ಅಂದು ಸೀರಿಯಲ್ ನಟಿಯರಾಗಿದ್ದ ಇವ್ರು ಈಗ ಟಾಪ್ ಸ್ಯಾಂಡಲ್ ವುಡ್ ಹೀರೋಯಿನ್ಸ್

Published : Mar 06, 2024, 12:55 PM IST

ಕನ್ನಡ ಚಿತ್ರರಂಗದಲ್ಲಿರುವ ಅದೇಷ್ಟೋ ನಟ -ನಟಿಯರು ತಮ್ಮ ಜೀವನವನ್ನು ಆರಂಭಿಸಿದ್ದೇ ಕಿರುತೆರೆ ಮೂಲಕ. ಇಂದು ನಾವು ಕಿರುತೆರೆ ಮೂಲಕ ನಟನೆ ಜರ್ನಿ ಆರಂಭಿಸಿ ಸಿನಿಮಾದಲ್ಲಿ ಮಿಂಚಿದ ನಟಿಯರ ಬಗ್ಗೆ ತಿಳಿಯೋಣ.   

PREV
18
ಅಂದು ಸೀರಿಯಲ್ ನಟಿಯರಾಗಿದ್ದ ಇವ್ರು ಈಗ ಟಾಪ್ ಸ್ಯಾಂಡಲ್ ವುಡ್ ಹೀರೋಯಿನ್ಸ್

ನಮ್ಮ ಸಿನಿಮಾದಲ್ಲಿ ಎಷ್ಟೊಂದು ಜನಪ್ರಿಯ ನಟ -ನಟಿಯರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಸಿನಿಮಾ ಬ್ಯಾಕ್ ಗ್ರೌಂಡ್ ನಿಂದ ಬಂದವರಾಗಿದ್ರೆ, ಇನ್ನೂ ಹಲವರು ಸೀರಿಯಲ್ ನಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಗಳಿಸಿ, ಬಳಿಕ ಸಿನಿಮಾ (Sandalwood) ರಂಗಕ್ಕೆ ಎಂಟ್ರಿ ಕೊಟ್ಟು ಹಿಟ್ ಆದ ನಟರೂ ಹಲವರಿದ್ದಾರೆ. ಅವರಲ್ಲಿ ಜನಪ್ರಿಯತೆ ಗಳಿಸಿದ ಹೀರೋಯಿನ್ ಗಳು ಯಾರ್ಯಾರು ನೋಡೋಣ. 
 

28

ರಾಧಿಕಾ ಪಂಡಿತ್: ಸ್ಯಾಂಡಲ್ ವುಡ್ ನ ಟಾಪ್ ನಟಿಯರಲ್ಲಿ ಒಬ್ಬರಾದ ರಾಧಿಕಾ ಪಂಡಿತ್ (Radhika Pandit) ನಂದಗೋಕುಲ ಸೀರಿಯಲ್ ಮೂಲಕ ತಮ್ಮ ನಟನಾ ಜರ್ನಿ ಆರಂಭಿಸಿದರು, ಬಳಿಕ ಮೊಗ್ಗಿನ ಮನಸು ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.. 
 

38

ರಚಿತಾ ರಾಮ್ : ಸ್ಯಾಂಡಲ್ ವುಡ್  ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅರಸಿ ಸೀರಿಯಲ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು, ಬಳಿಕ ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಜನಪ್ರಿಯತೆ ಗಳಿಸಿದ್ರು. 
 

48

ಶ್ವೇತಾ ಶ್ರೀವಾತ್ಸವ್ : ಶ್ವೇತಾ ಶ್ರೀವಾತ್ಸವ್ (  Shwetha Srivatsav) ಅವರು ಸಹ ಸೀರಿಯಲ್ ಮೂಲಕವೇ ನಟನೆಗೆ ಎಂಟ್ರಿ ಕೊಟ್ಟಿದ್ದು, ಇವರು ಜ್ವಾಲಾಮುಖಿ ಸೀರಿಯಲ್ ಮೂಲಕ ತಮ್ಮ ನಟನಾ ಜರ್ನಿ ಆರಂಭಿಸಿದ್ದರು,  ಸಿಂಪಲ್ ಆಗಿ ಒಂದು ಲವ್ ಸ್ಟೋರಿಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ಮನೆಮಾತಾದರು. 

58

ಅದಿತಿ ಪ್ರಭುದೇವ : ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ (Adithi Prabhudeva) ನಾಗ ಕನ್ನಿಕೆ ಮೂಲಕ ಜನಪ್ರಿಯತೆ ಗಳಿಸಿದ್ರೂ ಅವರು ಮೊದಲ ಬಾರಿಗೆ ಗುಂಡ್ಯಾನ ಹೆಂಡತಿ ಸೀರಿಯಲ್ ನಲ್ಲಿ ನಟಿಸಿದ್ದರು, ಧೈರ್ಯಂ ಅವರ ಮೊದಲ ಸಿನಿಮಾ. 
 

68

ಸಂಗೀತಾ ಶೃಂಗೇರಿ : ಸದ್ಯ ಬಿಗ್ ಬಾಸ್ ಸೀಸನ್ 10 ರ ಮೂಲಕ ಭಾರಿ ಸದ್ದು ಮಾಡಿದ್ದ ನಟಿ ಸಂಗೀತಾ ಶೃಂಗೇರಿ (Sangeetha Sringeri) ತಮ್ಮ ನಟನೆ ಆರಂಭಿಸಿದ್ದೇ ಹರಹರ ಮಹಾದೇವ ಸೀರಿಯಲ್ ಮೂಲಕ, ಬಳಿಕ ಕರ್ಮ ಸಿನಿಮಾ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ರು. ಚಾರ್ಲಿ 777 ರಕ್ಷಿತ್ ಶೆಟ್ಟಿ ಜೊತೆಯೂ ನಟಿಸಿದ್ದಾರೆ.

78

ಮಯೂರಿ : ಅಶ್ವಿನಿ ನಕ್ಷತ್ರ  ಸೀರಿಯಲ್ ನಲ್ಲಿ ಅಶ್ವಿನಿಯಾಗಿ ಅಪಾರ ಜನಮೆಚ್ಚುಗೆ ಪಡೆದ ನಟಿ ಮಯೂರಿ (Mayuri), ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟರು. 
 

88

ನೀತಾ ಅಶೋಕ್ : ಯಶೋಧರ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಟಿ ನೀತಾ ಅಶೋಕ್ (Neetha Ashok) ಬಳಿಕ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories