ಕಾರಣಾಂತರಗಳಿಂದ ಸದಭಿರುಚಿಯ ಧಾರಾವಾಹಿ 'ಮಗಳು ಜಾನಕಿ' ಅರ್ಧಕ್ಕೆ ಅಂತ್ಯವಾಯಿತು. ಆದರೆ ನಾಯಕಿ ಗಾನವಿ ಲಕ್ಷ್ಮಣ್ ಸುಮ್ಮನೆ ಕುಳಿತಿಲ್ಲ. ಹೊಸ ಪ್ರಯೋಗದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ. ಹಾಗಾದರೆ ಮಗಳು ಜಾನಕಿ ಏನು ಮಾಡುತ್ತಿದ್ದಾರೆ? ಅವರ ಹೊಸ ಪ್ರಾಜೆಕ್ಟ್ ಏನು? ಚಿಕ್ಕಮಗಳೂರಿನ ಮನೆಯಲ್ಲಿ ಲಾಕ್‌ಡೌನ್ ಸಮಯ ಕಳೆಯುತ್ತ ತಮ್ಮ ಮೊದಲ ಸಿನಿಮಾ 'ಭಾವಚಿತ್ರ'ದ ಮೇಲೆ ಗಮನ ಕೇಂದ್ರಿಕರೀಸಿದ್ದಾರೆ. ಗಿರೀಶ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಎರಡು ಗೆಟಪ್ ನಲ್ಲಿ ಮಗಳು ಜಾನಕಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್ ಡೌನ್ ಕಾರಣದಿಂದ ಕಲಿರುತೆರೆ ಧಾರಾವಾಹಿ ಶೂಟಿಂಗ್ ಬಂದ್ ಆಗಿತ್ತು. ಅನಿವಾರ್ಯ ಕಾರಣಗಳಿಂದ ಮಗಳು ಜಾನಕಿ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಸ್ಥಿತಿ ಒದಗಿ ಬಂದಿತ್ತು. ಮಗಳು ಜಾನಕಿ ನಿರ್ದೇಶಕ ಟಿ.ಎನ್. ಸೀತಾರಾಮ್ ಯಾವ ಕಾರಣಕ್ಕೆ ಧಾರಾವಾಹಿ ನಿಲ್ಲಿಸುತ್ತಿದ್ದೇವೆ ಎಂಬುದರ ವಿವರಣೆ ನೀಡಿದ್ದರು. magalu janaki serial fame-ganavi laxman next project 'ಮಗಳು ಜಾನಕಿ' ಅರ್ಧಕ್ಕೆ ಅಂತ್ಯವಾಯಿತು ಆದರೆ ನಾಯಕಿ ಗಾನವಿ ಲಕ್ಷ್ಮಣ್ ಸುಮ್ಮನೆ ಕುಳಿತಿಲ್ಲ.