ಚಂದನವನದ ಪ್ರತಿಭಾನ್ವಿತ ನಟ, ರೇಡಿಯೋ ಜಾಕಿ ಆಗಿರುವ ರಿಷಿ (Rishi), ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ನವಂಬರ್ ನಲ್ಲಿ ರಿಷಿ ತಾವು 2025ರಲ್ಲಿ ಪೋಷಕರಾಗುತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಒಂದಷ್ಟು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ (Social media) ವೈರಲ್ ಆಗುತ್ತಿವೆ.
ರಿಷಿ ಪತ್ನಿ ಸ್ವಾತಿ ಪರಶುರಾಮನ್ (Swathi Prashuraman) ಈ ಹಿಂದೆ ಪೋಸ್ಟ್ ಮಾಡಿ ನಾವು 2025 ಇನ್ನೂ ಅತ್ಯುತ್ತಮವಾಗಿರುವುದನ್ನು ನಿರೀಕ್ಷಿಸುತ್ತಿದ್ದೇವೆ. ನಿಮ್ಮ ಆಶೀರ್ವಾದ, ಕೃತಜ್ಞತೆ ಮತ್ತು ಪ್ರೀತಿಯಿಂದ ನಮ್ಮ ವಾರ್ಷಿಕೋತ್ಸವದಂದು ಇದನ್ನು ಘೋಷಿಸುತ್ತಿದ್ದೇವೆ. ಅದೇನೆಂದರೆ ನಮ್ಮ ಕುಟುಂಬದ ಹೊಸ ಸದಸ್ಯರನ್ನು ಶೀಘ್ರದಲ್ಲೇ ಸ್ವಾಗತಿಸುತ್ತಿದ್ದೇವೆ . ಇದು ನಮ್ಮ ಪ್ರಯಾಣದ ಮುಂದಿನ ದೊಡ್ಡ ಹೆಜ್ಜೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸ್ವಾತಿ ಇದೀಗ ಮತ್ತೆ ಒಂದಷ್ಟು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. Mini Valaikappu at home ಎಂದು ಕ್ಯಾಪ್ಶನ್ ಕೊಟ್ಟಿರುವ ಸ್ವಾತಿ, ತಮ್ಮ ಫ್ಯಾಮಿಲಿ ಜೊತೆಗಿನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರರ್ಥ ಸೀಮಂತ ಎಂದು.
ರಿಷಿ ಪತ್ನಿ ಸ್ವಾತಿ ಐವರಿ ಬಣ್ಣದ ಬಾರ್ಡರ್ ಇರುವ ಕಪ್ಪು ಬಣ್ಣದ ಸೀರೆ ಉಟ್ಟಿದ್ದು, ಸ್ವಾತಿ ಅಪ್ಪ-ಅಮ್ಮ ಹಾಗೂ ರಿಷಿ ಅಪ್ಪ ಮತ್ತು ಅಮ್ಮ ಸೇರಿ ಮನೆಯಲ್ಲಿಯೇ ಸಿಂಪಲ್ ಆಗಿ ಸೀಮಂತ ಮಾಡಿದ್ದಾರೆ. ಸೀಮಂತದ ದಿನ ಸಾಮಾನ್ಯವಾಗಿ ಎಲ್ಲರೂ ಹಸಿರು ಬಣ್ಣದ ಸೀರೆಯುಟ್ಟರೆ, ಸ್ವಾತಿಯವರು ಕಪ್ಪು ಬಣ್ಣದ ಸೀರೆ ಧರಿಸಿರೋದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಶುಭ ಸಮಾರಂಭಗಳಲ್ಲಿ ಕಪ್ಪು ಸೀರೆ ಉಡೋದೇ ಇಲ್ಲ. ಅದರಲ್ಲೂ ಇವರು ಸೀಮಂತ ದಿನ ಕಪ್ಪು ಸೀರೆ ಉಟ್ಟಿದ್ದಾರೆ.
ರಿಷಿ ಪತ್ನಿ ಸ್ವಾತಿ ಬಗ್ಗೆ ಹೇಳೋದಾದರೆ ಸ್ವಾತಿ ಪರಶುರಾಮನ್ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ ಸ್ವಾತಿ ಬರಹಗಾರ್ತಿ ಕೂಡ ಹೌದು. ರಿಷಿಯ ನಾಟಕ ವೀಕ್ಷಿಸಲು ಬಂದ ಸ್ವಾತಿಗೆ ರಿಷಿ ಇಷ್ಟವಾಗಿ, ಬಳಿಕ ಇಬ್ಬರ ನಡುವೆ ಸ್ನೇಹ, ಪ್ರೀತಿ ಬೆಳೆದು ಮದುವೆಯಾಗಿತ್ತು. ಈ ಜೋಡಿ 2019ರಲ್ಲಿ ಚೆನ್ನೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ 5 ವರ್ಷಗಳ ಬಳಿಕ ಈಗ ಮೊದಲ ಮಗುವಿನ (expecting their first child) ನಿರೀಕ್ಷೆಯಲ್ಲಿದ್ದಾರೆ.
ಇನ್ನು ಮೂಲತಃ ಮೈಸೂರಿನವರಾದ ಇಂಜಿನಿಯರಿಂಗ್ ಪದವೀಧರ ರಿಷಿ. ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿದ ಇವರು 'ಮಹಾಪರ್ವ' ಮತ್ತು 'ಅನುರೂಪ' ಧಾರಾವಾಹಿಯಲ್ಲಿ ನಟಿಸಿದ್ದರು. ಆಲೇ ರೇಡಿಯೋ ಜಾಕಿ (Radio Jockey) ಆಗಿಯೂ ಗುರುತಿಸಿಕೊಂಡಿದ್ದರು. ಜನಪ್ರಿಯ ರೇಡಿಯೋ ಜಾಕಿ RJ ನೇತ್ರಾ ಇವರ ಸಹೋದರಿ.
ರಿಷಿ ನಟಿಸಿರುವ ಪ್ರತಿಯೊಂದು ಸಿನಿಮಾಗಳು ವಿಭಿನ್ನ ಹಾಗೂ ವಿಷಿಷ್ಠವಾದ ಕಥೆಗಳನ್ನು ಹೇಳುವ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. 'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' , ‘ರಾಮನ ಅವತಾರ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾಕು ಮಹಾರಾಜ, ರುದ್ರ ಗರುಡ ಪುರಾಣ, ಸಖಲಾಕಲ ವಲ್ಲಭ, ಸೀರೆ ಸಿನಿಮಾಗಳು ರಿಷಿ ಕೈಯಲ್ಲಿವೆ. ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.