ನೆಚ್ಚಿನ ತಮಿಳು ಹೀರೋಗೆ ನಾಯಕಿಯಾದ ಅಶಿಕಾ; ಕಾಲಿವುಡ್‌ಗೆ ಹಾರಿದ 'ಚುಟು ಚುಟು' ಸುಂದರಿ

Published : Sep 17, 2022, 01:52 PM IST

ಸ್ಯಾಂಡಲ್ ವುಡ್ ನಟಿ ಅಶಿಕಾ ರಂಗನಾಥ್ ಸದ್ಯ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್‌ನ ಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಇದೀಗ ಕಾಲಿವುಡ್‌ ಕಡೆ ಮುಖ ಮಾಡಿದ್ದಾರೆ. 

PREV
17
ನೆಚ್ಚಿನ ತಮಿಳು ಹೀರೋಗೆ ನಾಯಕಿಯಾದ ಅಶಿಕಾ; ಕಾಲಿವುಡ್‌ಗೆ ಹಾರಿದ 'ಚುಟು ಚುಟು' ಸುಂದರಿ
Ashika Ranganath

ಸ್ಯಾಂಡಲ್ ವುಡ್ ನಟಿ ಅಶಿಕಾ ರಂಗನಾಥ್ ಸದ್ಯ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್‌ನ ಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಇದೀಗ ಕಾಲಿವುಡ್‌ ಕಡೆ ಮುಖ ಮಾಡಿದ್ದಾರೆ. 

27

ಹೌದು, ಆಶಿಕಾ ನಟನೆಯ ಮೊದಲ ತಮಿಳು ಸಿನಿಮಾದ ಮುಹೂರ್ತ ನೆರವೇರಿದೆ. ಅಂದಹಾಗೆ ಆಶಿಕಾ ಕಾಲಿವುಡ್‌ನ ಖ್ಯಾತ ನಟನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದು ಮತ್ಯಾರು ಅಲ್ಲ ಸಿದ್ಧಾರ್ಥ್. ಸಿದ್ಧಾರ್ಥ್ ಜೊತೆ ನಟಿಸುವ ಮೂಲಕ ಆಶಿಕಾ ತಮಿಳು ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 

37

ಆಶಿಕಾ ಮತ್ತು ಸಿದ್ಧಾರ್ಥ್ ಸೇರಿದಂತೆ ಇಡೀ ಸಿನಿಮಾತಂಡ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ನಟ ಸಿದ್ಧಾರ್ಥ್, ಆಶಿಕಾ ಅವರ ನೆಚ್ಚಿನ ನಟರಂತೆ. ತನ್ನ ಫೇವರಿಟ್ ಹೀರೋ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಆಶಿಕಾ ಸಂತಸ ಹಂಚಿಕೊಂಡಿದ್ದಾರೆ. 

47

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಆಶಿಕಾ ಶಾಲ ದಿನಗಳ ಹೀರೋ ಜೊತೆ ಸಿನಿಮಾ ಮಾಡುತ್ತಿರುವುದು ತುಂಬಾ ವಿಶೇಷ ಎಂದು ಬರೆದುಕೊಂಡಿದ್ದಾರೆ. ಸಿದ್ಧಾರ್ಥ್ ಜೊತೆ ಪೋಸ್ ನೀಡಿರುವ ಫೋಟೋ ಶಏರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. 

57

ತಮಿಳು ಸಿನಿಮಾದ ಮುಹೂರ್ತದ ಫೋಟೋಗಳು. ಇದು ನನಗೆ ತುಂಬಾ ವಿಶೇಷ ಮತ್ತು ಉತ್ಸುಕಳಾಗಿದ್ದೀನಿ. ಸಿದ್ಧಾರ್ಥ್ ನನ್ನ ನೆಚ್ಚಿನ ನಟ. ಬೊಮ್ಮರಿಲು ಮತ್ತು ನುವೋಸ್ತಾನಂಟೆ ನೂವದ್ದಾಂಟಾನಾ ಸಿನಿಮಾಗಳನ್ನು ಅನೇಕ ಬಾರಿ ವೀಕ್ಷಿಸಿದ್ದೀನಿ. ಈ ಸಿನಿಮಾದ ಭಾಗವಾಗಿರುವುದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. 

67

ಆಶಿಕಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ಆಲ್ ಓಕೆ, ನಟಿ ನಿಶ್ವಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ್ ಸೇರಿದಂತೆ ಅನೇಕರು ವಶುಭಹಾರೈಸಿದ್ದಾರೆ.  

77

ಅಂದಹಾಗೆ ಇದೊಂದು ಪಕ್ಕ ಲವ್ ಸ್ಟೋರಿ ಸಿನಿಮಾ ಎನ್ನಲಾಗಿದೆ. ಆಶಿಕಾ ಮತ್ತು ಸಿದ್ಧಾರ್ಥ್ ಕೆಮಿಸ್ಟ್ರಿ ತಮಿಳು ಸಿನಿಮಾ ಪ್ರಿಯರಿಗೆ ಇಷ್ಟವಾಗಿತ್ತಾ, ಆಶಿಕಾ ಮೊದಲ ತಮಿಳು ಸಿನಿಮಾದಲ್ಲಿ ಗೆದ್ದು ಬೀಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ನೆಚ್ಚಿನ ನಟನ ಜೊತೆ ನಟಿಸಲು ಆಶಿಕಾ ಕೂಡ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ನಟಿ ಮುಂದಿನ ದಿನಗಳಲ್ಲಿ ಅಪ್‌ಡೇಟ್ ನೀಡುವ ಸಾಧ್ಯತೆ ಇದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories