ಪ್ರಿಯಾಂಕ ಬಹಳ ಒಳ್ಳೆ ಕಲಾವಿದೆ, ಮನೇಲಿ ಮಾತ್ರ ಬೈಯುತ್ತಾರೆ: ಪತ್ನಿ ಕಾಲೆಳೆದ ಉಪೇಂದ್ರ

First Published | Nov 13, 2024, 4:22 PM IST

ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿರುವ ‘ಲೈಫ್‌ ಈಸ್ ಬ್ಯೂಟಿಫುಲ್‌’ ಚಿತ್ರತಂಡ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಉಪೇಂದ್ರ ಮಾತನಾಡಿದರು.

‘ಹೊರಗಡೆ ಚೆನ್ನಾಗಿ ಮಾತನಾಡಿ ಒಳ್ಳೆಯ ವಾತಾವರಣ ಉಂಟು ಮಾಡುತ್ತಾರೆ. ಮನೇಲಿ ಮಾತ್ರ ಬೈಯುತ್ತಾರೆ. ಪ್ರಿಯಾಂಕ ಬಹಳ ಒಳ್ಳೆ ಕಲಾವಿದೆ. ಅವರಿಂದ ನಾನು ಇದನ್ನೆಲ್ಲಾ ಕಲಿಯಬೇಕಿದೆ’ ಎಂದು ಉಪೇಂದ್ರ ನಗುತ್ತಲೇ ಪ್ರಿಯಾಂಕ ಅವರ ಕಾಲೆಳೆದರು.

ನ.12ರಂದು ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿರುವ ‘ಲೈಫ್‌ ಈಸ್ ಬ್ಯೂಟಿಫುಲ್‌’ ಚಿತ್ರತಂಡ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಉಪೇಂದ್ರ ಮಾತನಾಡಿದರು.

Tap to resize

‘ಲೈಫ್‌ ಈಸ್‌ ಬ್ಯೂಟಿಫುಲ್ ಲಿಫ್ಟ್‌ನ ಕತೆ ಇರುವ ಸಿನಿಮಾ. ಲಿಫ್ಟ್‌ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಜೀವನ ಕೂಡ ಹಾಗೇ. ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗೆ. ಹಾಗಾಗಿಯೇ ಲೈಫ್ ಈಸ್ ಬ್ಯೂಟಿಫುಲ್‌’ ಎಂದು ಉಪೇಂದ್ರ ಹೇಳಿದರು.

ಪ್ರಿಯಾಂಕ ಉಪೇಂದ್ರ, ‘ಶೂಟಿಂಗ್‌ಗೆ ಮೊದಲೇ ಸ್ಕ್ರಿಪ್ಟ್‌ ರೀಡಿಂಗ್‌ ಮಾಡಿಸಿ, ವರ್ಕ್‌ಶಾಪ್‌ ಮಾಡಿ ತುಂಬಾ ಪರ್ಫೆಕ್ಟ್‌ ಆಗಿ ಕೆಲಸ ಮಾಡಿಸಿದ್ದಾರೆ. ಡಿ.14ರಂದು ನಮ್ಮ ಮದುವೆ ವಾರ್ಷಿಕೋತ್ಸವ ಇದೆ. ಆ ಸಂಭ್ರಮಕ್ಕೆ ಒಂದು ದಿನ ಮೊದಲು ಡಿ.13ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಒಳ್ಳೆಯ ತಂಡ, ಹೊಸ ತಂಡ ಎಲ್ಲರೂ ಸಿನಿಮಾ ನೋಡಿ ಹಾರೈಸಿ’ ಎಂದು ಹೇಳಿದರು.

ಪೃಥ್ವಿ ಅಂಬಾರ್ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಸಾಬು ಅಲೋಶಿಯಸ್‌ ಮತ್ತು ಅರುಣ್‌ ಕುಮಾರ್‌ ಎಂ ನಿರ್ದೇಶನದ ಈ ಸಿನಿಮಾವನ್ನು ಬಿಜಿ ಅರುಣ್‌, ಕಿಶೋರ್ ನರಸಿಂಹಯ್ಯ, ಪುನೀತ್ ಎಚ್, ಜೊನಾತನ್ ಆಗಸ್ಟಿನ್ ನಿರ್ಮಿಸಿದ್ದಾರೆ.

Latest Videos

click me!