ಪುನೀತ್ ರಾಜ್‌ಕುಮಾರ್, ದೈವನರ್ತಕರಿಗೆ ಸೈಮಾ ಪ್ರಶಸ್ತಿ ಅರ್ಪಿಸಿದ ರಿಷಭ್‌: ವೈಟ್ & ವೈಟ್ ಧಿರಿಸಿನಲ್ಲಿ ಮಿಂಚಿದ ಲೀಲಾ

Published : Sep 20, 2023, 09:10 AM ISTUpdated : Sep 20, 2023, 10:45 AM IST

ಕಾಂತಾರ ಸಿನಿಮಾಗೆ 10 ಸೈಮಾ ಪ್ರಶಸ್ತಿ ಬಂದಿದ್ದು, ಈ ಪ್ರಶಸ್ತಿಗಳನ್ನು ನಟ ರಿಷಭ್‌ ಶೆಟ್ಟಿ ದೈವ ನರ್ತಕರು, ಅಪ್ಪು ಹಾಗೂ ಕನ್ನಡಿಗರಿಗೆ ಅರ್ಪಿಸಿದ್ದು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಈ ಸಮಾರಂಭದಲ್ಲಿ ಕಾಂತಾರ ಚೆಲುವೆ ಲೀಲಾ ಶ್ವೇತ ವರ್ಣದ ಧಿರಿಸಿನಲ್ಲಿ ಮಿಂಚಿದ್ದು, ಎಲ್ಲರ ಗಮನ ಸೆಳೆದರು. ಅವರ ಸುಂದರ ಫೋಟೋಗಳು ಇಲ್ಲಿವೆ ನೋಡಿ..  

PREV
111
ಪುನೀತ್ ರಾಜ್‌ಕುಮಾರ್, ದೈವನರ್ತಕರಿಗೆ ಸೈಮಾ ಪ್ರಶಸ್ತಿ ಅರ್ಪಿಸಿದ ರಿಷಭ್‌: ವೈಟ್ & ವೈಟ್ ಧಿರಿಸಿನಲ್ಲಿ ಮಿಂಚಿದ ಲೀಲಾ
Saptami Gowda

ರಿಷಭ್ ಶೆಟ್ಟಿ, ಸಪ್ತಮಿ ಗೌಡ ನಟನೆಯ ಬ್ಲಾಕ್‌ಬಸ್ಟರ್ ಕಾಂತಾರ ಸಿನಿಮಾ ಸೈಮಾದಲ್ಲಿ 10 ಪ್ರಶಸ್ತಿಗಳನ್ನು ಬಾಚಿಕೊಂಡು ಸಾಧನೆ ಮಾಡಿದ್ದು, ಇದೇ ಖುಷಿಯಲ್ಲಿರುವ ನಟಿ ಸಪ್ತಮಿಗೌಡ  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

211
Saptami Gowda

ಸೈಮಾದಲ್ಲಿ ತಾವು ಧರಿಸಿದ ಶ್ವೇತ ವರ್ಣದ ಧಿರಿಸಿನ ಹಲವು ಫೋಟೋಗಳನ್ನು ಹಂಚಿಕೊಂಡಿರುವ ಸಪ್ತಮಿ ಗೌಡ ವೈಟ್ & ವೈಟ್ ಲಾಂಗ್ ಗವನ್‌ನಲ್ಲಿ ಕಂಗೊಳಿಸುತ್ತಿದ್ದಾರೆ.

311
Saptami Gowda

ಸೈಮಾದಲ್ಲಿ ಅತ್ಯುತ್ತಮ ನಾಯಕಿ ಪ್ರಶಸ್ತಿ ಕಾಂತಾರ ಚೆಲುವೆಯನ್ನು ಅರಸಿ ಬಂದಿದೆ. ಈ ಸಮಾರಂಭದಲ್ಲಿ ಶ್ವೇತವರ್ಣದ ಲಾಂಗ್ ಡ್ರೆಸ್‌ನಲ್ಲಿ ಮಿಂಚಿದ ಸಪ್ತಮಿ ಈ ಡ್ರೆಸ್ ಡಿಸೈನ್ ಮಾಡಿದ ಡಿಸೈನರ್‌ಗಳಿಗೆ ಧನ್ಯವಾದ ತಿಳಿಸಿದ್ದಾರೆ. 

