನಲ್‌ ಗೆ ತಾಳಿ ಕಟ್ಟಿದ ಸುಧೀರ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು.

Tap to resize

ಸೋನಾಲ್ ಬರ್ತ್ ಡೇ ದಿನವೇ ಸಪ್ತಪದಿ ತುಳಿತಿರೋದು ವಿಶೇಷವಾಗಿದೆ. ಇಂದು ಸೋನಲ್ ಮೊಂಥೆರೋ ತಮ್ಮ ಹುಟ್ಟುಹಬ್ಬದ ಸಂಭ್ರಮದ‌ ಜೊತೆಗೆ ಮದುವೆ ಸಂಭ್ರಮ ಕೂಡ ಹೌದು.

ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು ಧರ್ಮ ಮೀರಿದ ಮದುವೆಗೆ  ಪೂರ್ಣಿಮಾ ಪ್ಯಾಲೇಸ್ ಸಾಕ್ಷಿಯಾಯ್ತು. ತೆಲುಗು ನಟ ಜಗಪತಿ ಬಾಬು ಕೂಡ ಮದುವೆಯಲ್ಲಿ ಕಾಣಿಸಿದರು.

ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ನಿರ್ಮಾಣ ಮಾಡಲಾಗಿತ್ತು. ಕಲಾಂಜನಿ ವೆಡ್ಡಿಂಗ್ಸ್ ನ ಕಿರಣ್  ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್  ಹಾಕಲಾಗಿತ್ತು. 

‘ರಾಬರ್ಟ್‌ ಸಿನಿಮಾ ದಿನಗಳಿಂದಲೇ ನನ್ನ ಆಪ್ತರು ನಾನೂ ಸೋನಲ್‌ ಡೇಟ್‌ ಮಾಡ್ತೀದ್ದೀವಾ ಅಂತ ಕೇಳ್ತಿದ್ದರು. ಆದರೆ ಬರ್ತ್‌ಡೇಗೆ ವಿಶ್ ಮಾಡೋದು ಬಿಟ್ರೆ ನಾವಿಬ್ರೂ ಸಂಪರ್ಕದಲ್ಲೇ ಇರಲಿಲ್ಲ. ಒಮ್ಮೆ ಸೋನಲ್‌ ಫೋನ್‌ ಮಾಡಿ ನಮ್ಮಿಬ್ಬರ ನಡುವೆ ಕನೆಕ್ಷನ್ ಇದೆ ಅನ್ನೋ ಥರ ಎಲ್ಲರೂ ಹೇಳ್ತಿದ್ದಾರೆ, ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ, ನಾನೆಲ್ಲೂ ಈ ಥರ ಹೇಳ್ಕೊಂಡಿಲ್ಲ ಸರ್‌ ಅಂದಿದ್ರು. ಆದರೆ ಒಂದು ಟೈಮಲ್ಲಿ ನನಗೇ ಅನಿಸತೊಡಗಿತು, ಎಲ್ಲರಿಗೂ ನಮ್ಮಿಬ್ಬರ ಜೋಡಿ ಚೆನ್ನಾಗಿದೆ ಅಂತ ಅನಿಸ್ತಿದೆ ಅಂದರೆ ಈ ಸಂಬಂಧ ಯಾಕಾಗಬಾರದು ಅಂತ.’

ಹೀಗೆ ತಾವು ಲವ್ವಲ್ಲಿ ಬಿದ್ದ ಕಥೆಯನ್ನು ಹೇಳಿಕೊಂಡಿದ್ದ ನಿರ್ದೇಶಕ ತರುಣ್‌ ಸುಧೀರ್‌  ಮತ್ತು ನಟಿ ಸೋನಲ್‌ ಮೊಂತೆರೋ ಇಂದು ಸತಿ ಪತಿಯಾಗಿ ಹಸೆಮಣೆ ಏರಿದ್ದಾರೆ.

ರಾಬರ್ಟ್‌ ಶೂಟಿಂಗ್‌ ಸಮಯದಲ್ಲಿ ಆರಂಭವಾದ ಸ್ನೇಹ,  ಕಾಟೇರ ಸಿನಿಮಾ ಹೊತ್ತಿಗೆ ಪ್ರೇಮವಾಗಿ ಬದಲಾಯಿತು.  ಆಗ ದರ್ಶನ್‌ ಅವರೇ ಸೋನಲ್‌ ಹಾಗೂ ನಮ್ಮ ಮನೆಯವರ ಜೊತೆ ಮದುವೆ ಮಾತುಕತೆ ಮಾಡಿದ್ದು, ಅಂತ ಜೋಡಿ ಹೇಳಿಕೊಂಡಿದ್ದರು. 

ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಸೋನಲ್ ಮೊಂಥೆರೋ ಅವರ ಹುಟ್ಟೂರು ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮುಂದಿನ ತಿಂಗಳು ನಡೆಯಲಿದೆ.

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಅವರ ನೂತನ ದಾಂಪತ್ಯಕ್ಕೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ಶುಭಹಾರೈಕೆಯನ್ನು ತಿಳಿಸುತ್ತಾ, ನೂರು ಕಾಲ ಖುಷಿಯಾಗಿ ಬಾಳಿ ಎಂದು ಹಾರೈಸುತ್ತಿದೆ.

Latest Videos

click me!