ಆಗ ನಾನು ಬಹಳ ಚಿಕ್ಕವಳು. ಅಪ್ಪನ ತೊಡೆ ಮೇಲೆ ಕೂತು ಟಿವಿ ನೋಡುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಟಿವಿಯಲ್ಲಿ ಅಪ್ಪ ಕಂಡುಬಿಡೋದ! ನನಗೆ ಗಾಬರಿ. ನನ್ನನ್ನು ತೊಡೆ ಮೇಲೆ ಕೂರಿಸಿರುವ ಅಪ್ಪ, ಟಿವಿಯೊಳಗೆ ಹೇಗೆ ಇರೋದಕ್ಕೆ ಸಾಧ್ಯ. ‘ಅಪ್ಪ, ನಿಂಗೆ ಟ್ವಿನ್ ಇದ್ದಾರ’ ಅಂತ ಕೇಳಿದ್ದೆ. ಆ ದಿನ ಅಪ್ಪ ನನಗೆ ಶೂಟಿಂಗ್ ಬಗ್ಗೆ, ರೆಕಾರ್ಡಿಂಗ್ ಬಗ್ಗೆ ಎಲ್ಲ ಹೇಳಿದ್ದರು. ಆಗ ಏನೂ ಅರ್ಥ ಆಗಿರಲಿಲ್ಲ.