ಶೈನ್ ಶೆಟ್ಟಿ-ಅಂಕಿತಾ ಜಸ್ಟ್ ಮ್ಯಾರೀಡ್,ಶಾಕಿಂಗ್ ನ್ಯೂಸ್ ಕೊಟ್ಟರು ಬಿಗ್ ಬಾಸ್ ವಿನ್ನರ್?

Published : Sep 21, 2023, 03:28 PM IST

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್ ಇದೀಗ ಜಸ್ಟ್ ಮ್ಯಾರೀಡ್. ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟರು. ಏನದು ನೋಡೋಣ.   

PREV
17
ಶೈನ್ ಶೆಟ್ಟಿ-ಅಂಕಿತಾ  ಜಸ್ಟ್ ಮ್ಯಾರೀಡ್,ಶಾಕಿಂಗ್ ನ್ಯೂಸ್ ಕೊಟ್ಟರು ಬಿಗ್ ಬಾಸ್ ವಿನ್ನರ್?

ಬಿಗ್ ಬಾಸ್ ಕನ್ನಡ ಸೀಸನ್ 7 ವಿನ್ನರ್ ಆಗಿರುವ ಶೈನ್ ಶೆಟ್ಟಿ (Shine Shetty) ಮತ್ತು ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ಅಂಕಿತಾ ಅಮರ್ (Ankita Amar) ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದಾರೆ. ಇವರಿಬ್ಬರೀಗ ಜಸ್ಟ್ ಮ್ಯಾರೀಡ್. ಏನು ಹೇಳ್ತಿದ್ದಾರೆ ಎಂದು ಶಾಖ್ ಆಗ್ಬೇಡಿ… 
 

27

ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಇದೀಗ ಜಸ್ಟ್ ಮ್ಯಾರೀಡ್ (Just Married) ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಫೋಟೋ ಸದ್ಯ ವೈರಲ್ ಆಗುತ್ತಿದೆ. ಸಿನಿಮಾದ ಫಸ್ಟ್ ಲುಕ್ ಬಿಡುಯಾಗಿ ಸದ್ದು ಮಾಡುತ್ತಿದೆ. 
 

37

ಸ್ಯಾಂಡಲ್‌ವುಡ್‌ನ ಟಾಪ್‌ ಸಂಗೀತ ನಿರ್ದೇಶಕರಾದ ಅಜನೀಶ್‌ ಲೋಕನಾಥ್‌ (Ajaneesh Loknath) ಇದೀಗ ಸಿನಿಮಾ ನಿರ್ಮಾಣಕ್ಕೆ ಧುಮುಕಿದ್ದಾರೆ. ಜಸ್ಟ್ ಮ್ಯಾರೀಡ್ ಇವರ ಚೊಚ್ಚಲ ಚಿತ್ರವಾಗಿದ್ದು, ಇದೀಗ, ನಾಯಕ ಮತ್ತು ನಾಯಕಿಯನ್ನು ಪರಿಚಯಿಸಿದ್ದಾರೆ. 
 

47

ABBS ಸ್ಟುಡಿಯೋಸ್ ಸಂಸ್ಥೆಯ ಮೂಲಕ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.  ಸಿ.ಆರ್. ಬಾಬಿ ನಿರ್ಮಾಣದ ಜೊತೆಗೆ ಚಿತ್ರದ ನಿರ್ದೇಶನ ಕೂಡ ಮಾಡುತ್ತಿದ್ದಾರೆ.  
 

57

ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಂ ಗಣೇಶಾಯ ನಮಃ ಎಂಬ ಹಾಡನ್ನು ಚಿತ್ರ ತಂಡ ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಿದ್ದಾರೆ. ಶಶಿ ಕಾವೂರ್ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ‌.  ಡಾ. ಶಿವರಾಜ್ ಕುಮಾರ್ (Shivaraj Kumar) ಹಾಡು ಬಿಡುಗಡೆ ಮಾಡಿದ್ದಾರೆ. 
 

67

ಸಿನಿಮಾದ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಶೈನ್ ಶೆಟ್ಟಿ ಮತ್ತು ಅಂಕಿತ ಅಮರ್ ಜೊತೆ ಶ್ರುತಿ ಹರಿಹರನ್, ಅಚ್ಯುತಕುಮಾರ್, ಸಾಕ್ಷಿ ಅಗರವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಮೊದಲಾದ ನಟರು ನಟಿಸಲಿದ್ದಾರೆ.
 

77

ಜಸ್ಟ್ ಮ್ಯಾರೀಡ್ ಸಿನಿಮಾದ ಹೆಸರೇ ಸೂಚಿಸುವಂತೆ. ಇದೊಂದು ಪ್ರೇಮಕಥೆಯಾಗಿದ್ದು (love story), ಕ್ಲಾಸ್, ಮಾಸ್ ಎರಡೂ ರೀತಿ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ ಎನ್ನುತ್ತಿದ್ದಾರೆ ನಿರ್ದೇಶಕರು. ಅಂಕಿತಾ, ಶೈನ್ ಹೊಸ ಸಿನಿಮಾಗೆ ಅಭಿಮಾನಿಗಳು, ಸಿನಿಮಾ ರಂಗದ ಸ್ನೇಹಿತರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories