ವೈರಲ್ ಆಗ್ತಿದೆ ರಕ್ಷಿತ್ ಶೆಟ್ಟಿ ಮುದ್ದಾದ. ಅಣ್ಣ-ಅತ್ತಿಗೆ ಮಕ್ಕಳ ಫ್ಯಾಮಿಲಿ ಫೋಟೋ

First Published | Mar 5, 2024, 11:03 AM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಫ್ಯಾಮಿಲಿ ಫೋಟೊ ಸದ್ಯ ವೈರಲ್ ಆಗುತ್ತಿದೆ. ತಂದೆ, ತಾಯಿ, ಸಹೋದರ, ಸಹೋದರಿ ಜೊತೆಗಿನ ತುಂಬು ಕುಟುಂಬದ ಫೋಟೋ ನೋಡಿ. 
 

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith Shetty) ಸದ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿ ಪಾರ್ಟ್ ಯಶಸ್ಸಿನ ನಂತರ ಸದ್ಯ ರಿಚರ್ಡ್ ಆಂಟನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 
 

ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳದೇ ತಮಗೆ ಹಿಡಿಸಿದ ಪಾತ್ರಗಳನ್ನು ಮಾತ್ರ ಒಪ್ಪುತ್ತಾ, ನಿರ್ದೇಶನದ ಕಡೆಗೆ ಹೆಚ್ಚು ಒಲವು ತೋರಿಸುವ ಮೂಲಕ ಕಥೆಯ ಸಂಪುರ್ಣ ಆಳಕ್ಕಿಳಿದು ಮೂರು ವರ್ಷಕ್ಕೆ ಒಂದು ಸಿನಿಮಾ ತೆಗೆಯುವಂತಹ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ. 
 

Tap to resize

777 ಚಾರ್ಲಿ (777 Charlie) ಸಿನಿಮಾದಲ್ಲಿನ ಅದ್ಭುತ ನಟನೆ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡ ರಕ್ಷಿತ್ ಶೆಟ್ಟಿ, ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಭಗ್ನ ಪ್ರೇಮಿಯಾಗಿ, ಪ್ರೀತಿ ಅಂದ್ರೆ ಏನು ಅನ್ನೋದನ್ನು ತೋರಿಸಿದ ಮನುವಾಗಿ ಗಮನ ಸೆಳೆದರು. 
 

ಕಳೆದ ಹಲವು ವರ್ಷಗಳಿಂದ ಉಳಿದವರು ಕಂಡಂತೆ ಸಿನಿಮಾದ ಸೀಕ್ವಲ್ ಆಗಿರುವ ರಿಚರ್ಡ್ ಆಂಟನಿ - ಲಾರ್ಡ್ ಆಫ್ ಸೀ ಸಿನಿಮಾದಲ್ಲೆ ಬ್ಯುಸಿಯಾಗಿದ್ದಾರೆ ರಕ್ಷಿತ್. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಭಾರಿ ಸದ್ದು ಮಾಡಿದ್ದು, ಸಿನಿಮಾ ಈ ವರ್ಷ ಬಿಡುಗಡೆಯಾಗೋದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ. 
 

ಈವಾಗ ಸದ್ಯಕ್ಕೆ ರಕ್ಷಿತ್ ಶೆಟ್ಟಿಯವರ ಫ್ಯಾಮಿಲಿ ಫೋಟೋಗಳು (family photo) ಒಂದಷ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಕ್ಷಿತ್ ಮುದ್ದಾದ ಫ್ಯಾಮಿಲಿ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆ ಎರಿತಿದ್ದಾರೆ. 
 

ರಕ್ಷಿತ್ ಶೆಟ್ಟಿಯವರು ತಮ್ಮ ತಂದೆ ಶ್ರೀಧರ್ ಶೆಟ್ಟಿ. ತಾಯಿ ರಂಜಿನಿ ಶೆಟ್ಟಿ, ಸಹೋದರ, ಸಹೋದರಿ, ಜೊತೆಗೆ ಅವರ ಮಕ್ಕಳ ಜೊತೆಗೆ ನಿಂತಿರುವ ಸುಂದರವಾದ ಫೋಟೋಗಳನ್ನು ನೀವು ಕಾಣಬಹುದು. 
 

ಉಡುಪಿಯಲ್ಲಿ ಹುಟ್ಟಿ ಬೆಳೆದು, ಇಂಜಿನಿಯರಿಂಗ್ (engineering) ಪದವಿ ಪಡೆದಿರುವ ರಕ್ಷಿತ್ ಶೆಟ್ಟಿ ಸಿನಿಮಾ ಕಡೆಗಿನ ಒಲವಿನಿಂದ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು. ಜೊತೆಗೆ ನಟನೆಗೂ ಸೈ, ನಿರ್ದೇಶನಕ್ಕೂ ಸೈ ಎನಿಸಿಕೊಂಡಿರುವ ನಟ, ನಿರ್ದೇಶಕ, ನಿರ್ಮಾಪಕ, ಪ್ರೆಸೆಂಟರ್, ಲಿರಿಸಿಸ್ಟ್ ಕೂಡ ಹೌದು. 
 

Latest Videos

click me!