ಮೊದಲ ಸಂಬಳದಲ್ಲಿ ಆತನಿಗಾಗಿ ಎದೆಯ ಮೇಲೆ ಟ್ಯಾಟೂ; ಸತ್ಯ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್

Published : Jan 03, 2024, 11:26 AM IST

ಜನ ಪದೇ ಪದೇ ಕದ್ದು ಮುಚ್ಚಿ ನೋಡುವ ಟ್ಯಾಟೂ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ ಯು- ಟರ್ನ್‌ ನಟಿ.

PREV
110
ಮೊದಲ ಸಂಬಳದಲ್ಲಿ ಆತನಿಗಾಗಿ ಎದೆಯ ಮೇಲೆ ಟ್ಯಾಟೂ; ಸತ್ಯ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿಬಿಟ್ಟಿದ್ದಾರೆ.

210

ತೆಲುಗು ನಟ ವಿಕ್ಟರಿ ವೆಂಕಟೇಶ್‌ಗೆ ಜೋಡಿಯಾಗಿ ನಟಿಸಿರುವ ಸೈಂಧವ್ ಸಿನಿಮಾದಲ್ಲಿ ಶ್ರದ್ಧಾ ನಟಿಸಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಶ್ರದ್ಧಾ ಸಖತ್ ಬ್ಯುಸಿಯಾಗಿದ್ದಾರೆ.

310

ಜನರು ಪದೇ ಪದೇ ಪ್ರಶ್ನೆ ಮಾಡುವ ಟ್ಯಾಟೂ ಬಗ್ಗೆ ಇತ್ತೀಚಿಗೆ ನಡೆದ ತೆಲುಗು ಸಂದರ್ಶನದಲ್ಲಿ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಟ್ಯಾಟೂ ಹಿಂದೆ ಸ್ಟೋರಿ ಇದೆ. 

410

ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಮ್ಯೂಸಿಕ್ ಬ್ಯಾಂಡ್‌ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗಾಗ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರಂತೆ.

510

'ಈ ಟ್ಯಾಟೂ ಹಾಕಿಸಿಕೊಂಡು ಹಲವು ವರ್ಷಗಳೇ ಆದವು. ನಾನು ಸಿನಿಮಾ ಜಗತ್ತಿಗೂ ಬರುವ ಮುನ್ನದಿನಗಳವು. ಆಗ ನಾನೊಂದು 'ದಿ ಬೀಟಲ್ಸ್' ಹೆಸರಿನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದೆ'

610

 'ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಹಾಗಾಗಿ ಬೀಟಲ್ಸ್ ಮ್ಯೂಸಿಕ್ ಬ್ಯಾಂಡ್ ಆಯೋಜಿಸುತ್ತಿದ್ದ ಸ್ಟೇಜ್ ಶೋಗಳಲ್ಲಿ ಆಗಾಗ ಹಾಡುವುದು ನನ್ನ ಅಭ್ಯಾಸ'

710

 'ಹಾಗೆ ಹಾಡಿದ ಕಾರಣಕ್ಕೆ ಮೊಟ್ಟ ಮೊದಲ ಬಾರಿಗೆ ದಿ ಬೀಟಲ್ಸ್ ಮ್ಯೂಸಿಕ್ ಟೀಮ್ ವತಿಯಿಂದ ನನಗೆ ಎರಡು ಸಾವಿರ ರೂಪಾಯಿ ಚೆಕ್ ಕೊಟ್ಟರು. ನನಗೆ ಆಗ ಟ್ಯಾಟೂ ಹುಚ್ಚು'

810

'ಮೊದಲ ಸಂಭಾವನೆ ಎನ್ನುವುದು ನನ್ನೊಳಗೆ ಸದಾ ಕಾಲ ಇರಬೇಕು ಅಂತಲೇ ಯೋಚಿಸುತ್ತಾ ಟ್ಯಾಟೋ ಹಾಕಿಸಿಕೊಳ್ಳಲು ಮುಂದಾದೆ. ಅದು ಸರಿ, ಅದು ಯಾವ ರೀತಿಯಲ್ಲಿರಬೇಕು ಎನ್ನುವುದು ನನಗೆ ಎದುರಾದ ಪ್ರಶ್ನೆ'

910

 'ಆಗ ನನಗೆ ಹೊಳೆದಿದ್ದು ಮ್ಯೂಜಿಕ್ ಮೇಲಿನ ಪ್ರೀತಿ ಮತ್ತು ಆಸಕ್ತಿ. ಆ ಟೀಮ್ ನೆನಪು ಸದಾ ಇರಬೇಕು, ಸಂಗೀತದ ಮೇಲಿನ ಪ್ರೀತಿಯೂ ಉಳಿಯಬೇಕು ಅಂತ ಯೋಚಿಸಿ,ಟ್ಯಾಟೂ ಹಾಕುವವನಿಗೆ ಹೇಳಿದಾಗ ಆತನ ಕುಂಚದಲ್ಲಿ ಅರಳಿದ್ದೇ ಈ ಚಿತ್ರ.' ಎಂದು ಹಲವು ವರ್ಷಗಳ ಹಿಂದಿನ ಸಂದರ್ಶನದಲ್ಲೂ ಹೇಳಿದ್ದಾರೆ. 

1010

ಬಿಟಲ್ ಮ್ಯೂಸಿಕ್ ಬ್ಯಾಂಡ್ ನನ್ನ ಕ್ರಶ್...ಆತನಿಗಾಗಿ ಈ ಟ್ಯಾಟೂ ಹಾಕಿಸಿಕೊಂಡಿರುವುದು. ಇಂಗ್ಲಿಷ್‌ನಲ್ಲಿ ಲವ್ ಅಂತ ಬರೆದಿದೆ...ಅದಕ್ಕೆ ಮ್ಯೂಚಿಕ್‌ ಲಿಂಕ್ ಕೊಡಲಾಗಿದೆ ಎಂದಿದ್ದಾರೆ ಶ್ರದ್ಧಾ. 

Read more Photos on
click me!

Recommended Stories