411
Saptami Gowda

ಇದರ ಜೊತೆ ಕಾಂತಾರ ನಟ ನಿರ್ದೇಶಕ ರಿಷಭ್ ಶೆಟ್ಟಿ ನಿರ್ಮಾಪಕರು ಹಾಗೂ ಇಡೀ ಸಿನಿಮಾ ತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ ಲೀಲಾ. 

511
Saptami Gowda


ಈ ಫೋಟೋಗಳಲ್ಲಿ ಕಾಂತಾರ ಚೆಲುವೆಯ ಮೂಗುತಿ ಮಾಯವಾಗಿದ್ದು, ಮೂಗುತ್ತಿ ಇದ್ದಿದ್ದರೆ ಇನ್ನು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ ಅಭಿಮಾನಿಗಳು.

611
Saptami Gowda

ಕಾಂತಾರ ಸಿನಿಮಾ ನಂತರ ಫ್ಯಾನ್ ಇಂಡಿಯಾ ನಟಿಯಾಗಿ ಸಪ್ತಮಿಗೌಡ ಮಿಂಚ್ತಾ ಇದ್ದು, ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಕಾಶ್ಮೀರ್ ಫೈಲ್ಸ್‌ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಮಾಣದ ದಿ ವ್ಯಾಕ್ಸಿನ್ ವಾರ್‌ನಲ್ಲಿಯೂ ಅವರು ನಟಿಸಿದ್ದು, ಈ ಮೂಲಕ ಬಾಲಿವುಡ್‌ಗೂ ಎಂಟ್ರಿಕೊಟ್ಟಿದ್ದಾರೆ ಲೀಲಾ.

711
Saptami Gowda

ಇದರ ಜೊತೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾದಲ್ಲೂ ಯುವ ರಾಜ್‌ಕುಮಾರ್‌ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಭಿಷೇಕ್ ಅಂಬರೀಷ್ ನಟನೆಯ ಕಾಳಿ ಸಿನಿಮಾದಲ್ಲೂ ಸಪ್ತಮಿ ನಟಿಸುತ್ತಿದ್ದಾರೆ. 

811
Saptami Gowda

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟಿ ಆ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ನಟಿಸಿದ್ದರು. 

911
rishabh shetty

ದುಬೈನ ವರ್ಲ್ಡ್ ಟ್ರೆಡ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 15 ರಂದು ಈ ಸಮಾರಂಭ ನಡೆದಿದೆ. ಈ ಸಮಾರಂಭದಲ್ಲಿ ಕಾಂತಾರ ನಟ ರಿಷಭ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಕೂಡ ಭಾಗಿಯಾಗಿದ್ದರು.

1011
rishabh shetty

ರಿಷಭ್ ಶೆಟ್ಟಿ ಕೂಡ ಫೇಸ್‌ಬುಕ್‌ನಲ್ಲಿ ಈ ಸಮಾರಂಭದ ಫೋಟೋ ಹಂಚಿಕೊಂಡಿದ್ದು, ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ನಂಬಿದ ದೈವಗಳಿಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ. 

1111
rishabh shetty

ಪ್ರಶಸ್ತಿಯಿಂದ ಮನದುಂಬಿ ಬಂದಿದೆ. ಜವಾಬ್ದಾರಿ ಹೆಚ್ಚಿಸಿದೆ ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ  ಸಮರ್ಪಣೆಮಾಡುವೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಿಷಭ್ ಶೆಟ್ಟಿ

Read more Photos on
click me!

Recommended Stories