ಇದ್ದಕ್ಕಿದ್ದಂತೆ ಸಣ್ಣಗಾದ ಮೇಘನಾ ಗಾಂವ್ಕರ್; ಬಾಲ್ಕನಿಯಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋ ಲೀಕ್?

First Published | Aug 12, 2024, 12:39 PM IST

ವೈರಲ್ ಆಯ್ತು ನಟಿ ಮೇಘನಾ ಗಾಂವ್ಕರ್ ವರ್ಕೌಟ್ ಫೋಟೋಗಳು....ಹೇಗಮ್ಮ ಸಣ್ಣಗಾದೆ ಎಂದ ನೆಟ್ಟಿಗರು.....

ನಮ್ಮ ಏರಿಯಾದಲ್ಲಿ ಒಂದು ದಿನ ಚಿತ್ರದ ಮೂಲಕ 2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮೇಘನಾ ಗಾಂವ್ಕರ್‌ ಈಗ ವರ್ಕೌಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಮಾಡಿದ್ದು ಕಡಿಮೆ ಸಿನಿಮಾ ಆದರೂ ಮಾಡಿದ ಪ್ರತಿಯೊಂದು ಪಾತ್ರದ ಮೂಲಕ ಜನರ ಗಮನ ಸೆಳೆದಿರುವ ಸುಂದರಿ ಅಂದ್ರೆ ಮೇಘನಾ ಗಾಂವ್ಕರ್. 

Tap to resize

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ಮನೆಯ ಬಾಲ್ಕಾನಿಯಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಈ ಫೋಟೋಗಳನ್ನು ಕೆಲವು ಟ್ರೋಪ್‌ ಪೇಜ್‌ಗಳು ಶೇರ್ ಮಾಡಿಕೊಂಡು ಇದು ಲೀಕ್ ಆಗಿರುವ ಫೋಟೋಗಳು ಎಂದು ವೈರಲ್ ಮಾಡುತ್ತಿದ್ದಾರೆ. 

ಕೆಲವು ತಿಂಗಳ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಮೇಘನಾ ಧರಿಸಿದ ರೆಡ್‌ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ದಪ್ಪ ಕಾಣುತ್ತಿದ್ದರು. ಈಗ ವೈರಲ್ ಆಗುತ್ತಿರುವ  ಜಿಮ್‌ ಔಟ್‌ಫಿಟ್‌ನಲ್ಲಿ ಸಣ್ಣಗಾಗಿದ್ದಾರೆ. 

ಶಿವಾಜಿ ಸೂರತ್ಕಲ್ 2, ದಿ ಜಡ್ಜ್‌ಮೆಂಟ್ ಸಿನಿಮಾ ನಂತರ ಮೇಘನಾ ಗಾಂವ್ಕರ್ ಈಗ ಚೂ ಮಂತರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. 

Latest Videos

click me!