Raana ಚಿತ್ರದ ಗಲ್ಲಿಬಾಯ್‌ ಹಾಡು ಬಿಡುಗಡೆ!

Published : Sep 21, 2022, 02:37 PM IST

ಶ್ರೇಯಸ್‌ ಮಂಜು ನಟನೆಯ ಸಿನಿಮಾ ರಾಣಾ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಗಲ್ಲಿಬಾಯ್ ಹಾಡು...

PREV
17
Raana ಚಿತ್ರದ ಗಲ್ಲಿಬಾಯ್‌ ಹಾಡು ಬಿಡುಗಡೆ!

ಶ್ರೇಯಸ್‌ ಕೆ ಮಂಜು ಅಭಿನಯದ ‘ರಾಣಾ’ ಚಿತ್ರದ ‘ಗಲ್ಲಿ ಬಾಯ್‌’ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಚಂದನ್‌ ಶೆಟ್ಟಿಸಂಗೀತ, ಸಾಹಿತ್ಯ ನೀಡಿದರೆ, ಯುವ ಪ್ರತಿಭೆ ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ.

27

ಈ ವಿಶೇಷ ಹಾಡನ್ನು ನಿರ್ದೇಶಕ ಜೋಗಿ ಪ್ರೇಮ್‌ ಬಿಡುಗಡೆ ಮಾಡಿದರು. ಪುರುಷೋತ್ತಮ್‌ ಗುಜ್ಜಾಲ್‌ ನಿರ್ಮಾಣದ ಈ ಚಿತ್ರವನ್ನು ನಂದಕಿಶೋರ್‌ ನಿರ್ದೇಶಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. 

37

ಖಳನಾಯಕನ ಪಾತ್ರದಲ್ಲಿ ಫಿಟ್‌ನೆಸ್‌ ಟ್ರೈನರ್‌ ರಘು ಕಾಣಿಸಿಕೊಂಡಿದ್ದಾರೆ. ‘ಇದು ನಮ್ಮ ಕೆ ಮಂಜು ಮಗನ ಸಿನಿಮಾ. ಶ್ರೇಯಸ್‌ ಅವರಿಗೆ ಸಿನಿಮಾ ಮೇಲಿನ ಪ್ರೀತಿ ಜಾಸ್ತಿ. ಇವರಿಗಾಗಿ ನಾನು ಈ ಚಿತ್ರದ ಹಾಡು ಬಿಡುಗಡೆಗೆ ಬಂದೆ. 

47

ಹಾಡು ನೋಡಿದಾಗ ಖುಷಿ ಆಯಿತು. ಮೇಕಿಂಗ್‌, ಸಾಹಿತ್ಯ ತುಂಬಾ ಚೆನ್ನಾಗಿದೆ. ನಾಯಕ, ನಾಯಕಿ ಇಬ್ಬರು ಅದ್ಭುತವಾಗಿ ಕುಣಿದಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿ’ ಎಂದು ಪ್ರೇಮ್‌ ಶುಭ ಕೋರಿದರು.

57

ಶ್ರೇಯಸ್‌ ಮಾತನಾಡಿ, ‘ಒಳ್ಳೆಯ ಕತೆ ಇರುವ ಸಿನಿಮಾ. ಈ ಬಿಡುಗಡೆ ಆಗಿರುವ ಹಾಡಿನಿಂದ ಚಿತ್ರಕ್ಕೆ ಹೊಸ ಕಿಕ್‌ ಬರಲಿದೆ. ತುಂಬಾ ಇಷ್ಟಪಟ್ಟು ಪ್ರೀತಿಯಿಂದ ಮಾಡಿರುವ ಹಾಡು ಇದು. 

67

ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಎಲ್ಲರಿಗೂ ಧನ್ಯವಾದಗಳು’ ಎಂದರು. ನಿರ್ದೇಶಕ ನಂದಕಿಶೋರ್‌ ಹೆಚ್ಚು ಮಾತನಾಡಲಿಲ್ಲ. ನಿರ್ಮಾಪಕ ಗುಜ್ಜಾಲ್‌ ಪುರುಷೋತ್ತಮ್‌ ಅವರು ನಮ್ಮಂಥ ನಿರ್ಮಾಪಕರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. 

77

 ಕೆ ಮಂಜು ಚಿತ್ರದ ಒಂದು ಸಾಲಿನ ಕತೆ ಹೇಳಿದರು.  ಅವರ ಪ್ರಕಾರ ಇದು ಹಳ್ಳಿಯಿಂದ ಬೆಂಗಳೂರಿಗೆ ಬರುವ ಹುಡುಗನ ಕತೆ. ರೀಷ್ಮಾ ನಾಣಯ್ಯ ಮಾತು ಧನ್ಯವಾದಕ್ಕೆ ಸೀಮಿತವಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories