ನಿರೂಪ್ ಭಂಡಾರಿ (Nirup Bhandari) ಕನ್ನಡ ಚಿತ್ರರಂಗದ ಭರವಸೆಯ ನಟ. ನಿರೂಪ್ ರಂಗಿತರಂಗ ಸಿನಿಮಾದ ಮೂಲಕ ಕನ್ನಡ ಸಿನಿಮಾದಲ್ಲಿ ಸಂಚಲನ ಮೂಡಿಸಿದ್ದರು. ವಿಶಿಷ್ಟ ಕಥೆಯ ಥ್ರಿಲ್ಲರ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಗೆದ್ದಿದ್ದರು ನಿರೂಪ್ ಭಂಡಾರಿ.
2015 ರಲ್ಲಿ ರಂಗಿ ತರಂಗ (Rangitaranga) ಬಿಡುಗಡೆಯಾಗಿದ್ದು, ಆಮೇಲೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಿರೂಪ್ ನಟಿಸಿದ್ದರು. ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ, ರಾಜರಥ, ಅಮರ್, ಆದಿ ಲಕ್ಷ್ಮಿ ಪುರಾಣ, ವಿಂಡೋ ಸೀಟ್ ಸಿನಿಮಾದಲ್ಲಿ ನಟಿಸಿದ್ದರು.
ಸದ್ಯ ನಿರೂಪ್ ಎಡಗೈಯೇ ಅಪಘಾತಕ್ಕೆ ಕಾರಣ ಎನ್ನುವ ದಿಗಂತ್ ಅವರ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಅವರ ಹೊಸ ಸಿನೆಮಾ ಸತ್ಯ ಸನ್ ಆಫ್ ಹರಿಶ್ಚಂದ್ರ ಸಿನಿಮಾದ ಟೈಟಲ್ ಲಾಂಚ್ ಆಗಿತ್ತು. ಈ ಸಿನಿಮಾದಲ್ಲಿ ಸಾಯಿಕುಮಾರ್ ತಂದೆಯ ಪಾತ್ರದಲ್ಲಿ ನಟಿಸ್ತಿದ್ದಾರೆ.
ಸಿನಿಮಾ ವಿಷ್ಯ ಬಿಟ್ಟು ಪರ್ಸನಲ್ ವಿಷ್ಯದ ಬಗ್ಗೆ ಹೇಳೋದಾದರೆ ನಿರೂಪ್ ಭಂಡಾರಿ ದಕ್ಷಿಣ ಕನ್ನಡದ ಪುತ್ತೂರಿನವರು. ಇವರ ಪತ್ನಿ ಧನ್ಯಾ. 2016 ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ವೈರಲ್ ಆಗುತ್ತಿದೆ.
ನಿರೂಪ್ ಭಂಡಾರಿ ಪತ್ನಿ ಕೂಡ ಯಾವುದೇ ಹಿರೋಯಿನ್ ಗೂ ಕಡಿಮೆ ಇಲ್ಲ ಎನ್ನುವಂತೆ ಅಂದವಾಗಿದ್ದಾರೆ. ನಿರೂಪ್ ನಂತೆ ಹೈಟ್ ಆಗಿರುವ ಹುಡುಗಿ ಧನ್ಯ. ಇವರಿಬ್ಬರದು ಲವ್ ಮ್ಯಾರೇಜ್ ಅಂತೆ.
ಕೆಲ ವರ್ಷಗಳ ಹಿಂದೆ ಸಂದರ್ಶನ ಒಂದರಲ್ಲಿ ನಿರೂಪ್ ಭಂಡಾರಿ ತಮ್ಮ ಲವ್ ಬಗ್ಗೆ ಮಾತನಾಡಿದ್ರು. ಹೆಂಡ್ತಿ ಧನ್ಯ ಅವರು ಫ್ಯಾಮಿಲಿ ಫ್ರೆಂಡ್ (family friend) ಆಗಿ ಪರಿಚಯವಂತೆ. ಬಾಲ್ಯದಿಂದಲೇ ಒಬ್ಬರಿಗೊಬ್ಬರು ಗೊತ್ತಿದ್ದ ಫ್ಯಾಮಿಲಿ, ಆಮೇಲೆ ಲವ್ ಮಾಡಿ, ಅವರನ್ನೆ ಮದುವೆಯಾಗಿದ್ದಾರೆ.
ಇತ್ತೀಚೆಗೆ ನಿರೂಪ್ ಭಂಡಾರಿ ತಮ್ಮ ವಿವಾಹ ವಾರ್ಷಿಕೋತ್ಸವ (wedding anniversary) ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪತ್ನಿಗೆ ಮುದ್ದಾಗಿ ವಿಶ್ ಮಾಡಿದ್ದರು.