ಬೆಂಗಳೂರು(ಜೂ. 25)ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರನ್ನು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಭೇಟಿ ಮಾಡಿ ಸಾಂತ್ವನ ಹೇಳಿದರು. ಜಯನಗರದ ಮೇಘನಾ ರಾಜ್ ತವರು ಮನೆಯಲ್ಲಿ ಮೇಘನಾ ರಾಜ್ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಥಮ್ ಮತ್ತು ಸ್ಮಿತಾ. ಹೊರಗಡೆ ಹೆಚ್ಚು ಕಾಣಿಸಿಕೊಳ್ಳದ ಸಿದ್ದರಾಮಯ್ಯನವರ ಸೊಸೆ ಮೇಘನಾ ರಾಜ್ ಹಾಗೂ ಸುಂದರಾಜ್ ಫ್ಯಾಮಿಲಿಗೆ ಸಾಂತ್ವನ ಹೇಳಿದ್ದಾರೆ. ಸತತ ಮೂರು ಗಂಟೆಗಳ ಕಾಲ ಮಾತನಾಡಿದ್ದಾರೆ. ಬಳಿಕ ಮೇಘನಾ,ಸುಂದರ್ ರಾಜ್, ಸ್ಮಿತಾ ಫೋಟೋ ಕೂಡ ತೆಗೆದುಕೊಂಡಿದ್ದಾರೆ ಸುಂದರ್ ರಾಜ್ ಹಾಗೂ ಸಿದ್ಧರಾಮಯ್ಯನವರ ಫ್ಯಾಮಿಲಿಗೆ ಪರಿಚಯ ಇರೋ ಪ್ರಥಮ್ ಕೂಡ ಈ ವೇಳೆ ಇದ್ದರು. ಚಿರಂಜೀವಿ ಸರ್ಜಾ ಹೃದಯಾಘಾತದಿಂಧ ಅಪಾರ ಕನ್ನಡ ಅಭಿಮಾನಿಗಳನ್ನು ಅಗಲಿದ್ದರು. Siddaramaiah daughter in law Smitha and Bigg Boss Pratham Meets chiranjeevi sarja wife Meghana Raj Bengaluru ಮೇಘನಾ ರಾಜ್ ಭೇಟಿ ಮಾಡಿದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಭೇಟಿ ಮಾಡಿ ಸಾಂತ್ವನ ಹೇಳಿದರು.