ಕೊಲ್ಕತ್ತಾ: ಕಾಳಿಘಾಟ್ ಶಕ್ತಿಪೀಠದಲ್ಲಿ ಜಪ ಮಾಲೆ ಹಿಡಿದು, ಧ್ಯಾನಕ್ಕೆ ಕುಳಿತ ಪುಟ್ಟ ಗೌರಿ

Published : Aug 10, 2024, 03:54 PM IST

ಗೌರಿ ಸಿನಿಮಾದ ಪ್ರಚಾರದಲ್ಲೇ ಇಷ್ಟು ದಿನ ಬ್ಯುಸಿಯಾಗಿದ್ದ ನಟಿ ಸಾನ್ಯಾ ಅಯ್ಯರ್ ಇದೀಗ ಕೊಲ್ಕತ್ತಾದ ಕಾಳಿ ಮಂದಿರಕ್ಕೆ ಭೇಟಿ ನೀಡಿದ್ದಾರೆ.   

PREV
16
ಕೊಲ್ಕತ್ತಾ: ಕಾಳಿಘಾಟ್ ಶಕ್ತಿಪೀಠದಲ್ಲಿ ಜಪ ಮಾಲೆ ಹಿಡಿದು, ಧ್ಯಾನಕ್ಕೆ ಕುಳಿತ ಪುಟ್ಟ ಗೌರಿ

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲನಟಿಯಾಗಿ ಗುರುತಿಸಿ, ನಂತರ ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದು,  ಇದೀಗ ಗೌರಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಬೆಡಗಿ ಸಾನ್ಯಾ ಅಯ್ಯರ್ (Saanya Iyer). 
 

26

ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಗೌರಿ ಸಿನಿಮಾಕ್ಕೆ ಅವರ ಪುತ್ರ ಸಮರ್ಜೀತ್ ಲಂಕೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಜನರಿಗೆ ಇಷ್ಟವಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೈಲರ್ ಲಾಂಚ್ ಕೂಡ ಭರ್ಜರಿಯಾಗಿ ನಡೆದಿತ್ತು. 
 

36

ಇಷ್ಟು ದಿನಗಳ ಕಾಲ ನಟಿ ಸಾನ್ಯಾ ಅಯ್ಯರ್ ತಮ್ಮ ಗೌರಿ ಸಿನಿಮಾದ ಪ್ರಚಾರ ಕಾರ್ಯದಲ್ಲೇ ಮುಳುಗಿದ್ರು, ತುಂಬಾನೆ ಬೋಲ್ಡ್ ಆಗಿರುವ ಡ್ರೆಸ್ ತೊಟ್ಟು, ಸಿನಿಮಾ ಪ್ರೊಮೋಷನ್‌ನಲ್ಲಿ ಭಾಗಿಯಾಗಿದ್ದವರು ಇದೀಗ ಇದ್ದಕ್ಕಿದ್ದಂತೆ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ. 
 

46

ತಮ್ಮ ಕುಟುಂಬದ ಜೊತೆ ಹೆಚ್ಚಾಗಿ ದೇಶವನ್ನು ಸುತ್ತುತ್ತಾ, ದೇಗುಲಗಳ ದರ್ಶನ ಮಾಡುತ್ತಲೇ ಇರುವ ಸಾನ್ಯಾ ಅಯ್ಯರ್, ಈ ಬಾರಿ ಕೋಲ್ಕತ್ತಾದಲ್ಲಿರುವ ಜನಪ್ರಿಯ ಶಕ್ತಿಪೀಠವಾಗಿರುವ ಕಾಳಿ ಘಾಟ್‌ಗೆ (Kali Ghat, Kolkata) ಅಮ್ಮ, ಚಿಕ್ಕಮ್ಮ, ಅಜ್ಜಿ ಜೊತೆ ತೆರಳಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

56

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಂಡಿರುವ ನಟಿ ಸಾನ್ಯಾ ಹುಟ್ಟು ಹಬ್ಬದ ಶುಭಾಶಯಗಳು ಪಾಟಿ, ನಿನ್ನಿಂದಲೇ ಎಲ್ಲಾ, ನೀನಿಲ್ಲದೆ ನಾವೆನೇನೂ ಅಲ್ಲ ಎನ್ನುವ ಸಾಲುಗಳನ್ನು ಹಾಕಿ, ಅಜ್ಜಿಯ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. 
 

66

ಹಳದಿ ಬಣ್ಣದ ಸಲ್ವಾರ್ ಸೂಟ್ ಧರಿಸಿರುವ ಸಾನ್ಯಾ, ಹಣೆ ಮೇಲೆ ಕೆಂಪು ಪಟ್ಟಿ ಧರಿಸಿದ್ದು, ಕುತ್ತಿಗೆಯಲ್ಲಿ ಗುಲಾಬಿ ಹೂವಿನ ಹಾರ ಧರಿಸಿದ್ದಾರೆ, ಕೈಯಲ್ಲಿ ಜಪಮಾಲೆ ಹಿಡಿದು, ಕಾಳಿ ದೇವಿಯ ಸನ್ನಿಧಿಯಲ್ಲಿ ಧ್ಯಾನ (meditation) ನಿರತರಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
 

Read more Photos on
click me!

Recommended Stories