ಥಿಯೇಟರ್ ಮೆಟ್ಟಿಲು ಹತ್ತದವರನ್ನೂ ಚಿತ್ರಮಂದಿರಕ್ಕೆ ಕರೆಸುತ್ತೇನೆ: ರಕ್ಷಿತ್‌ ಶೆಟ್ಟಿ ಹೇಳಿಕೆ ವೈರಲ್

Published : Sep 05, 2025, 12:57 PM IST

ನಮ್ಮ ಕೆಲಸಗಳು ಕೆಲವೊಮ್ಮೆ ನಿಧಾನ ಅನಿಸಬಹುದು. ಆದರೆ ದೊಡ್ಡ ಕೆಲಸ, ಒಂದೊಳ್ಳೆ ಕೆಲಸ ಮಾಡುವಾಗ ಟೈಮ್‌ ತೆಗೆದುಕೊಳ್ಳುತ್ತದೆ. ನಾನು ಹೆಚ್ಚೇ ಟೈಮ್‌ ತಗೊಳ್ತೀನಿ ಎಂದರು ರಕ್ಷಿತ್‌ ಶೆಟ್ಟಿ.

PREV
15

ರಕ್ಷಿತ್‌ ಶೆಟ್ಟಿ ಮಹತ್ವಾಕಾಂಕ್ಷೆಯ ಸಿನಿಮಾ ‘ರಿಚರ್ಡ್‌ ಆ್ಯಂಟನಿ’ ಬಗ್ಗೆ ಅಪ್‌ಡೇಟ್ಸ್‌ ಕೇಳಿ ಕೇಳಿ ಸುಸ್ತಾಗಿರುವ ಸಿನಿಮಾ ಅಭಿಮಾನಿಗಳು ಈಗ ಆ ವಿಚಾರದಲ್ಲಿ ಮೌನದ ಮೊರೆ ಹೋಗಿದ್ದಾರೆ.

25

ಆದರೆ ಜನರ ಭರವಸೆ ನೆಲಕ್ಕಚ್ಚಲು ಬಿಡದಂತೆ ರಕ್ಷಿತ್‌ ಶೆಟ್ಟಿ ಆಗಾಗ ಒಂದು ಹೈಪ್‌ ಕ್ರಿಯೇಟ್‌ ಮಾಡಿ ಸುಮ್ಮನಾಗಿ ಬಿಡುತ್ತಾರೆ. ಕಳೆದ ವರ್ಷ ಕೆನಡಾದ ಕಾರ್ಯಕ್ರಮವೊಂದರಲ್ಲಿ ‘ರಿಚರ್ಡ್‌ ಆ್ಯಂಟನಿ’ ಬಗ್ಗೆ ಮಾತನಾಡಿ ನಿರೀಕ್ಷೆ ಮೂಡಿಸಿದ್ದ ಅವರು, ಇದೀಗ ಒಂದು ವರ್ಷದ ಬಳಿಕ ಅಮೆರಿಕಾದಲ್ಲಿ ಮತ್ತೊಂದು ಭರ್ಜರಿ ಡೈಲಾಗ್‌ ಹೊಡೆದಿದ್ದಾರೆ.

35

ನಮ್ಮ ಕೆಲಸಗಳು ಕೆಲವೊಮ್ಮೆ ನಿಧಾನ ಅನಿಸಬಹುದು. ಆದರೆ ದೊಡ್ಡ ಕೆಲಸ, ಒಂದೊಳ್ಳೆ ಕೆಲಸ ಮಾಡುವಾಗ ಟೈಮ್‌ ತೆಗೆದುಕೊಳ್ಳುತ್ತದೆ. ನಾನು ಹೆಚ್ಚೇ ಟೈಮ್‌ ತಗೊಳ್ತೀನಿ. ಆದರೆ ನನ್ನ ಹೊಸ ಸಿನಿಮಾ ಬಂದಾಗ ಮಾತ್ರ ಥೇಟರ್‌ಗೆ ಕಾಲಿಡದೇ ಇರುವವರೂ ಚಿತ್ರಮಂದಿರದ ಮೆಟ್ಟಿಲೇರುತ್ತಾರೆ.

45

ನಟನೆ, ನಿರ್ದೇಶನ ಅಂತ ಬಂದಾಗ ನಾನು ನಿರ್ದೇಶಕನಾಗಿಯೇ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಎಂಬ ಹುಮ್ಮಸ್ಸಿನ ನುಡಿಗಳನ್ನಾಡಿದ್ದಾರೆ.ಬೇರೆ ಬೇರೆ ರಾಜ್ಯಗಳಲ್ಲೆಲ್ಲ ಸಿನಿಮಾ ನೋಡುವ ಸಂಸ್ಕೃತಿ ಇದೆ. ನಮ್ಮಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಈ ಹಿನ್ನಡೆಗೆ ಚಿತ್ರರಂಗದವರಾದ ನಾವೇ ಹೊಣೆಗಾರರಾಗುತ್ತೇವೆ. ನನ್ನ ಪರಂವಃ ಸ್ಟುಡಿಯೋ ಮೂಲಕ ವರ್ಷಕ್ಕೆ 20 ಸಿನಿಮಾ ಬಿಡುಗಡೆ ಮಾಡುವ ಚಿಂತನೆ ಇದೆ.

55

ಏಕೆಂದರೆ ಅಧಿಕ ಚಿತ್ರಗಳು ಬರುತ್ತಿದ್ದರೆ ಜನ ಚಿತ್ರಮಂದಿರದ ದಾರಿಯನ್ನು ಮರೆಯುವುದಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ. ರಕ್ಷಿತ್‌ ಅವರ ಈ ಮಾತುಗಳು ಸಖತ್‌ ಟ್ರೆಂಡಿಂಗ್‌ನಲ್ಲಿವೆ. ಜೊತೆಗೆ ರಮ್ಯಾ ಜೊತೆಗೆ ರಕ್ಷಿತ್‌ ಶೆಟ್ಟಿ ಫೋಟೋಗೆ ಪೋಸ್‌ ನೀಡಿದ್ದೂ ವೈರಲ್‌ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories