ಸ್ಯಾಂಡಲ್ ವುಡ್ ನಟಿ ಮತ್ತು ಬಿಗ್ ಬಾಸ್ ಕನ್ನಡದಲ್ಲಿ ತನ್ನ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದ ನಟಿ ಶುಭ ಪೂಂಜಾ (Shubha Poonja) ಸದ್ಯ ಹಲವು ಸಿನಿಮಾಗಳಲ್ಲಿ ನಟಿಸೋದರಲ್ಲಿ ಬ್ಯುಸಿ. ಇದರ ಮಧ್ಯೆ ತಮಿಳುನಾಡಿಗೆ ತೆರಳಿ ದೇಗುಲ ದರ್ಶನ ಕೂಡ ಮಾಡಿದ್ದಾರೆ.
ಶುಭ ಪೂಂಜಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ತಮಿಳುನಾಡಿನ ಕುಂಬಕೋಣಂ ಗೆ ತೆರಳಿ, ಅಲ್ಲಿನ ಪ್ರಸಿದ್ಧ ದೇಗುಲ ದರ್ಶನ ಮಾಡಿ, ದೇಗುಲದ ಪುಷ್ಕರಿಣಿಯ ಮುಂದೆ, ದೇಗುಲದ ಪರಿಸರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಶುಭ ತಮ್ಮ ಪತಿ ಸುಮಂತ್ ಮಹಾಬಲ ಬಿಲ್ಲವ, ಹಾಗೂ ತಮ್ಮ ಸ್ನೇಹಿತರ ಜೊತೆಗೆ ಕುಂಬಕೋಣಂಗೆ ತೆರಳಿದ್ದು, ಶುಭ ಬಿಳಿ ಸೀರೆ, ಹಸಿರು ಬ್ಲೌಸ್, ಜೊತೆಗೆ ಮಲ್ಲಿಗೆ ಮುಡಿದ ಜಡೆಯಲ್ಲಿ ಕಾಣಿಸಿಕೊಂಡರೆ, ಪತಿ ಸುಮಂತ್ ಪಂಚೆ ಮತ್ತು ಶರ್ಟ್ ಧರಿಸಿದ್ದಾರೆ.
ಶುಭ ಪೂಂಜಾ ಅವರನ್ನು ನೋಡಿದ್ರೆ ತೂಕ ಇಳಿಸಿ ಸಿಕ್ಕಾಪಟ್ಟೆ ಸಣ್ಣದಾಗಿರೋ ತರ ಕಾಣಿಸ್ತಿದೆ. ಕೆಲ ಸಮಯದ ಹಿಂದೆ ಮೈಕೈ ತುಂಬಿಕೊಂಡಿದ್ದ ಶುಭ, ಈಗ ಸಖತ್ ಸ್ಲಿಮ್ ಆಗಿರೋವಂತೆ ಕಾಣಿಸ್ತಿದೆ. ಸಿನಿಮಾಗಳಿಗಾಗಿ ತೂಕ ಇಳಿಸಿಕೊಂಡಿರೋ ಸಾಧ್ಯತೆ ಕೂಡ ಇದೆ.
ಶುಭ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಹ ಕಾಮೆಂಟ್ ಮಾಡಿದ್ದು, ಸೀರೆಯಲ್ಲಿ ಅಂದವಾಗಿ ಕಾಣಿಸ್ತೀರಿ, ಮೊಗ್ಗಿನ ಮನಸಿನ ಹುಡುಗಿಯ ತರವೇ ಕಾಣಿಸ್ತಿದ್ದೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಜ್ಯಾಕ್ ಪಾಟ್ ಸಿನಿಮಾ ಮೂಲಕ 2006 ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶುಭ ಪೂಂಜಾ, 17 ವರ್ಷಗಳಿಂದ ತಮ್ಮ ಅಭಿನಯದ ಮೂಲಕ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ (Kannada Films) ನಟಿಸುವ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದ್ದಾರೆ. ಮೊಗ್ಗಿನ ಮನಸು, ಸ್ಲಂ ಬಾಲ, ಚಂಡ ಇವರ ಜನಪ್ರಿಯ ಸಿನಿಮಾಗಳು.
ಶುಭ ಪೂಂಜಾ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲೂ ಭಾರಿ ಜನಪ್ರಿಯತೆ ಪಡೆದಿದ್ದರು. ಸದ್ಯ ನಟಿ ಅಂಬುಜಾ, ತ್ರಿದೇವಿ ಎನ್ನುವ ಸಿನಿಮಾದಲ್ಲೂ, ಕೊರಗಜ್ಜನ ಜೀವನದ ಕುರಿತ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾಗಳು ತೆರೆ ಕಾಣೋದು ಬಾಕಿ ಇದೆ.