ಸ್ಯಾಂಡಲ್‌ವುಡ್ ಸಿನಿ ತಾರೆಯರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು!

Published : Sep 20, 2023, 11:17 AM IST

ದೇಶಾದ್ಯಂತ ಜನರು ಸಡಗರ ಸಂಭ್ರಮದಿಂದ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ. ನಿಮ್ಮ ನೆಚ್ಚಿನ ಸಿನಿಮಾ ತಾರೆಯರ ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ ಹೇಗಿತ್ತು ಇಲ್ಲಿದೆ ನೋಡಿ ಫೋಟೋಸ್…   

PREV
17
ಸ್ಯಾಂಡಲ್‌ವುಡ್ ಸಿನಿ ತಾರೆಯರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು!

ವಿನೋದ್ ಪ್ರಭಾಕರ್  (Vinod Prabhakar)
ನಟ ವಿನೋದ್ ಪ್ರಭಾಕರ್ ಮತ್ತು ಪತ್ನಿ ನಿಶಾ ಈ ಭಾರಿ ಸಂಭ್ರಮದಿಂದ ಗಣೇಶೋತ್ಸವ ಆಚರಣೆ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೊ ವೈರಲ್ ಆಗುತ್ತಿದೆ. 

27

ಅನಿರುದ್ಧ್ ದಂಪತಿ (Anirudh Jatkar)
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಜನಮನ ಗೆದ್ದ ನಟ ಅನಿರುದ್ಧ್  ಮತ್ತು ಕೀರ್ತಿ ವಿಷ್ಣುವರ್ಧನ್ ದಂಪತಿಗಳು, ತಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜಿಸಿದರು. ಗಣೇಶನ ಜೊತೆಗಿನ ಫೋಟೋ ಮತ್ತು ವಿಷ್ಣುವರ್ಧನ್ ಫೋಟೋದ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

37

ಉಪೇಂದ್ರ -ಪ್ರಿಯಾಂಕ (Upendra and Priyanka)
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿ ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಹಬ್ಬವನ್ನು ಇಬ್ಬರೂ ಜೊತೆ ಸೇರಿ ಸಡಗರದಿಂದ ಆಚರಣೆ ಮಾಡಿದ್ದಾರೆ. 

47

ಅಮೂಲ್ಯ ಜಗದೀಶ್ (Amulya Jagadeesh)
ಗೋಲ್ಡನ್ ಕ್ವೀನ್ ಎಂದೇ ಖ್ಯಾತರಾಗಿರುವ ಅಮೂಲ್ಯ ತಮ್ಮ ಪತಿ ಜಗದೀಶ್ ಮತ್ತು ಇಬ್ಬರು ಮುದ್ದಾದ ಮಕ್ಕಳ ಜೊತೆಗೆ ಗಣೇಶೋತ್ಸವವನ್ನು ಆದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

57

ಹರಿಪ್ರಿಯಾ - ವಷಿಷ್ಠ ಸಿಂಹ (Haripriya and Vashistha)
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟ ವಷಿಷ್ಠ ಸಿಂಹ ದಂಪತಿಗಳಿಗೆ ಮದುವೆಯಾದ ಬಳಿಕ ಇದೀಗ ಮೊದಲನೆಯ ಗಣೇಶೋತ್ಸವವಾಗಿದೆ. ಇಬ್ಬರು ಜೊತೆಯಾಗಿ ತಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸಿ, ಗೌರಿ, ಗಣೇಶ ಹಬ್ಬವನ್ನು ಆಚರಿಸಿದ್ದಾರೆ. 

67

ನಿರಂಜನ್ ದೇಶ್ ಪಾಂಡೆ (Niranjan Deshpande)
ನಿರೂಪಕ, ನಟನಾಗಿ ಗುರುತಿಸಿಕೊಂಡಿರುವ ನಿರಂಜನ್ ದೇಶ್ ಪಾಂಡೆ ಮತ್ತು ಪತ್ನಿ ಯಶಸ್ವಿನಿ ದೇಶ್ ಪಾಂಡೆ, ತಮ್ಮ ಮನೆಗೆ ಗೌರಿ ಮತ್ತು ಗಣೇಶನನ್ನು ಸ್ವಾಗತಿಸಿ, ಹಬ್ಬವನ್ನು ಸಂಭ್ರಮವಾಗಿ ಆಚರಿಸಿದ್ದಾರೆ. 
 

77

ಕುಮಾರ್ ಬಂಗಾರಪ್ಪ (Kumar Bangarappa)
ಕನ್ನಡ ಸಿನಿಮಾದಲ್ಲಿ ಮತ್ತು ರಾಜಕೀಯದಲ್ಲಿ ಮಿಂಚಿದ ನಟ ಕುಮಾರ್ ಬಂಗಾರಪ್ಪ ತಮ್ಮ ಮನೆಗೆ ಗಣೇಶನನ್ನು ಕರೆತರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ ನೀಡಿದ್ದಾರೆ. ಪತ್ನಿ ಗಣಪತಿಗೆ ಪೂಜೆ ಮಾಡಿ, ಮನೆಯೊಳಗೆ ಕರೆತರುವ ಫೋಟೋಗಳು ಇವೆ. 
 

Read more Photos on
click me!

Recommended Stories