ಸೆ.26ಕ್ಕೆ Dhruva Sarja ಹೊಸ ಚಿತ್ರ ಘೋಷಣೆ; 20 ಎಕರೆಯಲ್ಲಿ ಸೆಟ್?

Published : Sep 21, 2022, 02:03 PM IST

100 ದಿನಗಳ ಶೂಟಿಂಗ್‌ ಶೆಡ್ಯೂಲ್‌, 20 ಎಕರೆಯಲ್ಲಿ ಅದ್ದೂರಿ ಸೆಟ್‌. ಯಾರ ಜೊತೆಗೆ ಪ್ರಿನ್ಸ್‌ ಮುಂದಿನ ಸಿನಿಮಾ?

PREV
17
ಸೆ.26ಕ್ಕೆ Dhruva Sarja ಹೊಸ ಚಿತ್ರ ಘೋಷಣೆ; 20 ಎಕರೆಯಲ್ಲಿ ಸೆಟ್?

ಜೋಗಿ ಪ್ರೇಮ್‌ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಕಳೆದ ಒಂದು ವಾರದಿಂದ ಮುಂಬೈನ ಯಶ್‌ ರಾಜ್‌ ಫಿಲಮ್ಸ್‌ ಸ್ಟುಡಿಯೋದಲ್ಲಿ ಹಾಡುಗಳ ರೀರೆಕಾರ್ಡಿಂಗ್‌ ನಡೆಯುತ್ತಿದೆ. 

27

ಇದೇ ಸೆ.26ಕ್ಕೆ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಲು ನಿರ್ದೇಶಕ ಪ್ರೇಮ್‌ ತಯಾರಿ ಮಾಡಿಕೊಂಡಿದ್ದಾರೆ. ಸೆ.27ರಿಂದ ಶೂಟಿಂಗ್‌ ಶುರುವಾಗಲಿದೆ.

37

ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ನಾಲ್ಕನೇ ಚಿತ್ರ ಇದಾಗಿದ್ದು, ನಿರ್ಮಾಪಕರಾದ ಕೋನಾ ವೆಂಕಟ್‌, ಸುಪ್ರೀತ್‌ ನೂರು ದಿನಗಳ ಕಾಲ ಈ ಚಿತ್ರಕ್ಕೆ ಶೂಟಿಂಗ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. 

47

ಚಿತ್ರಕ್ಕಾಗಿ ಎರಡು ಕಡೆ ಸೆಟ್‌ಗಳನ್ನು ಹಾಕಲಾಗುತ್ತಿದೆ. ಬೆಂಗಳೂರಿನ ಸುಂಕದಕಟ್ಟೆಬಳಿ ಬರುವ ಸೀಗೇಹಳ್ಳಿ ಹತ್ತಿರ 20 ಎಕರೆಯಲ್ಲಿ ಒಂದು ದೊಡ್ಡ ಸೆಟ್‌ ಕೆಲಸ ಬಹುತೇಕ ಮುಕ್ತಾಯಗೊಂಡಿದೆ. 

57

ಈ ಸೆಟ್‌ನಲ್ಲಿ ಚಿತ್ರದ ಶೇ.80 ಭಾಗ ಚಿತ್ರೀಕರಣ ನಡೆಯಲಿದೆ. ಹಲವು ವರ್ಷಗಳಿಂದ ಬಾಗಿಲು ಹಾಕಿಕೊಂಡಿರುವ ಮೈಸೂರ್‌ ಲ್ಯಾಂಫ್ಸ್‌ನ ಒಂದು ಭಾಗದ ಬಾಗಿಲು ತೆಗೆಸಿ ಅಲ್ಲಿಯೂ ಸೆಟ್‌ ಹಾಕುವ ತಯಾರಿ ನಡೆಯುತ್ತಿದೆ.

67

ಚಿತ್ರದ ಖಳನಾಯಕನ ಪಾತ್ರಕ್ಕಾಗಿ ಸಂಜಯ್‌ ದತ್‌ರನ್ನು ಸಂಪರ್ಕಿಸಿದ್ದು, ಮಾತುಕತೆ ಹಂತದಲ್ಲಿದೆ. ಸಂಜಯ್‌ ದತ್‌ ಜತೆಗೆ ಬೇರೆ ಬೇರೆ ಭಾಷೆಯ ದೊಡ್ಡ ಕಲಾವಿದರು ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ ಎಂದು ಪ್ರೇಮ್‌ ಹೇಳುತ್ತಾರೆ.

77

ನಾನು ಒಂದೇ ಭಾಷೆಗೆ ಅಂತ ಸಿನಿಮಾ ಮಾಡಲ್ಲ. ಈಗ ಸಿನಿಮಾಗಳ ಮಾರುಕಟ್ಟೆಚೆನ್ನಾಗಿದೆ. ಒಳ್ಳೆಯ ಕತೆ ಇದ್ದರೆ ಎಲ್ಲರು ನೋಡುತ್ತಾರೆ. ಹೀಗಾಗಿ ನಮ್ಮ ಚಿತ್ರ ಕೂಡ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಬರಲಿದೆ ಎಂದಿದ್ದಾರೆ ಪ್ರೇಮ್‌, ನಿರ್ದೇಶಕ.

Read more Photos on
click me!

Recommended Stories