ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

First Published | Jun 25, 2020, 6:46 PM IST

ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್‌ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಫೋಟೋಗಳನ್ನು ನೋಡಿದರೆ ಈ ಜೋಡಿ ಬೀಚ್ ಇಷ್ಟವೆಂಬುವುದುತಿಳಿಯುತ್ತದೆ. ಮಾಲ್ಡೀವ್ಸ್‌ Seychellesವರೆಗೆ, ದಂಪತಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಯಶ್ ನೆಕ್ಸ್ಟ್‌ ಕೆಜಿಎಫ್:2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಹೇಶ್ ಬಾಬು ಕೊನೆಯ ಚಿತ್ರ ಸರಿಲೆರು ನೀಕೆವ್ವರ ಯಶಸ್ಸಿನ ನಂತರ, ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ಗೆ ಹಾಲಿಡೇಗೆಹೋಗಿದ್ದರು. ಪತ್ನಿ ನಮ್ರತಾ ಶಿರೋಡ್ಕರ್‌ನ್ಯೂಯಾರ್ಕ್‌ನ ಈ ಫೋಟೋವನ್ನುಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಪರಶುರಾಮ್ ನಿರ್ದೇಶನದ ಸರಕು ವಾರಿ ಪಾಟಾಮಹೇಶ್ ಬಾಬು ಮುಂದಿನ ಚಿತ್ರ.
Tap to resize

ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಅಭಿಮಾನಿಗಳಿಗೆ ಕಪಲ್‌ ಗೋಲ್‌ ಸೆಟ್‌ ಮಾಡುವುದರಲ್ಲಿ ಎತ್ತಿದ ಕೈ. ಸೋಷಿಯಲ್ ಮೀಡಿಯಾದ ಅವರ ಪೋಸ್ಟ್‌ಗಳಿಂದ, ಅವರಿಬ್ಬರೂ ಟ್ರಾವೆಲ್‌ ಪ್ರಿಯರು ಹಾಗೂ ಸದಾ ಬ್ಯಾಕ್‌ಪ್ಯಾಕ್‌ ರೆಡಿಯಾಗಿ ಇಟ್ಟುಕೊಂಡಿರಲು ಇಷ್ಟಪಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ಕಪಲ್‌ಹಾಲೀಡೆಫೋಟೋ ಇದು.ಜೂನಿಯರ್ NTR ಜೊತೆಗೆ NS ರಾಜಮೌಳಿ ನಿರ್ದೇಶನದ RRR ರಾಮ್ ಚರಣ್‌ರ ಅಪ್‌ಕಮಿಂಗ್ಪ್ರಾಜೆಕ್ಟ್‌.
ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಪತ್ನಿ ಸುಪ್ರಿಯಾ ಮೆನನ್ ದಕ್ಷಿಣದ ಮೋಸ್ಟ್‌ ಫೇವರೇಟ್‌ ಸ್ಟಾರ್ ದಂಪತಿಗಳಲ್ಲಿ ಒಬ್ಬರು. ಪೃಥ್ವಿರಾಜ್ ಅವರ ಮುಂದಿನ ಚಿತ್ರ ಆಡು ಜೀವಿತಂ ಚಿತ್ರೀಕರಣದ ಸಮಯದಲ್ಲಿ ಜೋರ್ಡಾನ್‌ನಲ್ಲಿದ್ದಾಗ, ಅವರು ಮತ್ತು ಅವರ ಪತ್ನಿ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಂಡರು. ಇದು ಮನಾಲಿಯಲ್ಲಿ ಕಳೆದ ರಜಾದಿನದ ಫೋಟೋ.
ಕಾಲಿವುಡ್ ನಟ ಕಾರ್ತಿ ಇಂಡಸ್ಟ್ರಿಯಲ್ಲಿ ಫ್ಯಾಮಿಲಿ ಬಾಯ್‌ ಎಂದೇ ಫೇಮಸ್‌.ಮಾಲ್ಡೀವ್ಸ್‌ನ ಕಾರ್ತಿ ಮತ್ತು ಕುಟುಂಬದ ಫೋಟೋ. ಮೆಗಾಹಿಟ್ ಕೈತಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ ಕಾರ್ತಿ, ಮುಂದಿನ ದಿನಗಳಲ್ಲಿ ಮಣಿರತ್ನಂ ಜೊತೆ ಪೊನ್ನಿಯಿನ್ ಸೆಲ್ವನ್‌ನಲ್ಲಿ ಕೆಲಸ ಮಾಡಲಿದ್ದಾರೆ
ಮಾಲಿವುಡ್‌ನ ನೆಚ್ಚಿನ ದಂಪತಿ ಟೋವಿನೋ ಥಾಮಸ್ ಮತ್ತು ಪತ್ನಿ ಲಿಡಿಯಾ ಥಾಮಸ್‌ ಲೈಫ್‌ನಲ್ಲಿ ಒಂದೆರಡು ತಿಂಗಳ ಹಿಂದೆ ಮಗುವಿನ ಆಗಮನವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ವೈಯಕ್ತಿಕ ಸಂಗತಿಗಳನ್ನು ಕಡಿಮೆ ಶೇರ್‌ ಮಾಡಿಕೊಳ್ಳುವ ದಂಪತಿಗಳಲ್ಲಿ ಒಬ್ಬರು. ಲೇಹ್‌ನ ಥ್ರೋಬ್ಯಾಕ್ ಫೋಟೋಗಳಲ್ಲಿ ಒಂದಿದು.ಟೋವಿನೋ ಥಾಮಸ್ ಸೂಪರ್ ಹೀರೋ ಮ್ಯೂವಿ ಮಿನ್ನಾಲ್ ಮುರಾಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರಿ ಅಭಿಮಾನಿಗಳನ್ನು ಹೊಂದಿರುವ ದುಲ್ಕರ್ ಸಲ್ಮಾನ್ ಮತ್ತೊಬ್ಬ ನೆಚ್ಚಿನ ನಟ, ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳವುದು ಕಡಿಮೆಯಾದರೂ, ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕೆಲವು ಫೋಟೋಗಳು, ಅವರು ತಿರುಗಾಟದ ವ್ಯಕ್ತಿ ಎಂದು ತೋರಿಸುತ್ತದೆ. ದುಲ್ಕರ್ ಪತ್ನಿ ಅಮಲ್ ಸೂಫಿಯಾ ಅವರೊಂದಿಗೆ ಇಂಗ್ಲೆಂಡ್‌ನಲ್ಲಿ ಕಳೆದ ರಜಾದಿನದ ಫೋಟೋವಿದು. ದುಲ್ಕರ್‌, ಅದಿತಿ ರಾವ್ ಹೈದರಿ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ ಬೃಂದಾ ಮಾಸ್ಟರ್ಸ್ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಣಿರತ್ನಂ ಅವರ ಭವ್ಯವಾದ ಪ್ರೊಜೆಕ್ಟ್‌ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಜಯಂ ರವಿ. ಪತ್ನಿ ಆರತಿ ರವಿ ಇನ್ಸ್ಟಾಗ್ರಾಮ್‌ನಲ್ಲಿ ಆ್ಯಕ್ವಿವ್ಇದ್ದು ತಮ್ಮ ವೆಕೇಷನ್‌ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದಾರೆ. Pont au Doubleನಲ್ಲಿ ಎಂಜಾಯ್‌ ಮಾಡುತ್ತಿರುವ ದಂಪತಿ ಫೋಟೋವಿದು.

Latest Videos

click me!