ಆ ತರ ಪಾತ್ರ ಇಷ್ಟವಿಲ್ಲ ಎಂದು ಚಿತ್ರರಂಗ ಬಿಟ್ಟು ಬಿಟ್ಟೆ; 'ಅಣ್ಣಯ್ಯ' ಚಿತ್ರದ ನಟಿ ಮಧು ಹೇಳಿಕೆ ವೈರಲ್

Published : Mar 29, 2024, 12:07 PM IST

90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮಧು ಇದ್ದಕ್ಕಿದ್ದಂತೆ ಸಿನಿಮಾದಿಂದ ದೂರ ಇರಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ. 

PREV
17
ಆ ತರ ಪಾತ್ರ ಇಷ್ಟವಿಲ್ಲ ಎಂದು ಚಿತ್ರರಂಗ ಬಿಟ್ಟು ಬಿಟ್ಟೆ; 'ಅಣ್ಣಯ್ಯ' ಚಿತ್ರದ ನಟಿ ಮಧು ಹೇಳಿಕೆ ವೈರಲ್

ಮತ್ತೆ ಸಿನಿಮಾಗಳಲ್ಲಿ ಮಿಂಚುತ್ತಿರುವ ಮಧು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆದರೆ ಈಗ ಅವರು ತಾವು  ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಇಂಡಸ್ಟ್ರಿ ತೊರೆದದ್ದು ಏಕೆ ಎಂಬ ಬಗ್ಗೆ ಮಾತನಾಡಿದ್ದಾರೆ.

27

ಅದರಲ್ಲಿ ಅವರು ಮೊದಲು ಹೇಳಿದ್ದು ಏನೆಂದರೆ, ನಾನು ಅಜಯ್​ ದೇವಗನ್​ ಅವರ ಅಮ್ಮನಾಗಲು ಇಷ್ಟವಿರಲಿಲ್ಲ. ಅದಕ್ಕೇ ನಾನು ಇಂಡಸ್ಟ್ರಿ ತೊರೆದೆ ಎಂದಿದ್ದಾರೆ.  

37

ಅದಕ್ಕೆ ಸಮಜಾಯಿಷಿ ನೀಡಿರುವ ಮಧು, ಅಜಯ್ ದೇವಗನ್ ಮತ್ತು ನಾನು ಇಬ್ಬರೂ ಒಟ್ಟಿಗೆ ಇಂಡಸ್ಟ್ರಿಗೆ ಬಂದೆವು. 90 ರ ದಶಕದಲ್ಲಿ ಆಕ್ಷನ್ ಚಲನಚಿತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದೆವು. 

47

ಇದರಲ್ಲಿ ನನ್ನ ಪಾತ್ರಕ್ಕೂ ಒಳ್ಳೆಯ ಮೆಚ್ಚುಗೆ ಬಂದಿತು. ಇಬ್ಬರು ರೊಮ್ಯಾಂಟಿಕ್ ಕಪಲ್​ಎಂದೇ ಫೇಮಸ್​ ಆದೆವು. ಇದಲ್ಲದೇ ಹಲವಾರು ನಾಯಕರ ಜೊತೆ ತೆರೆಯ ಮೇಲೆ ದಶಕದವರೆಗೆ ರೊಮಾನ್ಸ್​ ಮಾಡಿದ್ದೇನೆ. ಅದಾದ ಬಳಿಕ ಇಂಡಸ್ಟ್ರಿ ಬಿಡಲು ತೀರ್ಮಾನಿಸಿದೆ ಎಂದಿದ್ದಾರೆ.

57

ಎಲ್ಲರಿಗೂ ತಿಳಿದಿರುವಂತೆ ಒಂದು ವಯಸ್ಸು ಆದ ಮೇಲೆ ಸಿನಿ ಇಂಡಸ್ಟ್ರಿಯಲ್ಲಿ ನಾಯಕಿಯಾದವರನ್ನು ಅಮ್ಮನ ಪಾತ್ರಕ್ಕೆ ಹಾಕುವುದು ಮಾಮೂಲು. ಆದರೆ ಅವರ ಎದುರು ನಾಯಕ ನಟನಾಗಿದ್ದ ಮಾತ್ರ ವಯಸ್ಸು 50 -60 ದಾಟಿದರೂ ನಾಯಕನಾಗಿಯೇ ಮುಂದುವರೆಯುತ್ತಾರೆ. 

67

ಅವರಿಗೆ ನಾಯಕಿಯಾಗಿ ನಟಿಸಿದಾಕೆ ಮುಂದೊಂದು ದಿನ ಅವರಿಗೆ ತಾಯಿಯಾಗುವ ಅನಿವಾರ್ಯತೆಯೂ ಸಿನಿಮಾದಲ್ಲಿ ಇದೆ. ಇದನ್ನೇ ಮಧು ಅವರು ಹೇಳಿದ್ದು. 

77

ಅದಕ್ಕಾಗಿಯೇ ಅವರು ಅಜಯ್​ ದೇವಗನ್​ ಅವರಿಗೆ ತಾಯಿಯಾಗಲು ನನಗೆ ಇಷ್ಟವಿರಲಿಲ್ಲ, ಮಾತ್ರವಲ್ಲದೇ ನಾನು ನಟಿಸಿರುವ ಯಾವುದೇ ನಾಯಕನಿಗೆ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲದ ಕಾರಣ, ಇಂಡಸ್ಟ್ರಿ ತೊರೆದೆ ಎಂದಿದ್ದಾರೆ.

Read more Photos on
click me!

Recommended Stories